Tuesday, June 24, 2008

ಆಲಿಕಲ್ಲು ಮಳೆ(ಭಾಗ-ಆರು)

ಲೀ ಅಂಗಳದಲ್ಲಿ ಸೈಕಲ್ ಹೊಡೆಯುತ್ತಿದ್ದ. ನಾನು ಟಿ.ವಿ ಮುಂದೆ ಕೂತೆ ಛಾನಲ್ ಗಳನ್ನು ಸರ್ಫ್ ಮಾಡುತ್ತಾ ಲೋಕಲ್ ನ್ಯೂಸ್ ಛಾನಲ್ ನಲ್ಲಿ thunderstorm bulletin ಕೇಳಿಬಂತು ಯಾವುದಕ್ಕೂ ಹುಷಾರಾಗಿರ ಬೇಕೆಂದು ಹೊರಗಡೆ ಆಡುತ್ತಿದ್ದ ಲೀಯನ್ನು ಒಳಕರೆದೆ ಅವನು ಬಂದರೆ ತಾನೇ..?
ನಾನೇ ಎದ್ದು ಅಂಗಳಕ್ಕೆ ಹೋಗಿ "ಲೀ ಇಟ್ಸ್ ವೇಪಾಸ್ಟ್ ಯುವರ್ ಸ್ಲೀಪಿಂಗ್ ಟೈಮ್ ಒಳಗೆ ಬಾ.." ಅಂತ ಗದರಿ ಅವನನ್ನು ಒಳ ಕರೆತರುವಾಗ ಯಾಕೋ ಗಾಳಿ warm ಅಂಡ್ moist ಆಗಿ ಇದೆ ಅನ್ನಿಸಿತು


ನಮ್ಮಲ್ಲಿ ಬೇಕಾದಷ್ಟು sprimg strom ಗಳು ಬಯಲು ಪ್ರದೇಶದಲ್ಲಿ ಬರುತ್ತಲೇ ಇರುತ್ತವೆ.ಸೋ ಅವುಗಳಿಗೆ ಹೆದರಿಕೊಂಡು ಪ್ರಯೋಜನವಿಲ್ಲ. practical ಆಗಿ ಯೋಚಿಸಿ ಕಾರ್ಯಪ್ರವೃತ್ತರಾಗಬೇಕು ಅಷ್ಟೇ
ಅಪ್ಪ ಅಷ್ಟರಲ್ಲಿ ಕಾಲ್ ಮಾಡಿದರು tornado ಅನ್ನು spot ಮಾಡಿದಾರೆ ಆದ್ರೆ ಅದು ಈಸ್ಟ್ ಕಡೆ ನಮ್ಮಿಂದ ದೂರಕ್ಕೆ ಹೋಗ್ತಿದೆ ಅಂತ ಹೇಳಿದರು ಜೊತೆಗೆ ಹುಷಾರು...ಅಂದರು ಅಮ್ಮ "ನೀನು ಜೇ ನ ಯಾಕೆ ಸ್ಲೀಪ್ ಓವರ್ ಗೆ ಕಳಿಸಿದ್ದು" ಅಂತ ಟೆನ್ಶನ್ ಮಾಡಿಕೊಂಡರು...ನಾನು ಜೇಗೆ ಕಾಲ್ ಮಾಡೋಣವೇ ಅಂತ ಯೋಚಿಸುತ್ತಿರುವಾಗಲೇ ನಮ್ಮ ಫೋನ್ ಡೆಡ್ ಆಯಿತು. ನಾನು ಟಿ.ವಿ ಕಡೇಗೆ ಓಡಿದೆ ಅದಾಗಲೇ ಕಣ್ಣು ಮುಚ್ಚಿತ್ತು ಬಹುಶಃ ಸೆಟಲೈಟ್ ಸಂಪರ್ಕ ಕಡಿದಿರಬೇಕು.ಸೆಲ್ ಪೋನ್ ನೋ ಸಿಗ್ನಲ್ ಅಂದು ಬಿಟ್ಟಿತು ಇನ್ನು ಜೇ ಯನ್ನು ಕರೆಯುವ ಯಾವುದೇ ಸಾಧ್ಯತೆ ಇರಲಿಲ್ಲ ಅವನು ದೊಡ್ಡ ಹುಡುಗ ,ಬುದ್ದಿವಂತ ಹುಷಾರಾಗಿರುವಂತೆ ದೇವರು ಅವನಿಗೆ ಬುದ್ದಿ ಕೊಡಲಪ್ಪಾ ಅಂತ ಪ್ರೇ ಮಾಡಿಕೊಂಡೆ


ನಮ್ಮನೆಯಲ್ಲಿ ಸಾಮಾನ್ಯವಾಗಿ ಇಲ್ಲಿ ಎಲ್ಲರ ಮನೆಯಲ್ಲೂ ಇರುವಂತೆ ಬೇಸ್ ಮೆಂಟ್ ಇಲ್ಲ ಹಾಗಾಗಿ ನಾವು ಕಿಟಕಿ ಇಲ್ಲವೆಂದು ಅಷ್ಟಾಗಿ ಉಪಯೋಗಿಸದ ಬಾತ್ ರೂಮ್ ಸೇಫೆಸ್ಟ್ ಜಾಗವೆಂದು ನನಗನ್ನಿಸಿತು ಲೀಗೆ ಬೆಚ್ಚನೆ ಶರ್ಟ್ ಹಾಕಿಕೊಳ್ಳುವಂತೆ ಹೇಳಿದೆ ನಾನು ಇನ್ನೊಂದು ಟಾಪ್ ಹಾಕಿಕೊಂಡೆ. ಅದೇ ಗಳಿಗೆ ಎಲೆಕ್ಟ್ರಸಿಟಿ ಹೋಗಿ ಗಪ್ಪನೆ ಕತ್ತಲೆ ಆವರಿಸಿತು ಮನೆಯಲ್ಲಿದ್ದ ಫ್ಲ್ಯಾಷ್ ಲೈಟ್ ತೊಗೊಂಡು ಶೂಸ್ ಹಾಕಿಕೊಂಡೆ ಲೀ ಕೂಡಾ ಶೂಸ್ ಹಾಕಿಕೊಂಡ

