Tuesday, December 4, 2007

ಐದು ಮಿನಿ ಮಿನಿ ಕಥೆ ಗಳು

ಹುಲ್ಲುಗರಿ ಅಳುತ್ತಿತ್ತು... ಮೋಡಕ್ಕೆ ಸಮಾಧಾನ ಹೇಳ್ತಾ...ಮೋಡ ಹಗುರಾಗುತ್ತಿತ್ತು ತನ್ನ ದುಃಖ ಹೇಳಿಕೊಳ್ತಾ...

************
ಆ ಮಗುವಿನ ಅಮ್ಮ ಕೆಲಸಕ್ಕೆ ಹೋಗಿದ್ದಳು ಮಗುವನ್ನು ನಾನು ಆಡಿಸ್ತಾ ಇದ್ದೆ ತಮಾಶಿಗೆ ಹೇಳಿದೆ`ನಾನು ಈಗ ನಿನ್ನನ್ನ ತಿಂದ್ ಬಿಡ್ತೇನೆ...'ಮಗು ಅಳುವ ದನಿಯಲ್ಲಿ ಕೇಳಿತು`ಹಾಗಾದ್ರೆ ನಮ್ಮಮ್ಮಂಗೆ ನಾನು ಬೇಡ್ ವೇ...?

************
ನೀಲಿಯೂ ,ಬೆಳಕಿನ ಕಿರಣವೂ ನೀರ ಹನಿಯೂ ಅಲ್ಲಿತ್ತು
ಅವಳ ಆಕಾಶನೀಲಿ ಕಣ್ಣು... ಅದರಲ್ಲಿ ಇಣುಕಿದ ಹನಿ ಕಣ್ಣೀರು... ಜೊತೆಗೆ ಅವಳ ಕಣ್ಣ ಮಿಂಚು
ಕಾಮನಬಿಲ್ಲು ಮಾತ್ರ ಅಳಿಸಿ ಹೋಗಿತ್ತು

**************
ಅವಳಿಗಳನ್ನು ಹೊತ್ತ ಆಕೆ ಎರಡು ಕುಲಾವಿ ಹೆಣೆದಳು
ಒಂದು ಉಳಿಯಿತು ಒಂದು ಅಳಿಯಿತು
ಎರಡೂ ಕುಲಾವಿಗಳನ್ನು ಬೀದಿ ಮಕ್ಕಳಿಗೆ ಕೊಟ್ಟು ಬಿಟ್ಟಳು

****************
ಶಿಶಿರದಲ್ಲಿ ಬಡವಾದ ಪ್ರೇಮ ವಸಂತದಲ್ಲಿ ಮತ್ತೆ ಚಿಗುರುವುದೇ..?

1 comment:

nishu mane said...

ಮಾಲ, ಬ್ಯೂಟಿಫುಲ್! ಕಥೆಗಳು ಚೆನ್ನಾಗಿವೆ.
ಸತ್ತ ಬಾಳಿಗೇ ಪ್ರೇಮ ಅಮೃತವೆರೆಯೋದು ಹೌದಾದರೆ, ಬಡವಾದ ಪ್ರೇಮ ಮತ್ತೆ ಚಿಗುರೋದು ಯಾವ ಮಹಾ.
ಹಾಗಾಗತ್ತೋ ಇಲ್ವೋ, ಹಾಗಾಗಬಹುದು ಅನ್ನೋ ನಂಬಿಕೆ ನಮ್ಮನ್ನ ಮತ್ತೆ ಮತ್ತೆ ಜೀವಂತವಾಗಿಸುತ್ತಿರುತ್ತದೆ.
ಮೀರ.