ಕಾರ್ಮೋಡದಂಚಿನ ಗೆರೆ
ಮೂರು ವರುಷದ ಹಿಂದೆ ಒಂದು ಸಂಜೆ ಬೊಗಸೆಯಲ್ಲಿ ಕೆನ್ನೆ ತುಂಬಿಕೊಂಡು ಲ್ಯಾಪ್ ಟಾಪ್ ನ ಮುಂದೆ ಕೂತಿದ್ದಳು ನಿಶಿ .ತುಟಿಯಂಚಿನಲ್ಲಿ ನಸು ನಗುವಿತ್ತು ಕೆನ್ನೆಯಲ್ಲಿ ಕೆಂಪು...ಮನದ ತುಂಬಾ ಹೊಂಗನಸು... ವೀಕೆಂಡಿಗೆ ಆದಿ ಬೇ ಏರಿಯಾಗೆ ಬರುತ್ತಿದ್ದಾನೆ...!
ನಿಮಿಷದ ಮುಂಚೆಯಷ್ಟೇ ಚಾಟ್ ಮಾಡುತ್ತಾ ವೀಕೆಂಡು ಏನು ಮಾಡುತ್ತಿದ್ದೀಯಾ ಅಂತ ಕೇಳಿದ್ದ ಇವಳು ಯಾಕೆ ಅಂತ ಕೇಳುವ ಮೊದಲೇ ನಾನು ಬರ್ತಿದೇನೆ ನಿನ್ನ ವೀಕೆಂಡ್ ಈಸ್ ಬುಕ್ಡ್ ಅಂತ ಹೇಳಿದ್ದಕ್ಕೆ ನಿಶಿಗೆ ಇವನ್ಯಾರು ಅಂತ ನನ್ನ ಮೇಲೆ ಹೀಗೆ ಅಧಿಕಾರ ಚಲಾಯಿಸಲು.. ಅಂತ ಕೋಪ ಬಂದರೂ ಯಾಕೋ ಒಳಗೊಳಗೇ ಖುಷಿಯೂ ಆಗಿದ್ದು ಸುಳ್ಳಲ್ಲ
ಉಫ್... ಆದಿ ನನ್ನ ಸ್ನೇಹಿತ ಅಷ್ಟೇ...ಬರೀ ಕಳೆದೆರಡು ವರ್ಷ ಕ್ಲ್ಯಾಸ್ಮೇಟ್ ಆಗಿದ್ದವ ಅವನು ಬಂದರೆ ಬರಲಿ ನನಗೇನೂ..ನಾನೇಕೆ ಸಂಭ್ರಮಪಡ ಬೇಕು ಅಂತೆಲ್ಲಾ ಅಂದುಕೊಂಡಳು ಆದರೂ ಮನದ ಹಕ್ಕಿ ಹಾಡುವುದು ನಿಲ್ಲಿಸಲಿಲ್ಲ
*************
ಏನೂ ನಮ್ ಪ್ರಿನ್ಸೆಸ್ ಭಾರೀ ಸಿಂಗಾರ ವಾಗುತಿರೋದೂ..? ಅಂತ ಇವಳೊಂದಿಗೆ ಮನೆ ಶೇರ್ ಮಾಡುತ್ತಿದ್ದ ಸ್ನೇಹಿತೆ ಜ್ಯೋತಿ ಕಣ್ ಹೊಡೆದು ರೇಗಿಸಿದಾಗ ನಿಶಿ 'ಏನಿಲಾಪ್ಪ ಆದಿನ ಸುಮ್ನೆ ಮೀಟ್ ಮಾಡಲು ಹೋಗ್ತಾ ಇರೋದಷ್ಟೇ...'ಅಂತ ಸಮಜಾಯಿಷಿ ಕೊಟ್ಟರೂ ಅವಳು ಬಿಡದೆ ಶಿಷಿಯನ್ನು ಸಾಕಷ್ಟು ಕಿಚಾಯಿಸಿಯೇ ಬೀಳ್ಕೊಟ್ಟದ್ದು. ಅದೂ ನಿಶಿ ನಿಜವಾಗಲೂ ಕೋಪ ಮಾಡಿಕೊಂಡು "ಜೋ...ಸುಮ್ ಸುಮ್ನೆ ನೀನೇನೋ ಇಲ್ಲದ್ದು ಕಲ್ಪಿಸಿಕೊಳ್ಳಬೇಡ .. ಹಿ ಈಸ್ ಜಸ್ಟ್ ಅನ್ ಓಲ್ಡ್ ಕ್ಲ್ಯಾಸ್ ಮೇಟ್ ಅಷ್ಟೇ.."ಅಂತ ದುಸು ಮುಸು ಮಾಡಿದಾಗ.