ಹೊರಗಡೆ ಹುಚ್ಚುಚ್ಚಾಗಿ ಆಲಿಕಲ್ಲು ಸುರಿಯುತ್ತಿತ್ತು ನಮ್ಮ roof ಗೆ ಸಕತ್ತು ಡ್ಯಾಮೇಜಾಗುತ್ತೆ ಒಂದಿಷ್ಟು ದುಡ್ಡು ಖರ್ಚಾಗುತ್ತೆ ರಿಪೇರಿ ಮಾಡಿಸುವುದು ಅಂತ ಲೆಕ್ಕ ಹಾಕುತ್ತಾ ನನ್ನ ಹ್ಯಾಂಡ್ ಬ್ಯಾಗ್ ನಲ್ಲಿ ನನ್ನ ಹತ್ತಿರ ಇದ್ದ ಕ್ಯಾಶ್ ಇಟ್ಟುಕೊಂಡೆ ಜೊತೆಗೆ ಸೆಲ್ ಫೋನ್ ಇಟ್ಟುಕೊಂಡು ಕುತ್ತಿಗೆಗೆ ಬ್ಯಾಗ್ ನೇತಾಕಿಕೊಂಡು ಬಾತ್ ರೂಮ್ ಗೆ ಹೋದೆ ನನ್ನ ಹಿಂದೆಯೇ ಲೀ ಅವನ ಮತ್ತು ಜೇಯ ಸ್ಲೀಪಿಂಗ್ ಬ್ಲ್ಯಾಕೆಟ್ಸ್ ನಾನು ಅವರಿಬ್ಬರಿಗೆ ಕ್ರಿಸ್ಮಸ್ ಗಿಫ್ಟ್ ಅಂತ ಮಾಡಿದ್ದ ನ್ನು ಹಿಡಿದು ಬಂದ


ಇಬ್ಬರೂ ಒಬ್ಬರನ್ನೊಬ್ಬರು ಹಿಡಿದುಕೊಂಡು ಬ್ಲ್ಯಾಂಕೆಟ್ ಹೊದ್ದು ಕೂತೆವು ತಲೆ ಮೇಲೇ ಸುತ್ತಿಗೆಯಿಂದ ಹೊಡೆದಂತೆ roof ಮೇಲೆ ಆಲಿ ಕಲ್ಲು ಗಳು ಬೀಳುತ್ತಿದ್ದವು ಲೀ ದೊಡ್ಡ ಕಣ್ಣು ಮಾಡಿಕೊಂಡು ನನ್ನನ್ನೇ ನೋಡುತ್ತಿದ್ದ ನಾನು ಅವನನ್ನು ಎದೆಗಾನಿಸಿಕೊಂಡು ಹೆದರಬೇಡವೆಂದು ಪಿಸುಗುಟ್ಟಿದೆ ಜೇ ಏನು ಮಾಡುತ್ತಿದ್ದಾನೋ... ಮನ ಚಿಂತೆಯ ಗೂಡಾಯಿತು
(ಮುಂದುವರೆಯುವುದು...)

Wednesday, June 11, 2008

ಬ್ಲೂ ಬೆರಿ ಪ್ಯಾನ್ ಕೇಕ್ ಮತ್ತು ಮೇಪಲ್ ಸಿರಪ್ (ಭಾಗ-ಐದು)

(ಇಗೊಳ್ಳಿ ಶಾಂತಲಾ... ಪುಟ ತಿರುಗಿಸಿದ್ದೇನೆ... ನಿಮಗಾಗಿ...)


ಮನೆಗೆ ಬಂದಾಗ ಏಳು.ಕಾರಿನಿಂದ ಇಳಿದು ನನ್ನ ಸೆಲ್ ಪೋನ್ ನೋಡಿದಾಗ ಮಾರ್ಟೀನಾಳೀಂದ ಮಿಸ್ಸ್ಡ್ ಕಾಲ್ ಇದ್ದುದು ಗೊತ್ತಾಯಿತು ಜಾನ್ ಏಳು ಗಂಟೆಗೆ ಗೌನ್ ಒಯ್ಯಲು ಮನೆಗೆ ಬರುತ್ತಾನೆಂದು ಮೆಸೇಜ್ ಬಿಟ್ಟಿದ್ದಳು ಗಡಬಡಿಸಿ ಬಾಗಿಲಿಗೆ ಬಂದಾಗ ಜೇ ಬಾಗಿಲಲ್ಲೇ ಕಾಯುತ್ತಿದ್ದ.ಅವನಿವತ್ತು ಬೆಳಗ್ಗೆ ಮನೆಯ ಕೀ ಒಯ್ಯಲು ಮರೆತಿದ್ದ. ಬೆಳಗ್ಗೆ ಅವನು ಕೀ ಮರೆತದ್ದನ್ನು ಡ್ರಾಪ್ ಮಾಡುವಾಗ ಹೇಳಿದ್ದನಾದರೂ ನಾನು ಶಾಪಿಂಗ್ ನಲ್ಲಿ ಮಗ್ನಳಾಗಿ ಅವನು ಬಾಗಲಲ್ಲಿ ಕಾಯುತ್ತಿರ ಬಹುದೆಂದು ಮರೆತು ಬಿಟ್ಟಿದ್ದೆ. ಜಾನ್ ಬಂದಿದ್ದನೇ...? ಕೇಳಿದೆ ಅವನು ಇಲ್ಲಾ ಅಂತ ತಲೆ ಆಡಿಸುತ್ತಾ ತನ್ನ ರೂಮಿಗೆ ಓಡಿದ ಲೀ ಕಲರ್ ಪೇಪರ್ ಗಳನ್ನು ಹಿಡಿದು ಕೂತ

ನಾನು ನನ್ನ ಗೌನ್ ಅನ್ನು ಓಕ್ ಚೆಸ್ಟ್ ನಿಂ ದ ತೆಗೆದು ಬಟರ್ ಪೇಪರ್ ಸರಿಯಾಗಿ ಸುತ್ತಿ ಜಾನ್ ಗೆ ಕೊಡಲು ಸಿದ್ದವಾಗಿಟ್ಟೆ
ಕೆಂಪು ಜೆರೇನಿಯಮ್ ತೂಗು ಬುಟ್ಟಿಗಳನ್ನು ಅಂಗಳದಲ್ಲಿ ಸಾಲಾಗಿ ತೂಗು ಹಾಕಿ ವಿವಿಧ ಕೋನಗಳಿಂದ ಅದರ ಅಂದವನ್ನು ನಿರುಕಿಸುತ್ತಿದ್ದೆ ಒಮ್ಮೆ ಕೆಂಪು ಮಿಂಚು ಹುಳುಗಳ ಸಮೂಹದಂತೆ, ಇನ್ನೊಮ್ಮೆ ಹೊಳೆವ ಚಿಟ್ಟೇಗಳ ಸಡಗರದಂತೆ ಮತ್ತೊಮ್ಮೆ ಬೆಂಕಿಯ ಕೆಂಪು ನಾಲಿಗೆಗಳಂತೆ ಕಾಣುತ್ತಿದ್ದ ಅವುಗಳನ್ನು ನಾನು ನೋಡುತ್ತಾ ನಿಂತಿರುವಾಗ ಜೇ ಡಿನ್ನರ್ ಅವನ ಸ್ನೇಹಿತನ ಮನೆಯಲ್ಲೇ ಮಾಡುತ್ತೇನೆಂದು ಹೇಳುತ್ತಾ ಅವನ ಬ್ಯಾಗ್ ನಲ್ಲಿ ಸಾಮಾನು ಗಳನ್ನು ತುರುಕಿಕೊಳ್ಳೂತ್ತಾ ಹೊರಗೋಡಿದ


