Monday, August 18, 2008

ಆರಿಹೋಯಿತೆ ನೀಲಿ ಕಣ್ಣಿನ ಬೆಳಕು...? (ಭಾಗ-ಹತ್ತು)

ನಾನಾಗ ಒಂದು ರೀತಿ ಅರ್ಧಎಚ್ಚರದ ಸ್ಥಿತಿಯಲ್ಲಿ ಇದ್ದೆನೆನ್ನಬೇಕು ಒಂದು ಗಳಿಗೆ ನಾನು ಸ್ಟಿರಿಂಗ್ ವ್ಹೀಲ್ ಹಿಡಿದಿದ್ದೇನೆಂಬುದು ನೆನಪಲ್ಲಿ ಇದೆ ಇನ್ನೊಂದು ಗಳಿಗೆ ಮನಸ್ಸು ಎಲ್ಲೋ ಹಾರಿ ಹೋಗಿದೆ ಹಿಂದಿನ ಸೀಟಿನಲ್ಲಿ ಮಾರ್ಟೀನಾ ಸಾವಿನೊಂದಿಗೆ ಸೆಣೆಸುತ್ತಾ ಇದ್ದಾಳೆಂದು ಗೊತ್ತು ಆದರೆ ಮನಸ್ಸುಎನೂ ಆಗಿಲ್ಲ ಅಂತ ಏನೋ ಹೇಳುತ್ತಿದೆ ಬಹುಷಃ ಆಗ ನನಗೆ ತುಂಬಾ ಸುಸ್ತಾಗಿತ್ತೇನೋ... ಅವತ್ತು ಬೆಳಗ್ಗೆ ಎದ್ದಾಗಿನಿಂದಎಷ್ಟೆಲ್ಲಾ ಸಂಗತಿಗಳು ನಡೆದಿದ್ದವು...ಅಥ್ವಾ ನಡೆದ ದುರಂತವನ್ನು ನನ್ನ ಮನಸ್ಸು ಒಪ್ಪಿಕೊಳ್ಳಲು ಹಿಂಜರಿಯುತ್ತಾ ಇತ್ತಾ...?


ಲೀ ತನ್ನ ಕಂದು ಕಣ್ಣುಗಳ ತುಂಬಾ ಭಯಮಿಶ್ರಿತ ಕುತೂಹಲ ತುಂಬಿಕೊಂಡು ಕಿಟಕಿಯಿಂದ ಹೊರನೋಡುತ್ತಿದ್ದ ಎಲ್ಲೆಡೆಯೂ ಮರ ಸೀಳಿದ ವಾಸನೆ...!ಹೊಸ ಪೈನ್ ವಾಸನೆ ನನಗೆ ಯಾವತ್ತಿಗೂ ಇಷ್ಟ ಆದರೆ ಈಗ ಮೂಗು ಹಿಡಿಯುತ್ತಿದೆ ಜೊತೆಗೆ ಒಂಥರಾ ಕೆಸರು ಮಿಶ್ರಿತ ಆಲಿಕಲ್ಲಿನ ವಿಚಿತ್ರ ವಾಸನೆ...

ರಸ್ತೆಯಲ್ಲಿ ಎಲ್ಲೆಡೆಯೂ ಮರದ ಚೂರುಗಳು ವಿರೂಪಗೊಂಡ ಏನೇನೋ ಸಾಮಾನುಗಳು...ಮುರಿದ ಪ್ಲೇಟುಗಳೂ ಸ್ಟೀಲಿನ ಕುಕಿಂಗ್ ಪಾಟುಗಳೂ ಕಾಣಿಸಿದವು ರಸ್ತೆ ಮಧ್ಯದಲ್ಲಿ ಕಿಂಗ್ ಸೈಜಿ ನ ರೆಫ್ರಿಜಿರೇಟರ್ ಬಿದ್ದಿತ್ತು ಬ್ರೆಡ್ ತುಂಡನ್ನು ಹಿಸುಕಿದಂತೆ ಹಿಸುಕಲ್ಪಟ್ಟಿದ್ದ ವಾಶಿಂಗ್ ಮಿಶೀನ್ ಡ್ರೈಯರ್ ಗಳು ರಸ್ತೆ ಮೂಲೆಯಲ್ಲಿ ಕಾಣಿಸಿದವು ಯಾರ್ಯಾರ ಮನೆಯ ಸಾಮಾನುಗಳೋ...ಎಷ್ಟು ಆಸ್ಠೆಯಿಂದ ತಂದಿಟ್ಟುಕೊಂಡವುಗಳೋ...ಆ ಸಾಮಾನುಗಳ ಕಂತುಗಳನ್ನಾದರೋ ಪೂರ್ತಿ ಕಟ್ಟಿದ್ದರೋ ಇಲ್ಲವೋ... ಹುಟ್ಟು ಹಬ್ಬಕ್ಕೆ ,ಕ್ರಿಸ್ಮಸ್ ಗೆ ಅಂತೆಲ್ಲಾ ಎಷ್ಟು ಪ್ರೀತಿ ಯಿಂದ ಯಾರ್ಯಾರು ಕೊಟ್ಟ ಉಡುಗೊರೆಗಳೋ...
ರಸ್ತೆ ಪೂರ್ತಿ ಇಂಥಾ ದೃಶ್ಯಗಳೇ...