**************
ಸೋಮವಾರವೂ ಬಂದಾಯ್ತು ಆದಿ ನೆನ್ನೆ ಲಾಸ್ ಏಂಜಲೀಸ್ ಗೆ ವಾಪಸ್ಸು ಹೋಗಿಯಾಯ್ತು ನಿಶಿ ಇನ್ನೂ ಅವನ ಗುಂಗಲ್ಲೇ ಇದ್ದಳು ಜೊತೆ ಜೋ ಬೇರೆ ಇದ್ದಳಲ್ಲ ಅಕಸ್ಮಾತ್ ಇವಳು ಮರೆಯಲೆತ್ನಿಸಿದರೂ ಏನಾದರೂ ನೆಪ ಮಾಡಿ ನಿಶಿಯ ನ್ನ ರೇಗಿಸುತ್ತಿದ್ದಳು ಓಲ್ಡ್ ಕ್ಲ್ಯಾಸ್ ಮೇಟ್ ಅಂದ್ರೆ ನಿಶಿ ಎಷ್ಟು ಓಲ್ಡೇ...ಎಂಭತ್ತಾ..?ಅಬ್ಬಾ ಇನ್ ಮೇಲೆ ನಮ್ ನಿಶಿ ಇಡ್ಲಿ ದೋಸೆ ತಿನ್ನಕ್ಕೆಲ್ಲಾ ಬರುವುದಿಲ್ಲಪ್ಪಾ ಅವಳು ಪಿ.ಎಫ್ ಚಾಂಗ್ ಗೆ ಮಾತ್ರ ಹೋಗೋದೂ... ನಿಶಿ ವೆದರ್ ರಿಪೋರ್ಟ್ ನೋಡ್ದಾ
'ಎಲ್ಲೇ'ನಲ್ಲಿ ಇದ್ದಕ್ಕಿದ್ದ ಹಾಗೆ ತುಂಭಾ ಛಳಿ ಶುರುವಾಗಿದೆಯಂತೆ....
ನಿಶಿ ಜೋ ಕಡೇಗೆ ಉರಿ ನೋಟ ಬೀರುವಳು ಆದರೆ ಮನಸ್ಸಿನಲ್ಲಿ ತಿನ್ನುತ್ತಿದ್ದದ್ದು ಮಾತ್ರ ಮಂಡಿಗೆ...
(ಮುಂದುವರೆಯುವುದು)
ಟಿಪ್ಪಣಿ-
ಫೆಬ್ ನಲ್ಲಿ ಹೊಸಧಾರಾವಹಿ ಶುರು ಮಾಡುವುದಾಗಿ ಹೇಳಿದ್ದೆ ಸ್ವಲ್ಪ ನಿಧಾನವಾಯಿತು ಸಾರಿ...
ಕಥೆ ಓದಿದಿರಲ್ಲ ಏನನ್ನಿಸಿತು ಹೇಳಿ...
Subscribe to:
Post Comments (Atom)
4 comments:
ಸಾರಿ ಕೇಳಿದ್ರೂ ಪರವಾಗಿಲ್ಲ ಹೊಸದೊಂದು ಧಾರಾವಾಹಿ ಶುರುವಾಗಿದೆಯಲ್ಲ, ಅದೇ ಖುಷಿ.
ಅಂತು ಫೆಬ್ ಬಂತಲ್ಲ:). ಧಾರವಾಹಿ ಪ್ರಾರಂಭವಾಗಿದ್ದು ಖುಷಿ. ಚೆನ್ನಾಗಿದೆ ಅನ್ನಿಸಿತು.
ಪಿ ಎಸ್ ಪಿ.
dharavahi odade tumbadinagalagidvu tumba chennagide
dharawahi tumbaa chennagide
Post a Comment