ರಾತ್ರಿ ಡಿನರ್ ಗೆ ನಾನು ಲೀ ಇಬ್ಬರೇ... ಅವನೇನೇನು ತಿನ್ನುತ್ತಾನೆಂದು ಕೇಳಿದ್ದಕ್ಕೆ ಪ್ಯಾನ್ ಕೇಕ್ ಅಂತ ಉತ್ತರ ಬಂತು. ಲೀಗೆ ಸ್ವಲ್ಪ ಸ್ವೀಟ್ ಟೂಥ್ ನನ್ನ ಥರ! ನಗುಬಂತು ಹಿಟ್ಟು,ಬಟರ್ ಮಿಲ್ಕ್ ಬೌಲ್ ನಲ್ಲಿ ಕಲೆಸಿದೆ ಜೊತೆಗೆ ಮೊಟ್ಟೆ ,ಚೂರು ಬೇಕಿಂಗ್ ಪೌಡರ್ ಹಾಕಿ ಬೀಟ್ ಮಾಡಿದೆ ಮೃದುವಾದ ಪ್ಯಾನ್ ಕೇಕ್ ಗಳು ತಟ್ಟೆ ಗಿಳಿಸಿ ಮೇಪಲ್ ಸಿರಪ್ ಅದರ ಮೇಲೆ ಹೊಯ್ಯುತ್ತಾ ಲೀ... ಅಂತ ಕೂಗಿದೆ ಬಂಗಾರ ಕಂದು ಬಣ್ಣದ ಮಂದವಾದ ಮೇಪಲ್ ಸಿರಪ್ ನ ಸುವಾಸನೆ ಪ್ಯಾನ್ ಕೇಕ್ ನ ಹಬೆಯೊಂದಿಗೆ ಸೇರಿಕೊಂಡು ಸುತ್ತೆಲ್ಲಾ ಬೆಚ್ಚನೆಯ ನೆಮ್ಮದಿಯ ಫೀಲಿಂಗ್ ಪಸರಿಸಿತು...


ಯಾರೋ ಬಂದ ಹಾಗಾಯಿತಲ್ಲಾ...ಅಂದು ಕೊಳ್ಳೂತ್ತಾ ಮುಂಬಾಗಿಲಿಗೆ ಬಂದೆ ಜಾನ್ ಇರಬೇಕು...ಆದರೆ ಬಂದಿದ್ದು ಮಾರ್ಟೀನಾ...!ಅರೇ...ಮಾರ್ಟೀನಾ..ಬಾ..ಬಾ..ಜಾನ್ ಬರಲಿಲ್ಲವೇ...? ಅಂದೆ ಅದಕ್ಕವಳು `ಇಲ್ಲ... ಜಾನ್ ಗೆ ಏನೋ ಅರ್ಜೆಂಟ್ ಕೆಲಸ ಇದೆ ಅಂತ ಅವನ ಲ್ಯಾಬ್ ನಿಂದ ಕಾಲ್ ಬಂತು ಹೋದ'ಅಂದಳು ನಾನು ಅವಳ ಕೈಗಿತ್ತ ಗೌನ್ ಸ್ವಲ್ಪವೇ ಬಿಡಿಸಿ ನೋಡಿ ವಾವ್ ಎಷ್ಟು ಸುಂದರ ವಾಗಿದೆ ಅಂತ ಕಣ್ಣರಳಿಸಿ ನಕ್ಕಳುಓಕೇ...ನಾನಿನ್ನು ಮನೆಗೆ ಹೋಗಲು ನಲವತ್ತು ಮೈಲಿ ಡ್ರೈವ್ ಮಾಡಬೇಕಲ್ಲಾ ...ನಾಳೆ ನಿನ್ನ ನೋಡ್ತೇನೆ ಅಂತ ಹೊರಟವಳು ಲೀ ಯನ್ನು ನೋಡಿ `ಹೇ ಸ್ವೀಟ್ ಹಾರ್ಟ್... ಹೌ ಆರ್ ಯೂ..." ಅಂತ ನಿಂತಳು.

