ಅಂತೂ ಕೊನೆಗೊಮ್ಮೆ ಆಲಿಕಲ್ಲು ಬೀಳುವುದು ನಿಂತಿತು ಗಾಳಿ ಸಿಳ್ಳಿಡುತ್ತಿತ್ತು.
ವೂಊ..ಊ..ಊ... ....
ವೋ...ಓ...ಓ... ...
ವು..ವು..ವೂ... ...
ಗಾಳಿ ಒಮ್ಮೆ ದಯಾನೀಯವಾಗಿ ಗೋಗೆರೆದರೆ ಮರುಘಳಿಗೆ 'ನನ್ನೆದುರಿಗೆ ಬಂದು ನೋಡು ನಿನ್ನನ್ನ ಹೇಗೆ ತರೆದು ಬಿಸಾಕುತ್ತೇನೆ ಅಂತ...ಎಂದು ಘರ್ಜಿಸುತ್ತಿರುವಂತೆ ಅನ್ನಿಸುತ್ತಿತ್ತು ಲೀ ತನ್ನ ಕಂದು ಕಣ್ಣ ತುಂಬಾ ನೀರು ತುಂಬಿಕೊಂಡು `ಮಾಮ್...' ಅಂತ ನನ್ನ ಕಡೆ ನೋಡಿದ ಅವನ ಮುಖ ಬಿಳುಚಿ ಕೊಂಡಿತ್ತು ಅವನ ಪುಟಾಣಿ ಮೈ ಕಂಪಿಸುತ್ತಿತ್ತು ನಾನು ಅವನ ಸುತ್ತ ಕೈ ಹಾಕಿ 'ಇಟ್ ವಿಲ್ ಬಿ ಓ.ಕೆ ಸನೀ...' ಅಂತ ಸಮಾಧಾನ ಮಾಡಿದೆ "ಮಾಮ್... ಜೇ..." ಅಂತ ಜೋರಾಗಿ ಅಳಲು ಶುರು ಮಾಡಿಬಿಟ್ಟ ಅವನು.ನಾನು ಇಷ್ಟು ಹೊತ್ತೂ ಇವನು ತನಗೇನಾದರೂ ಆಗಿ ಬಿಡುತ್ತೆಂದು ಹೆದರಿ ಕೊಂಡಿದ್ದಾನೆ ಅಂದು ಕೊಂಡಿದ್ದೆ. ಐ ವಾಸ್ ಸೋ ರಾಂಗ್..! ಅವನು ಇಷ್ಟು ಹೊತ್ತು ಯೋಚಿಸುತ್ತಿದ್ದುದೆಲ್ಲಾ ಜೇ ಬಗ್ಗೆ....ತನ್ನ ಬಿಗ್ ಬ್ರೋ ಬಗ್ಗೆ...ಅಂಥಾ ತಳಮಳದ ಹೊತ್ತಿನಲ್ಲೂ ನನ್ನ ಹೃದಯ ತುಂಬಿ ಬಂತು
ಹಾಗೇ ಎರಡು ಘಳಿಗೆ ನಿಂತಿರಬೇಕು ನಾನು...ಎಲ್ಲಿಂದಲೋ 'ಮಾಮ್...ಓಪನ್ ದ ಡೋರ್..." ಎಂಬ ಕೂಗು ಅಸ್ಪಷ್ಟವಾಗಿ ಕೇಳಿಬಂತು ನಾನು ಸುಮ್ಮನೇ ಕಣ್ಣು ಮುಚ್ಚಿಕೊಂಡು ನಿಂತಿದ್ದೆ ಲೀ ನನ್ನ ತೋಳು ಜಗ್ಗಿ "ಮಾಮ್ ಜೇ... ಯೆಸ್ ಅದು
ಜೇ ನೇ...ಪ್ಲೀಸ್...ಬಾಗಿಲು ತೆಗೆದು ನೋಡಮ್ಮಾ..." ಅಂತ ನನ್ನನ್ನು ಜಗ್ಗುತ್ತಾ ಕೂಗತೊಡಗಿದ ನಾನು ಅವನಿಂದ ಬಿಡಿಸಿಕೊಂದು ಆಲಿಸಿದೆ
ಗಾಳಿ ಸಿಳ್ಳಿಡುವ ಸದ್ದು...
ವೂಊ..ಊ..ಊ... .....
ವೋ...ಓ...ಓ.. ......
ವು..ವು..ವೂ.. .....
ನಡುವಲ್ಲಿ ಮಾಮ್ ...ಓಪನ್ ದ ಡೋರ್...'
