Saturday, May 17, 2008

ಎರಡು ಮಿನಿ ಕಥೆಗಳು

ಜೀವನದ ಅರ್ಥವೇನು?
ನಾನು ಅದೇ ತಾನೇ ಅರಳುತ್ತಿದ್ದ
ತಾವರೆಯನ್ನು ಕೇಳಿದೆ
ಅದು ಪೂರ್ಣ ಅರಳಿ ದಳ ತೆರೆದು ತೋರಿತು
ಅಲ್ಲೇನೂ ಇರಲಿಲ್ಲ
ಅನಂತ ಖಾಲಿತನ
ಒಂದಿಷ್ಟು ಕೇಸರಗಳು
ಇಬ್ಬನಿಯ ಹನಿಯ ಮೇಲೆ ಪ್ರತಿಫಲಿತವಾಗುತ್ತಿದ್ದ ಆಕಾಶ...

*************
ಅವನು ಕವಿ
ಅವಳು ಚೆಲುವಿನ ಖನಿ
ಅಂದು ತನ್ನ ಪ್ರಿಯತಮೆಯ ಹೊಳಪು ಕಂಗಳನ್ನು
ಅವನು ಜೋಡಿತಾರೆಗಳಿಗೆ ಹೋಲಿಸಿ ಹಾಡಿದ
ನಂತರ ಅವನಿಗನ್ನಿಸಿತು
ಇವಳು ತನ್ನೆರಡು ನಕ್ಷತ್ರ ಕಣ್ಣುಗಳಿಂದ ಆಕಾಶ ದಿಟ್ಟಿಸಿದರೆ
ಆಕಾಶವೋ ತನ್ನ ಸಾವಿರ ಕಣ್ಣುಗಳಿಂದ
ಇವಳನ್ನೇ ದಿಟ್ಟಿಸುತ್ತಿದೆ
ಯಾರ ಸೌಂದರ್ಯ ಹಿರಿದು...?
ಪ್ರಶ್ನೆ ಪ್ರಶ್ನೆ ಯಾಗೇ ಉಳಿಯಿತು...

4 comments:

Mahantesh said...

ಜೀವನದ ಅರ್ಥವೇನು?
ಅಲ್ಲೇನೂ ಇರಲಿಲ್ಲ
ಅನಂತ ಖಾಲಿತನ

nija kanri.....neevu jasti philosoper agta idira...

ಸುಪ್ತದೀಪ್ತಿ suptadeepti said...

ಈಗಷ್ಟೇ ಚಿಮ್ಮುವ ಪುಟಿಯುವ ಚೇತನವನ್ನು ಕೈಯಲ್ಲಿ ಹಿಡಿದು ಅದು ಹೇಗೆ ಅನಂತ ಖಾಲಿತನ ತೋರಿತು ನಿನಗೆ?

ಆಕಾಶದ ಸಾವಿರ ಕಣ್ಣುಗಳು ಎಲ್ಲರನ್ನೂ ಕಾಣುತ್ತಿರಲಿ... ಸದಾ.

ಶಾಂತಲಾ ಭಂಡಿ (ಸನ್ನಿಧಿ) said...

ಮಾಲಾ ಅವರೆ...
ಕವಿತೆಗಳು ತುಂಬ ಇಷ್ಟವಾದ್ವು.

ತೇಜಸ್ವಿನಿ ಹೆಗಡೆ said...

ಮಾಲಾ ಅವರೆ,

ತುಂಬಾ ಅರ್ಥವತ್ತಾದ ಕವಿತೆಗಳು(ಮಿನಿ ಕಥೆಗಳು).