Tuesday, November 27, 2007

ಕಥಾಕಾನನದ ಬಗ್ಗೆ...

ಕಥಾ ಕಾನನ ನಾನು ವರ್ಷದ ಹಿಂದೆ ಕಂಡ ಕನಸು
ಇಲ್ಲಿ ಕಾಡಿನ ನಿಗೂಢತೆಯೂ ಸೊಬಗೂ ಮಿಳಿತ
ಕಿರುತೊರೆಯ ಸಿಹಿನೀರು ನೆನಪಿಸುವ ಸಣ್ಣಕಥೆ,
ಧಬಧಬಿಸುವ ಜಲಪಾತದಂತ ಧಾರಾವಾಹಿ,
ಕಾಡಿನ ಸಿಹಿ ಜೇನಿನ ಹನಿಯಂತ ಮಿನಿ ಕಥೆ
ಜೊತೆಗೆ ಕಚಗುಳಿ ಇಡುವ ಹಾಸ್ಯ
ಒಮ್ಮೆ ಮಂದಹಾಸ ತೇಲಿಸುವ ಇನ್ನೊಮ್ಮೆ ನಿಟ್ಟುಸಿರಾಗುವ ಕವಿತೆ
ಒಂದ್ ಸಣ್ಣ ಬ್ರೇಕ್ ನಂಥಾ ಚರ್ಚೆ
ಕಾನನದಲ್ಲಿ ಅಲೆದಾಡುವಾಗ ಬಾಯಾಡಿಸಲು
ಕುರುಕಲು ಹುರಿಗಾಳಿನಂತ ಬಾಲ್ಯದ ನೆನಪುಗಳು...

**************
ನಿನ್ನೆರಡು ಬ್ಲಾಗುಗಳು ಮಕಾಡೆ ಮಲಗಿರುವಾಗ ಇನ್ನೊಂದು ಹೊಸದು ಶುರು ಮಾಡುತ್ತೀಯಾ ಮಾಡು ಮಾಡು ನಾವೆಲ್ಲಾ ಬರುತ್ತೇವೆ ಎಂದು ಹುರಿದುಂಬಿಸುತ್ತಿರುವ ಮಿತ್ರರೆಲ್ಲರಿಗೂ,ಸದ್ದಿಲ್ಲದೇ ಬಂದು ಓದಿ ಆನಂದಿಸುವ ಕನ್ನಡ ಪ್ರೇಮಿಗಳಿಗೂ ಸ್ವಾಗತ

ಕಥಾ ಕಾನನಕ್ಕೆ ಬನ್ನಿ...

2 comments:

Unknown said...

ಯಾಕಾಗಬಾರದು.. ನಿಮ್ಮ ಉತ್ಸಾಹ ಮೆಚ್ಚಬೇಕು. ಚೆನ್ನಾಗಿ ಬರೆಯುತ್ತೀರಿ. ಮುಂದುವರೆಸಿ.. ಎಷ್ಟು ಬ್ಲಾಗ ಇದ್ದರೇನು..
ಒಂದೇ ಒಂದು ಪ್ರಶ್ನೆ... ನೀವು ಚಿತ್ರದುರ್ಗದವರೇ?

ಸುಪ್ತದೀಪ್ತಿ suptadeepti said...

ಒಂದು ಹೆಸರಿನ ಮೆಚ್ಚುಗೆಗಾಗಿ ಮತ್ತೊಂದು ಬ್ಲಾಗ್ ಚಪ್ಪರ ಕಟ್ಟಿ, ಅದರಲ್ಲಿ ಕಥಾಸುಮ ಹಂದರ ಹರಡುತ್ತಿರುವ ನಿನ್ನ ಉತ್ಸಾಹಕ್ಕೆ ನಮೋ ನಮೋ.