ಹೌದು ಅದು ಜೇಯ ದನಿಯೇ ....
ಅಂತೂ ನನ್ನ ಜೇ ನನ್ನ ಬಳಿ ಬಂದು ಬಿಟ್ಟ...
ತುದಿಗಾಲಿನಲ್ಲಿ ನಡೆದು ಹೋಗಿ ಬಾಗಿಲು ತೆರೆದೆ.ನನ್ನ ಕಣ್ಣೆದುರಿಗೆ ತೆರೆದುಕೊಂಡ ದೃಶ್ಯದಿಂದ ಎದೆ ಒಡೆಯುವಂತಾಯಿತು.ಜೇಯ ಕೈ ಮೈಯೆಲ್ಲಾ ರಕ್ತ...ಜೊತೆಗೆ ಅವನು ಕರೆತಂದಿದ್ದು ಅರೆಪ್ರ ಜ್ಞಾವಸ್ಥೆಯಲ್ಲಿದ್ದ ಮಾರ್ಟೀನಾ...
ಮಾರ್ಟೀನಳ ಎಡ ಭುಜ ಮುರಿದು ಹೋಗಿತ್ತು...
ಎಡಗಾಲಿನಪಾದ ಅಪ್ಪಚ್ಚಿಯಾಗಿತ್ತು...
ಅವಳೆಷ್ಟು ರಕ್ತದ ಉಂಡೆಯಂತೆ ಕಾಣುತ್ತಿದ್ದಳೆಂದರೆ ಅವಳ ಸದ್ಯದ ಅವಸ್ಥೆಯಲ್ಲಿ ಅವಳೀಗೆ ಎಲ್ಲಿಲ್ಲಿಗೆ ಪೆಟ್ಟು ಬಿದ್ದಿದೆ ಎಂದು ಅಂದಾಜು ಮಾಡಲೂ ಸಾದ್ಯವಿರಲಿಲ್ಲ
ಲೀ ಅವಳನ್ನು ನೋಡಿ ಜೋರಾಗಿ ಕಿರುಚಿಕೊಂಡು ಅಳಲಾರಂಭಿಸಿದ. ಫಸ್ಟ್ ಏಡ್ ಕಲಿತ ಜೇ ಅವಳ ಭುಜ ಮತ್ತು ಪಾದಕ್ಕೆ ಪಟ್ಟಿ ಕಟ್ಟಲು ನನಗೆ ಸಹಾಯ ಮಾಡಿದ ಅಷ್ಟಲ್ಲಿ ಸುಧಾರಿಸಿಕೊಂಡಿದ್ದ ಲೀ ತನ್ನ ವಾಟರ್ ಬಾಟಲಿನಿಂದ ಮಾರ್ಟೀನಾಗೆ ನೀರು ಕುಡಿಸಲು ಪ್ರಯತ್ನಿಸುತ್ತಿದ್ದ. ಮಾರ್ಟಿನಾಗೆ ಪಟ್ಟಿ ಕಟ್ಟುತ್ತಾ ಅವಳಿಗೀಗ ಎಷ್ಟು ವಾರದ ಪ್ರೆಗ್ನೆನ್ಸಿ ಎಂದು ಅಂದಾಜಿಸಲು ನಾನು ಪ್ರಯತ್ನಿಸುತ್ತಿದ್ದೆ ಅವಳ ಹೊಟ್ಟೆಗೇನಾದರೂ ಪೆಟ್ಟು ಬಿದ್ದಿದೆಯೇ ಎಂದು ನನಗೆ ಆತಂಕ ವಾಗುತ್ತಿತ್ತು
ಅಸಲಿಗೆ ಇವಳು ಇದರಲ್ಲಿ ಸಿಕ್ಕಾಕಿ ಕೊಂಡಿದ್ದು ಹೇಗೆ...? ಸುಮಾರು ಒಂದು ಘಂಟೆ ಹಿಂದೆ ಅವಳು ನಮ್ಮ ಮನೆ ಬಿಟ್ಟಿದ್ದು..ನಾನು ಇದೆಲ್ಲಾ ಯೋಚಿಸುತ್ತಿರುವಾಗ ತಾನು ಫ್ರೆಂಡ್ ಮನೆಯಿಂದ ಮನೆಗೆ ಬರುವಾಗ ನೆಲ ಕಚ್ಚಿದ ಓಕ್ ಮರದಡಿಯಲ್ಲಿ ಮಾರ್ಟೀನಾ ಸಿಕ್ಕಿಹಾಕಿಕೊಂಡಿದ್ದಳೆಂದು ಅವಳನ್ನು ಮರದ ಹಿಡಿತದಿಂದ ತಪ್ಪಿಸಿ ಎಳೆ ತರಲು ತಾನು ಸಾಕಷ್ಟು ಶ್ರಮ ಪಡ ಬೇಕಾಯಿತೆಂದು ಜೇ ಹೇಳಿದ...ನಾನು ಮುಂದೇನು ಮಾಡುವುದೆಂದು ಯೋಚಿಸಲು ಶುರು ಮಾಡಿದ್ದೆನಷ್ಟೇ...