ವೈ ಡೋಂನ್ಟ್ ಯೂ ಹ್ಯಾವ್ ಪ್ಯಾನ್ ಕೇಕ್ ವಿತ್ ಮೀ ಅಂತ ಲೀ ಅವಳನ್ನು ಪಕ್ಕ ಕೂರಿಸಿಕೊಂಡು `ಮಾಮ್ ಮಾರ್ಟೀನಾಗೆ ಸ್ಪೆಷಲ್ ಬ್ಲೂಬೆರಿ ಪ್ಯಾನ್ ಕೇಕ್ ಅಂತ ಆರ್ಡರ್ ಕೊಟ್ಟ ನಾನು ಪ್ರಿಜ್ ನಿಂದ ಬ್ಲೂಬೆರಿ ತೆಗೆದು ಹಿಟ್ಟಿನಲ್ಲಿ ಬೆರೆಸಿ ಹುಯ್ಯುವಾಗ ಲೀ ಗಂಭೀರವಾಗಿ ಬ್ಲೂಬೆರಿ ಅವಳ ಹೊಟ್ಟೆಯಲ್ಲಿರುವ ಮಗುವಿಗೆ ಎಷ್ಟು ಒಳ್ಳೆಯದೆಂದು ವಿವರಿಸುತಿದ್ದುದ್ದನ್ನು ನೋಡಿ ನಗು ಬಂತಾದರೂ ಕಷ್ಟ ಪಟ್ಟು ತಡಕೊಂಡೆ.ಲೀ ಹೇಳುತ್ತಿದ್ದ 'ಲುಕ್ ಮಾರ್ಟೀನಾ...ಇದರಲ್ಲಿ ಬ್ರೇನ್ ಚೆನ್ನಾಗಿ ಬೆಳೆಯಲು ಬೇಕಾದ ಅಂಶಗಳಿವೆ ನಿನ್ನಮಗಳು ಬುದ್ದಿವಂತೆ ಆಗಬೇಕೋ ಬೇಡವೋ...? ಬ್ಲೂಬೆರಿಯಲ್ಲಿ ಫ್ರೀ ರಾಡಿಕಲ್ಸ್ ಅನ್ನು ಫೈಟ್ ಮಾಡಲು ಬೇಕಾದ ಅಂಶಗಳೂ ಇವೆ ಈಗ ನಿನ್ನ ಹೆಲ್ತ್ ಗೆ ಒಳ್ಳೆಯದು...ಸೋ ಗಲಾಟೆ ಮಾಡದೆ ಪೂರ್ತಿ ತಿನ್ನು ನೀನು ಫಿನಿಶ್ ಮಾಡಿದ್ರೆ ನಿನಗೊಂದು ಚಾಕ್ಲೆಟ್ ಚಿಪ್ ಕುಕೀ ಕೊಡ್ತೇನೆ...' ಅಂತ ನನ್ನ ಸ್ಟೈಲ್ ಕಾಪಿ ಮಾಡುತ್ತಾ ನನ್ನೆಡೆಗೆ ನೋಡಿ ನಕ್ಕ ಲೀ. ಮಾರ್ಟೀನಾ ಅಷ್ಟೋತ್ತು ತಡಕೊಂಡಿದ್ದ ನಗು ಹೊರಬಿಟ್ಟಳು


ನಾನು ಇಬ್ಬರಿಗೂ ಒಂದೊಂದು ಬ್ಲೂಬೆರಿ ಪ್ಯಾನ್ ಕೇಕ್ ಹಾಕಿ ಅದರ ಮೇಲೆ ಮೇಪಲ್ ಸಿರಪ್ ಹುಯ್ದೆ. ಮಾರ್ಟೀನಾ `ಓ..ನೋ..ಮೇಪಲ್ ಸಿರಪ್ ಫಾರ್ ಮೀ..."ಅಂತ ಕೂಗಿದಳು ಅದಕ್ಕೆ ಲೀ `ಮೇಪಲ್ ಸಿರಪ್ ನಲ್ಲಿ ಏನೇನು ಇರತ್ತೆ ಅಂತ ನನಗಷ್ಟು ಗೊತ್ತಿಲ್ಲ ಆದ್ರೆ ಐ ಕ್ಯಾನ್ ಸೇ ಇಟ್ಸ್ ರಿಯಲ್ ಗುಡ್...ಮಾಮ್ ನೀನು ಹೇಳು ಇದರಲ್ಲೇನೇನು ಇದೆ ಅಂದ"

ಮೇಪಲ್ ಸಿರಪ್ ನಲ್ಲಿ ಕ್ಯಾಲ್ಸಿಯಂ,ಐರನ್,ಥೈಯಾಮಿನ್ ಇದೆ ಸಾಕಷ್ಟು ಫಾಸ್ಸ್ಪರಸ್ ಕೂಡಾ ಇದೆ ನನಗೆ ಅದಕ್ಕಿಂಥಾ ಹೆಚ್ಚಾಗಿ ಮೇಪಲ್ ಸಿರಪ್ ನೊಂದಿಗೆ ಭಾವನಾತ್ಮಕ ಸಂಬಂಧ ಇದೆ ಎಂದೆ

ಇಬ್ಬರೂ ಕಣ್ಣರಳಿಸಿದರು, ನಾನು ಸ್ವಪ್ನದಲ್ಲೆಂಬಂತೆ ಹೇಳತೊಡಗಿದೆ...



ವಿಸ್ಕಾನ್ಸಿನ್ ನಲ್ಲಿ ಅಜ್ಜನ ಅಪ್ಪನಿಗೆ 'ಶುಗರ್ ಬುಶ್'ಅಂದ್ರೆ ಮೇಪಲ್ ಮರಗಳ ಫಾರ್ಮ್ ಇತ್ತು ಚಳಿ ಸ್ವಲ್ಪವೇ ಕಡಿಮೆಯಾಗಿ ಬೆಚ್ಚನೆ ಹಗಲು ರಾತ್ರಿ ತಂಪಾಗುವಂಥ ಹವಾ ಬಂದಾಗ, ಫೆಬ್ರವರಿ ಸುಮಾರಿಗೆ ಅಜ್ಜ ಮತ್ತವನ ಸೋದರರೆ ಲ್ಲಾ ಅಪ್ಪನ ಜೊತೆ ಪ್ರತಿ ಮರಕ್ಕೂ ತೂತು ಕೊರೆದು ಮರದ ಪುಟ್ಟ ಕೊಳವೆ ಸಿಕ್ಕಿಸುತ್ತಿದ್ದರು ಆ ಕೊಳವೆಯಿಂದ ತೊಟ್ಟಿಕ್ಕುವ ಮೇಪಲ್ ರಸ ಒಟ್ಟಾಗಿಸಲು ಪ್ರತಿ ಮರದ ಬುಡದಲ್ಲೂ ಒಂದೊಂದು ಮರದ ಬಕೆಟ್ ಇಡುತ್ತಿದ್ದರು ಪ್ರತಿ ಬೆಳಗ್ಗೆ ಹೊಸ ಬಕೆಟ್ ಇಟ್ಟು ಆವರೆಗೆ ಸುರಿದ ರಸವೆಲ್ಲಾ ತಂದು ಒಂದು ದೊಡ್ಡ ಹಂಡೆಗೆ ಹುಯ್ಯುವುದು ಹೀಗೆ ರಸ ಸಾಕಷ್ಟು ಸೇರಿದ ಮೇಲೆ ಅದನ್ನು ಶುಗರ್ ಹೌಸ್ ನಲ್ಲಿ ಕಾಯಿಸಿ ಮೇಪಲ್ ಸಿರಪ್,ಮೇಪಲ್ ಬಟರ್,ಮೇಪಲ್ ಕ್ರೀಮ್,ಕೊನೆಗೆ ಮೇಪಲ್ ಟಾಫಿ ಸಹ ಮಾಡುತ್ತಿದ್ದರು ಅಂದು ಕುಟುಂಬದವರೆಲ್ಲಾ ಒಂದಾಗಿ ಸೇರಿ ಹಬ್ಬದಂತೆ ಸೆಲೆಬ್ರೇಟ್ ಮಾಡುತ್ತಿದ್ದರು ನೃತ್ಯ ಕೂಟಗಳೂ ನಗೆ ಚಟಾಕಿಗಳೂ ಇರುತ್ತಿದ್ದವು....ಅಜ್ಜಿ ಹೇಳುತ್ತಾಳೆ ಅವು ಅವಳ ಬದುಕಿನ ಬಂಗಾರದ ದಿನಗಳು ಅಂತ....


