ಅವತ್ತು ಶುಕ್ರವಾರ ಬೆಳಗು ಮನೋಹರವಾಗಿತ್ತು ಹಕ್ಕಿಗಳ ಚಿಲಿಪಿಲಿ ಕೇಳುತ್ತಾ ಎದ್ದೆ ನಮ್ಮ ಅಂಗಳದಲ್ಲಿನ ಗುಲಾಬಿಯ, ಲಿಲಾಕ್ ಹೂಗಳ ಸುವಾಸನೆ...ಓಹ್ ಲೈಫ್ ಈಸ್ ಬ್ಯೂಟಿಫುಲ್ ಅಂತ ಗುನುಗಿ ಕೊಳ್ಳುತ್ತಾ ನನ್ನ ಬೆಳಗಿನ ಕೆಲಸ ಮುಗಿಸಿದೆ ಮಕ್ಕಳಿಬ್ಬರಿಗೂ ಎಂದಿನಂತೆ ಮುತ್ತಿಟ್ಟು ಎಬ್ಬಿಸಿ ತಿಂಡಿ ಮಾಡಿಕೊಟ್ಟೆ.ಐರನ್ ಮಾಡುತ್ತಿರುವಾಗ ಒಂದಷ್ಟು ಎಕ್ಟ್ರಾ ಬಟ್ಟೆಗಳಿಗೂ ಮಾಡಿಟ್ಟೆ ಮುಂದಿನ ವಾರ ಐರನ್ ಮಾಡುವ ಗೋಜಿಲ್ಲ!
ಇವತ್ತೇನೋ ನನ್ನಲ್ಲಿ ಹೊಸ ಹುರುಪು ಬಂದ ಹಾಗಿದೆ...ವಾರದ ಬಟ್ಟೆಗಳನ್ನೆಲ್ಲಾ ಒಗೆಯಲು ವಾಶಿಂಗ್ ಮಿಶೀನಿಗೆ ಹಾಕಿ ವೀಕೆಂಡೀನಲ್ಲಿ ಓದಲು ಪುಸ್ತಕಗಳನ್ನು ತೆಗೆದಿರಿಸಿದೆ ನನ್ನ ಎಂಟು ವಯಸ್ಸಿನ ಮಗ ಲೀ ವೀಕೆಂಡ್ ನಲ್ಲಿ ಅವನ ಸ್ಖೂಲ್ ಪ್ರಾಜೆಕ್ಟ್ ಬೇರೆ ಮುಗಿಸಬೇಕಿತ್ತು ಅದಕ್ಕೆ ಏನೇನು ಸಾಮಾನು ಬೇಕೆಂದು ಲಿಸ್ಟ್ ಮಾಡು ಸಂಜೆ ಶಾಲೆಯಿಂದ ಬರ್ತಾ ತರೋಣ ಅಂತ ಅವನಿಗೆ ಹೇಳಿದೆ
ನಿನ್ನೊಬ್ಬ ಮಗ ಟೀನೇಜರ್ ಹದಿನಾರು ವರ್ಷದ ಜೆರೋಮ್.ಜೇ ಅವತ್ತು ಪಕ್ಕದ ಬೀದಿಯಲ್ಲಿನ ತನ್ನ ಸ್ನೇಹಿತನ ಮನೆಯಲ್ಲಿ ಸ್ಲೀಪ್ ಓವರ್ ಗೆ ಹೋಗುವುದಾಗಿ ಹೇಳಿದ.ಜೇ ಬಹಳ ಜವಾಬ್ದಾರಿಯ ಹುಡುಗ ನಾನು ಸಿಂಗಲ್ ಮಾಮ್ ಆದ್ದರಿಂದ ತನ್ನ ಜವಾಬ್ದಾರಿ ಇನ್ನೂ ಹೆಚ್ಚು ಅಂತ ನಾನು ಹೇಳದೆಯೇ ಅವನಿಗೆ ತಿಳಿದಿದೆ.ಲೀ ಕೂಡಾ ಅವನ ವಯಸ್ಸಿಗೆ ಮೆಚೂರ್ಡೇ ಆದರೆ ಸ್ವಲ್ಪ ತಂಟೆ ಕೋರ!
ಶಾಲೆಗೆ ಹೋಗುವಾಗ ರಸ್ತೆಯಲ್ಲಿ ಜೇ ಸ್ಲೀಪ್ ಓವರ್ ಬಗ್ಗೆ ಮಾತಾಡುತ್ತಾ ಇದ್ದ. ಲೀ ಮದ್ಯೆ ಮದ್ಯೆ ಬಾಯಿ ಹಾಕುತ್ತಾ ಯಾವುದೋ ಹಾಡು ಗುನುಗುತ್ತಾ ಪುಟಾಣಿ ಪ್ಯಾಡ್ ಒಂದರಲ್ಲಿ ತನಗೆ ಪ್ರಾಜೆಕ್ಟ್ ಗಾಗಿ ಬೇಕಾದ ಸಾಮಾನುಗಳ ಲಿಸ್ಟ್ ಮಾಡುತ್ತಿದ್ದ ನಮ್ಮಲ್ಲೊಬ್ಬರಿಗೂ ಅಂದಿನ ರಾತ್ರಿ ನಮ್ಮ ಜೀವನವನ್ನು ಬದಲಿಸ ಬಹುದಾದ ರಾತ್ರಿ ಎಂಬ ಚಿಕ್ಕ ಸುಳಿವೂ ಇರಲಿಲ್ಲ
(ಮುಂದುವರೆಯುವುದು....)
Subscribe to:
Post Comments (Atom)
1 comment:
ಇದು ಧಾರಾವಾಹಿಯೇ? ಯಾವುದಾದರೂ ಇಂಗ್ಲಿಷ್ ನೋವೆಲ್ ನ ಅನುವಾದವೇ? ಕುತೂಹಲಕರವಾಗಿದೆ.. ಮುಂದಿನ ಭಾಗಕ್ಕಾಗಿ ಕಾಯುವೆ.
Post a Comment