ಇದ್ದಕ್ಕಿದ್ದಂತೆ ಮನೆಯ ಗೋಡೆಗಳೆಲ್ಲಾ ಅದುರಲಾರಂಭಿಸಿದವು ಚಿಲಕಗಳು ಒಂದೇ ಸಮಸೆ ಕಟಕಟಾಯಿಸ ತೊಡಗಿದವು ನಾನು ಡೋರ್ ನಾಬ್ ಮೇಲೆ ಕೈಯಿಟ್ಟು ನೋಡಿದೆ
ಓ...ಗಾಡ್...ನನ್ನನ್ನು ಬಲವಾಗಿ ಯಾರೋ ಎಳೆದು ಕೊಳ್ಳುತ್ತಿದ್ದಾರೆ ....ಜೋರಾಗಿ ಕಿರುಚಿದೆ
ಲೀ... ಜೇ...ರಶ್ ಟು ದ ಸೇಫ್ ಪ್ಲೇಸ್...
ಅವರಿಬ್ಬರೂ ಹೇಗೋ ಮಾರ್ಟೀನಾನ್ನ ಎಳೆದುಕೊಂಡು ಬಾತ್ ರೂಮಿಗೆ ಓಡಿದರು ಆಕ್ಷಣದಲ್ಲಿ ಹೇಗೋ ನನಗೆ ನೆನಪಿಗೆ ಬಂತು tornado ಬಂದಾಗ you should pull a mattress over you ಅಂತ.ನಮ್ಮfuton ನ mattress ಅನ್ನು ನನ್ನೆಲ್ಲಾ ಶಕ್ತಿ ಬಿಟ್ಟು ಬಾತ್ ರೂಮಿಗೆ ಎಳೆದು ಕೊಂಡು ಹೋದೆ
ಜೇ ನನ್ನ ಮುಖ ನೋಡಿದ
ಮಾರ್ಟೀನಾ ಸಣ್ಣಗೆ ನರಳುತ್ತಿದ್ದಳು.
ಲೀ ತನ್ನ ಪುಟ್ಟ ಕೈಗಳಿಂದ ಮಾರ್ಟಿನಾ ಳ ತಲೆ ಸವರುತ್ತಿದ್ದ.
ನಾನು ಜೇ ಎರಡೂ ಕಡೆ ಮತ್ತು ನಮ್ಮಿಬ್ಬರ ಮಧ್ಯೆ ಮಾರ್ಟಿನಾ ಮತ್ತು ಲೀಯನ್ನು ಹಾಕಿಕೊಂದು ಕೂರುವುದೆಂದು ಅವಸರವಾಗಿ ಪಿಸುಗುಟ್ಟಿ ಕೊಂಡೆವು ನನ್ನ ಮೈಯಿನ,ಮನದ ಶಕ್ತಿಯೆಲ್ಲಾ ಬಸಿದು ಹೋದಂತಾಗಿ ನಾನು ಕಣ್ಣು ಮುಚ್ಚಿ ನೆಲದ ಮೇಲೆ ಕುಕ್ಕರಿಸಿದೆ
ಗಾಳಿ ಭಯಾನಕವಾಗಿ
ಸಿಳ್ಳಿಡುತ್ತಾ...
ಘೀಳಿಡುತ್ತಾ...
ಸಿಡುಕುತ್ತಾ...
ವ್ಯಗ್ರವಾಗಿ ಗರ್ಜಿಸುತ್ತಿತ್ತು...
ವೂಊ..ಊ..ಊ... ...
ವೋ...ಓ...ಓ.. . ....
ವು..ವು..ವೂ... ....
(ಮುಂದುವರೆಯುವುದು....)
Subscribe to:
Post Comments (Atom)
3 comments:
ಈ ಕಥೆ ಮುಂಧುವರಿತ್ತಾ ಅಲ್ವಾ?
ಏನು ಮಾಡಲೀ ನೀವೇ ಹೇಳಿ ಮುಂದುವರೆಸಲೋ ಸಾಕೋ...
dayavittu mundavarisi...:)-
muMdina KaMtigaagi kayutta...
Post a Comment