ಮನಸ್ಸೇಕೋ ಭಾರವಾಗಿತ್ತು...

ಹೊರಗೆ ಗಾಳಿಯೂ ಯಾಕೋ ಭಾರ ಭಾರವಾಗಿದೆ ಅನ್ನಿಸಿತು ನನ್ನದೇನೋ ಭ್ರಮೆ ಅಂತ ತಲೆ ಕೊಡವಿದೆ
ಮಾರ್ಟೀನಾ ಬ್ಲೂಬೆರಿ ಪ್ಯಾನ್ ಕೇಕ್ ಗಾಗಿ ಥ್ಯಾಂಕ್ಸ್ ಹೇಳುತ್ತಾ ನಾನು ಕೊಟ್ಟ ಗೌನ್ ಎದೆಗವಚಿಕೊಂಡು `ಓ ಇಟ್ಸ್ ಆಲ್ರೆಡಿ ಲೇಟ್...ಅಂತ ಪಿಸುಗುಟ್ಟುತ್ತಾ ಹೊರಟಳು
ನಾನು 'ಟೇಕ್ ಕೇರ್‍ ಹನಿ' ಅಂತ ಕೂಗಿ ಕೈ ಬೀಸಿದೆ


(ಮುಂದುವರೆಯುವುದು...)

Thursday, June 5, 2008

ಕೆಂಪು ಜೆರೇನಿಯಮ್ ತಂದ ನೆನಪು( ಭಾಗ- ನಾಲ್ಕು)


ಕೆಂಪು ಜೆರೇನಿಯಮ್...
ಮತ್ತೆ ಅಜ್ಜಿಯ ನೆನಪು...
ನನ್ನ ಅಂಗಳದಲ್ಲಿ ಕೆಂಪು ಜೆರೇನಿಯಮ್ ಬೇಕೇ ಬೇಕೆನ್ನಿಸಿತು
ಸಾಲು ಸಾಲಾಗಿ ಅಜ್ಜಿ ತೂಗುಬಿಟ್ಟಂತೆ...
ಹುಚ್ಚು ಹತ್ತಿದವಳಂತೆ ಒಂದಲ್ಲ ಎರಡಲ್ಲ ಐದು ಕೆಂಪು ಜೆರೇನಿಯಮ್ ತೂಗುಬುಟ್ಟಿಗಳನ್ನು ಖರೀದಿಸಿದೆ ಲೀ ದಂಗಾಗಿ ನೋಡುತ್ತಿದ್ದ ಕಾರಿಗೆ ವಾಪಸ್ಸಾಗಿ ಮನೆಗೆ ಬರುವಾಗ ಲೀ ಗೆ ಅಜ್ಜಿ ಮತ್ತು ಕೆಂಪು ಜೆರೇನಿಯಮ್ ಬಗ್ಗೆ ಹೇಳಿದೆ...
*********
ಅಜ್ಜಿ ಆಗ ಸುಮಾರು ಹದಿನೈದು ಹದಿನಾರು ವರ್ಷದವಳು. ಅವಳಿಗಾಗಲೇ ಮದುವೆಯಾಗಿತ್ತು ಇಬ್ಬರು ಮಕ್ಕಳೂ ಇದ್ದರು
ಎರಡು ವರ್ಷದ ಜೇಮ್ಸ್ ಇನ್ನೊಂದು ವರುಷವೂ ತುಂಬದ ಮಗು. ಅಜ್ಜನಿಗೂ ಇಪ್ಪತ್ತರ ಹುರುಪು ಜೊತೆಗಾರರು ಪಶ್ಚಿಮಕ್ಕೆ ಭವ್ಯ ಭವಿಷ್ಯವನ್ನು ಅರಸಿ ಹೊರಟಾಗ ತಾನೂ ಹೊರಟ. ಅಜ್ಜಿ ಹುಟ್ಟಿ ಬೆಳೆದ ವಿಸ್ಕಾನ್ಸಿನ್ ಬಿಟ್ಟು ಮಕ್ಕಳೊಂದಿಗೆ ಮುಚ್ಚಿದ ಬಂಡಿಯಲ್ಲಿ ಅಜ್ಜನೊಂದಿಗೆ ಹೊರಟಳು.ಕಣ್ಣಲ್ಲಿ ಕನಸೇನೋ ಇತ್ತು ನಾಳೆಗಳು ಹೇಗೆಂದು ಗೊತ್ತಿರಲಿಲ್ಲ ಪಯಣದ ಗಮ್ಯ ಯಾವುದೆಂದೂ ಗೊತ್ತಿರಲಿಲ್ಲ.ಮತ್ತೆಂದು ತನ್ನವರನ್ನು ನೋಡುವೆನೋ ಇಲ್ಲವೋ ಎಂದೂ ತಿಳಿದಿರಲಿಲ್ಲ ಆದರೂ ಹೊರಟಳು...
ವಿಸ್ಕಾನಿನ್ನಿನಿಂದ ಮಿನ್ನೆಸೋಟ,ಮಿನ್ನೆಸೋಟ ದಿಂದ ಕೆಳಗೆ ಅಯೋವ...ಅಯೋವ ದಿಂದ ಮತ್ತೂ ಕೆಳಗೆ ಮಿಸ್ಸೋರಿ...ಕೊನೆಗೆ ಮುಟ್ಟಿದ್ದು ಕ್ಯಾನ್ಸಾಸ್...
ಕೆಟ್ಟಹವಾ....
ಎಷ್ಟೊದಿನ ಉಪವಾಸ...
ಹದಗೆಟ್ಟ ಆರೋಗ್ಯ...
ಚಳಿಯ ದಿನಗಳಲ್ಲಿ ಪ್ರಯಾಣ ಮಾಡಲಾಗುತ್ತಿರಲಿಲ್ಲ...ಹಿಮಪಾತಗಳಾಗುತ್ತಿದ್ದರೆ ಕುದುರೆಗಳು ನಡೆಯುವುದಿರಲಿ ಸತ್ತೇ ಹೋಗುತ್ತಿದ್ದವು ಇನ್ನೊಂದು ಜೊತೆ ಕುದುರೆ ಕೊಳ್ಳಲು, ಬ್ರೆಡ್ ಗಿಣ್ಣು ಕೊಳ್ಳಲು ಅದಕ್ಕಾಗಿ ಹಣ ಗಳಿಸಲು ಅಲ್ಲಲ್ಲಿ ಕೊಂಚ ಕಾಲ ನಿಲ್ಲಬೇಕಾಗುತ್ತಿತ್ತು. ಎಷ್ಟೊ ಸಾರಿ ಕೆಟ್ಟ ಹವೆಯಿಂದಾಗಿ ತಿಂಗಳುಗಟ್ಟಲೆ ಪ್ರಯಾಣ ಮುಂದೂಡ ಬೇಕಾಗಿ ಬರುತ್ತಿತ್ತು.ಒಮ್ಮೆ ಎಲ್ಲರಿಗೂ ವಿಷಮ ಶೀತ ಜ್ವರ ಬಂತು...ಪುಟ್ಟಕೂಸು ಬದುಕುಳಿಯಲಿಲ್ಲ...ಅಜ್ಜಿ ಕಂಗೆಟ್ಟು ಕುಸಿದು ಹೋದಳು
ಕ್ರೂರ ಚಳಿಗಾಲದಲ್ಲಿ ಪ್ಲಂ ಕ್ರೀಕಿನ ಬಳಿ ಅವರು ಕೆಲಕಾಲ ಇರಬೇಕಾಯ್ತು ಅಜ್ಜ ಹಣಗಳಿಸಲು ಹತ್ತಿರದ ಪಟ್ಟಣದಲ್ಲಿ ಮರಗೆಲಸ ಮಾಡುತ್ತಿದ್ದ ಪಟ್ಟಣದ ಬಾಡಿಗೆ ಮನೆ ಇವರ ಕೈಗೆಟುಕದು ಆದರೆ ವಿಶಾಲ ಪ್ರಯರಿಯಲ್ಲಿ ನಾಗರೀಕತೆಯಿಂದ ದೂರವಾಗಿ ಹುಲ್ಲುಹೆಪ್ಪಿನ ಮನೆ (sod house) ಕಟ್ಟಲು ಒಂದು ಪೆನ್ನಿಯನ್ನೂ ಖರ್ಚು ಮಾಡಬೇಕಾಗಿರಲ್ಲಿಲ್ಲ...
ಗಾಳಿ ಸುಳಿಯದ ಆ ಮನೆ ...
ಒಳಗೆ ಮಂದ ಬೆಳಕು...

