Tuesday, May 6, 2008

ಬಂಗಾರದ ನೆರಳು

ಬೆಣ್ಣೆ ಬಿಂದಿಗೆ ಬಂಗಾರದ ಬಟ್ಟಲು
ಚೆಂಡು ಮಲ್ಲಿಗೆ ಸುವರ್ಣ ನಿರಿಗಳು
ಹೊನ್ನಿನ ಕಣ್ಣಿನ ಸೇವಂತಿಗೆ ನಗಲು
ಕಣ ಕಣ ಚಿನ್ನವೆ ಎಲ್ಲೆಲ್ಲು

ಪರಾಗ ರಾಗ ಮೈಯೆಲ್ಲಾ ಬಳಿದು
ಹೂವಿಂದ ಹೂವಿಗೆ ಸುತ್ತಿ ಸುಳಿದು
ಬಂಗಾರದ ಇನಿ ಹನಿಗಳ ಸೆಳೆದು
ಸವಿಯುವ ಇವ ನಲಿ ನಲಿದು

ಹಳದಿ ಗುಲಾಬಿಯ ನಸು ನಗೆ ಹೊಳಪು
ಸಾಸಿವೆ ಹೂವಿದು ಕಿರು ತಾರೆಯ ನೆನಪು
ಹಾದಿ ಬದಿಯ ಅರಿಸಿನದ ನೆರಳು
ಅಲ್ಲೇ ಸುಳಿದಿದೆ ಬಂಗಾರದ ಕೊರಳು

1 comment:

ಸುಪ್ತದೀಪ್ತಿ suptadeepti said...

BEE Movie ನೋಡಿದ ಪ್ರಭಾವವಾ? ವಸಂತ ಕಾಲಕ್ಕೆ ಸರಿಯಾಗಿದೆ.

ಅಂತೂ ಚಿನ್ನ ಚೆಲುವಿ ಹಿನ್ನೆಲೆಗೆ ಹೋಗಿ ಬಂಗಾರದ ನೆರಳನ್ನು ಹರಡಿದ್ದಾರೆ ಅಂತಾಯ್ತು!!