ಆಫೀಸಿನಲ್ಲಿ ಮಾರ್ಟಿನಾನ್ನ ನೋಡಿದಾಕ್ಷಣ ನಾನು ಮರೆತಿದ್ದು ನೆನಪಿಗೆ ಬಂತು ಅವಳ ಪಾರ್ಟಿಯೊಂದಕ್ಕೆ ನನ್ನ ಈವನಿಂಗ್ ಗೌನ್ ಒಂದನ್ನು ಕೊಡುವುದಾಗಿ ಹೇಳಿದ್ದೆ ಮತ್ತು ಇವತ್ತೂ ಮರೆತು ಬಂದಿದ್ದೆ!
ಅದು ಮೆಟರ್ನಿಟಿ ಪಾರ್ಟಿ ಗೌನ್ ಬೆಲೆ ಬಾಳುವ ಸಿಲ್ಕ್ ನದ್ದು ಲೀ ಹುಟ್ಟುವ ಮುಂಚೆ ನನ್ನ ಅಜ್ಜಿ ನನಗೆಂದು ಬೇಬಿ ಶವರ್ ಮಾಡಿದಾಗ ಅಜ್ಜಿ ನನಗೆ ನೀಡಿದ್ದ ಉಡುಗೊರೆ ಅದು. ದಟ್ಟ ಮರೂನ್ ಬಣ್ಣದ ಸಿಲ್ಕಿನ ನುಣುಪಾಪ ಬಟ್ಟೆಯಿಂದ ಸ್ವತಃ ಅಜ್ಜಿಯೇ ತಯಾರಿಸಿದ್ದು ಮುತ್ತುಗಳನ್ನೂ ಸೆಮಿ ಪ್ರೆಶಿಯಸ್ ಸ್ಟೋನ್ಗಳನ್ನು ಹೊಲೆದು ಅಜ್ಜಿ ಅದರ ಅಂದವನ್ನು ಹೆಚ್ಚಿಸಿದ್ದಳು.
ಅದು ಮೆಟರ್ನಿಟಿ ಗೌನ್ ಆದ್ದರಿಂದ ಲೀ ಹುಟ್ಟಿದ ಮೇಲೆ ನಾನು ಅದನ್ನು ಮತ್ತೆಂದೂ ಧರಿಸಿಲ್ಲವಾದರೂ ಅದು ನನಗೆ ಮಧುರ ನೆನಪುಗಳ ಖಜಾನೆ ನನ್ನ ಓಕ್ ಮರದ ಚೆಸ್ಟ್ ನಲ್ಲಿ ಬಟರ್ ಪೇಪರಿನಿಂದ ಆವೃತವಾಗಿ ಬೆಚ್ಚಗೆ ಕೂತಿದೆ ಆಗಾಗ ನನ್ನ ಅಮೂಲ್ಯ ಸಾಮಾನುಗಳನ್ನು ನಾನು ನೋಡಿ ಆನಂದ ಪಡುವಾಗಲೆಲ್ಲಾ ನನ್ನ ಅಜ್ಜಿ ನನಗಾಗಿ ಹೊಲೆದ ಈ ಗೌನ್ ಅನ್ನು ಮುಟ್ಟಿ ಸವರಿ ಆನಂದಿಸುತ್ತಿರುತ್ತೇನೆ
ಮಾರ್ಟೀನಾ ನನ್ನ ಒಳ್ಳೇ ಸ್ನೇಹಿತೆ ಅವಳೀಗ ಆರು ತಿಂಗಳ ಬಸುರಿ ತುಂಬಾ ಒಳ್ಳೆಯ ಹುಡುಗಿ ಹಾಗಾಗಿ ಅವಳಿಗೆ ನನ್ನ ಈ ಗೌನ್ ಕೊಡಲೊಪ್ಪಿದ್ದು ನಾನು.ಅವಳದನ್ನು ಹುಷಾರಾಗಿ ಧರಿಸಿ ಮತ್ತೆ ವಾಪಸು ಮಾಡುತ್ತಾಳೆಂಬ ನಂಬಿಕೆ ನನಗಿದೆ
ಮಾರ್ಟೀನಾ ಹತ್ತಿರ ಹೋಗಿ ಅವಳ ಬೆನ್ನು ತಟ್ಟಿ ಕೇಳಿದೆ "ಏನು ಮಗಳು ಚೆನ್ನಾಗಿ ಒದೀತಿದಾಳಾ...?"
ಮಾರ್ಟೀನಾ ನಕ್ಕು ತಲೆ ಅಲುಗಿಸಿದಳು `'ಸ್ಸಾರಿ ಡಿಯರ್ ಇವತ್ತೂ ನಾನು ಗೌನ್ ಮರೆತೆ ಸಂಜೆ ನಿನ್ನ ಜಾನ್ ನನ್ನು ಮನೆಗೆ ಕಳಿಸು ಅವನ ಹತ್ರ ಕಳಿಸುವೆ"ಎಂದೆ ಅದಕ್ಕವಳು 'ಜಾನ್ ಏನೋ ಮುಖ್ಯವಾದ ಕೆಲಸ ಇದೆ ಅಂದಿದ್ದ ನೋಡುತ್ತೇನೆ ನಾನೇ ಬರಲು ಟ್ರೈ ಮಾಡುತ್ತೇನೆ ಅಂದಳು
ನನಗೆ ಅಂದು ತುಂಬಾ ಕೆಲಸವಿತ್ತು ಅದರಲ್ಲೇ ಮುಳುಗಿ ಹೋದೆ ಮದ್ಯಾನ್ಹ ಮಾರ್ಟೀನಾ ಜತೆ ಲಂಚ್ ತೊಗೊಳುವಾಗ ಕಿಟಕಿಯಿಂದ ಆಚೆ ನೋಡಿದೆ ಆಕಾಶದಲ್ಲಿ ಕಸೂತಿಯಂತೆ ಮೋಡಗಳು... ಪುಟಾಣಿ ನೀಲಿ ಹಕ್ಕಿಯೊಂದು ಮಧುರವಾಗಿ ಹಾಡುತ್ತಿತ್ತು...ಮೇ ತಿಂಗಳ ಬಿಸಿಲು ಹುಲ್ಲಿನ ಮೇಲೆ ಹೂಗಳ ಮೇಲೆ ಬಂಗಾರವಾಗಿ ಹೊಳೆಯುತ್ತಿತ್ತು ಸುಂದರಿ ಮಾರ್ಟೀನಾ ನಸು ನಗುತ್ತಿದ್ದಳು ನಾನು'ಸಿಪ್ಪಿಂಗ್ ಆನ್ ಸಮ್ಮರ್ ಸನ್' ಹಾಡಿಕೊಳ್ಳುತ್ತಾ ನನ್ನ ಛೇರಿಗೆ ವಾಪಸು ಬಂದೆ...
(ಮುಂದುವರೆಯುವುದು...)
Subscribe to:
Post Comments (Atom)
1 comment:
Nice story. Very interesting. Keep it going. I'd love to read more.
Post a Comment