ತೇವದ ವಾಸನೆ...
ಕೆಲವುಸಾರಿ ಹಿಮಮಾರುತ ಬಂದಾಗ ಪಟ್ಟಣದಿಂದ ನಡೇದು ಬರುವುದು ಅಪಾಯಕಾರಿಯೆಂದು ಮೂರು ನಾಲ್ಕು ದಿನ ಅಜ್ಜ ಮನೆಗೆ ಬರಲಾಗುತ್ತಿರಲಿಲ್ಲ ಹತ್ತಾರು ದಿನಗಳ ಹಿಮಮಾರುತಗಳೂ ಬರುತ್ತಿದ್ದವು ತಾನು ಅರೆ ಹೊಟ್ಟೆ ತಿಂದು ಸದಾ ಕೆಮ್ಮುವ ಜೇಮ್ಸ್ ನನ್ನು ಹಿಡಿದು...

ಆತಂಕದ ದಿನ ರಾತ್ರಿಗಳು...
ದಿನಕ್ಕೂ ರಾತ್ರಿಗೂ ಅಂಥಾ ವ್ಯತ್ಯಾಸವೇನೂ ಇರುತ್ತಿರಲಿಲ್ಲ ಮಧ್ಯಾನ್ಹ ಕ್ಕೇ ಕತ್ತಲಾದರೆ ಮತ್ತೆ ಬೆಳಕಾಗುವುದು ಯಾವಾಗಲೋ...
ಅವರ ಹುಲ್ಲು ಹೆಪ್ಪಿನ ಮನೆಯಲ್ಲಿ ಅಜ್ಜಿ ಆ ನೀರವದಲ್ಲಿ ಒಬ್ಬಳೇ ಜೇಮ್ಸ್ನ್ ನೊಂದಿಗೆ ಹಲವಾರು ದಿನಕಳೆದಳು...

ಮಂಕು ಹಗಲುಗಳು...
ಭಯಾನಕ ರಾತ್ರಿಗಳು...
ತೋಳಗಳ ಊಳಿಡುವಿಕೆ...
ಮಂಕು ಆಕಾಶ...
ಚೈತನ್ಯವಿಲ್ಲದ ನೆಲ...
ಕಿತ್ತು ತಿನ್ನುವ ಒಂಟಿತನ....

ಆ ದಿನಗಳಲ್ಲಿ ಕಡು ಗೆಂಪು ಹೂವಿನ ಜೆರೇನಿಯಮ್ ಹೂವಿನ ಪುಟ್ಟ ಕುಂಡವೊಂದನ್ನು ಜೇಮ್ಸ್ ನನ್ನು ನೋಡಲು ದೂರದಿಂದ ಬಂದಿದ್ದ ಗೆಳತಿಯೊಬ್ಬಳು ಅಜ್ಜಿಗೆ ಉಡುಗೊರೆಯಾಗಿ ನೀಡಿದಳಂತೆ ತನ್ನ ಮನಕ್ಕೆ ಚೇತನ ತುಂಬಲು ತನ್ನ ಅಂಗಳಕ್ಕೆ ಇಳಿದು ಬಂದ ಏಂಜಲ್ ಈ ಕೆಂಪು ಜೆರೇನಿಯಮ್ ಅನ್ನಿಸಿತಂತೆ ಅಜ್ಜಿಗೆ...

ಮುಂದೆ ಅಜ್ಜಿ ಕ್ಯಾನ್ಸಾಸ್ ನಲ್ಲಿ ನೆಲೆ ನಿಂತ ಮೇಲೆ ಪ್ರತಿ ಫಾಲ್ ನಲ್ಲಿ ಹಲವಾರು ಪುಟ್ಟ ಕುಂಡಗಳಲ್ಲಿ ಕೆಂಪು ಜೆರೇನಿಯಮ್ ಬೆಳೆಸುತ್ತಿದ್ದಳು ತನ್ನ ಹತ್ತಿರದವರಿಗೆಲ್ಲಾ ಹಂಚುತ್ತಿದ್ದಳು ನನಗೂ ಹಲವು ಬಾರಿ ಕೊಟ್ಟಿದ್ದಳು ಪ್ರತಿ ಸಾರಿ ನನಗೆ ಕೊಡುವಾಗ ನಸು ನಕ್ಕು ನನಗೆ ಹೇಳುತ್ತಿದ್ದಳು 'ಈ ಹೂಗಳಲ್ಲಿ ನನ್ನ ಇಲ್ಲವಾದ ಪುಟ್ಟ ಮಗಳ ಮುಖವೇ ಕಾಣುತ್ತೆ ನನಗೆ...ಅವಳೂ ಹೀಗೇ ಇದ್ದಳು ಈ ಜೆರೇನಿಯಮ್ ಅಷ್ಟೇ ಮುದ್ದಾಗಿ...ಇದರಷ್ಟೇ ಬ್ರೈಟ್ ಆಗಿ...ಇಷ್ಟೇ ಪ್ರಾಮಿಸಿಂಗ್ ಆಗಿ...
ಅವಳನ್ನು ನೆನೆದು ದುಃಖ ಪಡುವುದಿಲ್ಲ ನಾನು ಅದು ಅವಳು ನನಗೆ ಕೊಟ್ಟ ಸುಖದ ಘಳಿಗೆ ಗಳಿಗೆ ನಾನು ಮಾಡುವ ಅವಮಾನವಾಗುತ್ತೆ...ಕಷ್ಟದ ದಿನಗಳನ್ನು ನಾನು ಯಶಸ್ವಿಯಾಗಿ ಗೆದ್ದು ಬಂದ ನೆನಪಿಗೆ ನಾನು ಈ ಜೆರೇನಿಯಮ್ ಅನ್ನು ಮುಡುಪಾಗಿಸಿದ್ದೇನೆ ಈ ಕೆಂಪು ದಳಗಳು...ಈ ಮೂಳೆ ಕೊರೆಯುವ ಚಳೀಯಲ್ಲೂ ಅರಳುತ್ತೀನೆಂಬ ಇವುಗಳ ಹಟದಂತೆ ಕಾಣುವ ಹುರುಪು...ಇದು ನನಗೆ ಒಂದೊಮ್ಮೆ ಬದುಕಲು ಶಕ್ತಿ ಬೆಳಕು ಕೊಟ್ಟಿತ್ತು ಆ ಬೆಳಕನ್ನು ನಾನು ಪಸರಿಸಲು ಯತ್ನಿಸುತ್ತಿದ್ದೇನೆ ಅಷ್ಟೇ....

**************
ಲೀ ಕಣ್ಣಲ್ಲಿ ನೀರೂರಿತ್ತು ನನ್ನ ಮನವೂ ಅಜ್ಜಿಯ ನೆನಪಿಂದ ಭಾರವಾಗಿತ್ತು...
(ಮುಂದುವರೆಯುವುದು...)
ಟಿಪ್ಪಣಿ-
1812ರ ಅಮೆರಿಕನ್ ಯುದ್ದದ ನಂತರ ಬಹಳಷ್ಟು ಜನ ಅಮೆರಿಕನ್ನರು ಹೊಸಜೀವನ ಅರಸಿ ಪೂರ್ವದಿಂದ ಪಶ್ಚಿಮದ ಕಡೆಗೆ ವಲಸೆ ಬಂದರು.ಹವಾಮಾನ ವೈಪರೀತ್ಯಗಳಲ್ಲದೇ, ಪ್ರಯಾಣಕ್ಕೆ ಆಧುನಿಕ ಸೌಲಭ್ಯ ಇಲ್ಲದ ಆ ದಿನಗಳಲ್ಲಿ ಈ ರೀತಿಯ ಸಾಹಸ ಸಾಕಷ್ಟು ರೋಮಾಂಚಕವಾಗಿತ್ತಾದರೂ, ಅಪಾಯಕಾರಿಯಾಗಿಯೂ ಇತ್ತು. ಸಾವಿರಾರು ಜನ ಗುರಿ ತಲುಪುವ ಮುನ್ನವೇ ಪ್ರಾಣ ತೆತ್ತರು ಈ ರೀತಿ ಗುರಿ ತಲುಪಿದ ವೀರರ ಸಾಹಸ ನೆನೆದು ಸ್ಪೂರ್ತಿ ಪಡೆಯುವುದು,ಗುರಿ ತಲುಪದ ಅಮಾಯಕರ ತ್ಯಾಗವನ್ನು ಸ್ಮರಿಸುವುದು ಅಮೆರಿಕನ್ನರಿಗೆ ಯಾವತ್ತಿಗೂ ಪ್ರಿಯವಾದ ಕೆಲಸ.ಇವರನ್ನು "ಪಯೋನೀರ್ಸ್" ಅಂತ ವಿಶೇಷ
ವಾಗಿ ಗುರುತಿಸಿ ಗೌರವಿಸಲಾರುತ್ತೆ. ಅಂಥಾ ಒಂದು ಪಯೋನೀರ್ ಮಹಿಳೆಯಾಗಿ ನಾನು ಇಲ್ಲಿನ ಅಜ್ಜಿಯನ್ನು ಚಿತ್ರಿಸಲು
ಪ್ರಯತ್ನಿಸಿದ್ದೇನೆ

Monday, June 2, 2008

ಸೇಲ್ ಪ್ರೇಮಿ! (ಭಾಗ-ಮೂರು)

ಸಂಜೆ ಆಫೀಸು ಮುಗಿಸಿ ಶಾಲೆಯಿಂದ ಲೀ ಯನ್ನು ಪಿಕ್ ಮಾಡಿಕೊಂಡು ಮೈಕೇಲ್ಸ್ ಗೆ ಹೋದೆವು ಮೈಕೇಲ್ಸ್ ಸ್ವಲ್ಪ ದುಬಾರಿ ಅಂಗಡಿಯಾದರೂ ಮಕ್ಕಳ ಪಾಜೆಕ್ಟ್ ಗೆ ಬೇಕಾದ ಎಲ್ಲ ಸಾಮಾನೂ ಒಂದೇ ಸೂರಿನಡಿ ಸಿಗುತ್ತೆ ಅಂತ ಅಲ್ಲಿಗೆ ಹೋಗಿದ್ದು.ಲೀ ತನಗೆ ಬೇಕಾದ ಸಾಮಾನು ಆರಿಸುವಾಗ ನಾನು ನನ್ನ ಪೇಂಟಿಂಗ್ ಗೆ ಅಂತ ಒಂದೆರಡು ಬ್ರೆಶ್
ತೊಗೊಂಡೆ.ರಾಶಿ ರಾಶಿ ಉಲನ್ ಸೇಲ್ ನಲ್ಲಿ ಹಾಕಿದ್ದರು.(ಈ ಮೇ ಬಿಸಿಲಿನಲ್ಲಿ ಉಲ್ಲನ್ ಕೊಳ್ಳುವವರು ಯಾರು?) ನನ್ನಂಥ ಸೇಲ್ ಪ್ರೇಮಿಗಳು! ಒಂದೆರಡು ಉಂಡೆ ತೊಗೊಳಣಾ ಅಂತ ಶುರು ಮಾಡಿದ್ದು ಕಾರ್ಟ್ ತುಂಬಾ ಆಯಿತು ಈ ಕಲರ್ ಚೆನಾಗಿದೆ..ಇದು ಲೀ ಗೆ ಚೆನಾಗಿರುತ್ತೆ.. ಇದು ಜೇಗೆ... ಇದರಲ್ಲಿ ಮಾರ್ಟೀನಾ ಮಗುವಿಗೆ ಸ್ವೆಟರ್ ಮಾಡುವಾ...ಅಮ್ಮನಿಗೊಂದು ಶಾಲ್ ಮಾಡಿಕೊಡೋಣ...ಪಾಪ ಅಜ್ಜಿ ನನಗೊಸ್ಕರ ಎಷ್ಟೊಂದು ಮಾಡಿದಾಳೆ ಅವಳಿಗೊಂದು ಸ್ಕಾರ್ಫ್ ಆದ್ರೂ ಮಾಡಬೇಕು....ಡ್ಯಾಡ್ ಪಾಪ..." ಅಂತೆಲ್ಲಾ ಯೋಚಿಸಿಕೊಂಡೆ


ಲೀ ತನ್ನ ಸಾಮಾನು ಗಳನ್ನು ತಂದು ನನ್ನ ಕಾರ್ಟ್ ನಲ್ಲಿ ಜಾಗವಿಲ್ಲದೆ ಇನ್ನೊಂದು ಕಾರ್ಟ್ ತಂದು ಅದರಲ್ಲಿ ಹಾಕಿಕೊಂಡು ಅದನ್ನು ದಬ್ಬುತ್ತಾ ತಮಾಶೆ ಮಾಡಿದ. 'ನೀನು ಪ್ರತಿ ವರ್ಷವೂ ಉಲನ್ ತೊಗೋತಿ ಒಂದೂ ಸ್ವೆಟರ್ ಕಂಪ್ಲೀಟ್ ಮಾಡಲ್ಲ ಮನೇಲಿ ಎಷ್ಟೋಂದು ಉಲನ್ ಕೂತಿದೆ ಮತ್ತೆ ತೊಗೊಂಡಿದೀಯಾ... ಎಂಜಾಯ್ ಮಾಮ್..."ಲೀ ಹೇಳಿದ್ದು ನಿಜ ನನಗೂ ನಗು ಬಂತು ಆದರೆ ನನ್ನ ಕಾರ್ಟ್ ನಿಂದ ಒಂದೂ ಉಂಡೆ ವಾಪಸ್ ತೆಗೆಯಲು ನನಗೆ ಮನಸ್ಸು ಬರಲಿಲ್ಲ

ಅಲ್ಲಿಂದ ಎದುರಿಗೆ ಇದ್ದ `ಮರ್ವಿನ್ಸ್'ಗೆ ಹೋದೆವು ಅಲ್ಲಿ ಸ್ಪ್ರಿಂಗ್ ಸೇಲ್ ಇದೆ ತುಂಬಾ ಒಳ್ಳೇದಿದೆ ಅಂತ ಮಾರ್ಟೀನಾ ಮತ್ತು ಟೋಬಿ ಮಾತಾಡಿ ಕೊಳ್ಳುತ್ತಿದ್ದರು ಸರಿ ಹೋಗಿ ನೋಡೇ ಬಿಡುವಾ ಅಂತ. ಬಟ್ಟೇ ಅಂಗಡಿಗೆ ಹೋದರೆ ಕೇಳಬೇಕೆ...?ಅದೂ ನಾನು ಆರು ತಿಂಗಳಿಂದ ಯಾವುದೇ ಬಟ್ಟೆ ಕೊಂಡಿರಲಿಲ್ಲ ಕ್ರಿಸ್ ಮಸ್ ಗೆ ಕೂಡಾ ಕೊಂಡಿರಲಿಲ್ಲ ಸರಿ ಅಲ್ಲೂ ಜೋರಾಗಿ ಬಿಲ್ ಆಯಿತು

ಕಾರಿಗೆ ಬರುವಾಗ ಲೀ ಕೈ ಜಗ್ಗಿದ ' ಅಮ್ಮಾ...ಒಂದೆರಡು ಗಿಡಗಳು...ಅಲ್ಲಿ ಹೋಮ್ ಡಿಪೋ ಅಂತ" ಲೀ ನನ್ನ ಅಜ್ಜಿ ತರಾನೇ ಹೂ ಪ್ರೇಮಿ ನಮ್ಮ ಮನೆಯ ಮುಂದಿನ ಫ್ಲವರ್ ಬೆಡ್ ಅವನೇ ಮೇನ್ ಟೇನ್ ಮಾಡುವುದು ಸರಿ ಹೋಮ್ ಡಿಪೋ ಗೆ ಹೋಗಿ ಬಣ್ಣ ಬಣ್ಣದ ಪಿಟೂನಿಯಾ ಗಳನ್ನೂ ಕಾಸ್ ಮಾಸ್ ಗಳನ್ನೂ ಕೊಂಡೆವು ಆಗಲೇ ನನ್ನ ಕಣ್ಣಿಗೆ ಬಿದ್ದುದು ಕೆಂಪು ಜೆರೇನಿಯಮ್!
(ಮುಂದುವರೆಯುವುದು...)