ನನ್ನ ಕಣ್ಣು ಮಂಜಾಯಿತು


ನಾನು ಕಾರು ಹುಷಾರಾಗಿ ಓಡಿಸಿದರೂ ಕೆಲವೇ ನಿಮಿಷಗಳಲ್ಲಿ ಒಂದೊಂದಾಗಿ ಎಲ್ಲಾ ನಾಲ್ಕು ಟೈರುಗಳೂ ಪಂಕ್ಚರ್ ಆದವು ಆದರೂ ನಾನು ಪಟ್ಟು ಬಿಡದೆ ಓಡಿಸಿದೆ joy ದಾಟಿ Mulliville ಸಮೀಪಿಸಿದೆವು ಸುಮಾರು ಹತ್ತು ಮೈಲು ಬಂದಿದ್ದೆವು ಅಷ್ಟೇ ಮಾರ್ಟಿನಾ ಎಕೋ ಸುಮ್ಮನಾಗಿಬಿಟ್ಟಿದ್ದಳು ನಾನು ಲೀ ಮಾರ್ಟೀನಾ ಹೇಗಿದ್ದಾಳೆ ಎಂದು ಕೇಳಿದಾಗ ಲೀ `ಶಿ ಈಸ್ ಬ್ರೀದಿಂಗ್...ಡೋಂಟ್ ವರಿ' ಅಂದ ನನಗೆ ಬೇರೆ ದಾರಿ ಇರಲಿಲ್ಲ ಆ ಹುಡುಗನ ಮಾತನ್ನು ನಂಬಲೇ ಬೇಕಿತ್ತು ಹಲ್ಲು ಕಚ್ಚಿಕೊಂಡು ಕಾರು ಓಡಿಸಿದೆ Bucklin ಕೂಡಾ ದಾಟಿದೆವು ಮತ್ತೂ ಹತ್ತು ಮೈಲಿ ಕ್ರಮಿಸಿದಂತಾಯಿತು ನನಗೇಕೋ ತಡೆಯಲಿಲ್ಲ ಕಾರು ಷೋಲ್ಡರ್ ನಲ್ಲಿ ತೊಗೊಂಡು ನಿಲ್ಲಿಸಿ ಮಾರ್ಟಿನಾನ್ನ ಪರೀಕ್ಷಿಸಿದೆ

ಆ ಆಕಾಶ ನೀಲಿ ಕಣ್ಣುಗಳ ಹೊಳಪು ಮಾಸಿ ಹೋಗುತ್ತಿತ್ತು!!!

ನನ್ನ ಕಣ್ಣುಗಳಿಂದ ದಳದಳ ಎಂದು ಕಣ್ಣೀರು ಸುರಿಯಿತು...

ನಾನು ನಿನ್ನ ಈ ಸ್ಥಿತಿಗೆ ಕಾರಣವಾದೆನೇ ಗೆಳತೀ...

ಈ ಪುಟ್ಟ ಜೀವ....

ಮುಂದೆ ಯೋಚಿಸಲಾಗಲಿಲ್ಲ

ಸುಮ್ಮನೆ ಬಂದು ಮುಂದೆ ಕೂತು ಕಾರು ಶುರು ಮಾಡಿದೆ ನನ್ನ ಯೋಚನಾ ಶಕ್ತಿ ಪೂರ್ತಿ ಕಳೆದು ಹೋಗಿತ್ತು
ಮನಸ್ಸು ಮರದ ಕೊರಡಾಗಿತ್ತು

ಮತ್ತೆ ಇಪ್ಪತ್ತು ನಿಮಿಷ ಸುಮ್ಮನೆ ಮೂಕಳಂತೆ ಕಾರು ಓಡಿಸಿದೆ ಲೀ ಮಾತ್ರ ಅವಳು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿದ್ದಾಳೋ ಇಲ್ಲವೋ ಒಂದಾದ ಮೇಲೆ ಒಂದು ತನ್ನ ಫೇವರೆಟ್ ಕಾರ್ಟೂನುಗಳ ಸ್ಟೊರಿಗಳನ್ನೂ ಮದ್ಯ ಮದ್ಯ ಇದು ಬೇಬಿ ಗೋಸ್ಕರ ಎನ್ನುತ್ತಾ ತಾನು ಚಿಕ್ಕವನಿದ್ದಾಗ ಕಲಿತ ನರ್ಸರಿ ರೈಮುಗಳನ್ನೂ ಹೇಳುತ್ತಾ ಇದ್ದ ನಡು ನಡುವೆ ಡೋಂಟ್ ವರಿ ಮಾರ್ಟೀನಾ ಅಂತ ಬೇರೆ ಹೇಳುತ್ತಿದ್ದ ಅಂತೂ Ford ದಾಟಿದೆವು Thank God... ಇನ್ನೇನು Dodge city ಬಂದು ಬಿಡುತ್ತದೆ ನನಗೆ ಸ್ವಲ್ಪ ಸಮಾಧಾನವಾಯಿತು

ಇಲ್ಲ ನಮ್ಮBad luck ಅಷ್ಟರಲ್ಲೇ ಮುಗಿಯುವಂತೆ ಕಾಣುತ್ತಿರಲಿಲ್ಲ
US-400 west ಮೇಲೆ ಏನೋ ಅಪಘಾತವಾಗಿರಬೇಕು ಟ್ರ್ಯಾಫಿಕ್ ಪೂರ್ತಿ jam ಆಗಿಬಿಟ್ಟಿತ್ತು ಸುಮಾರು ಎರಡು ಮೈಲಿ ಉದ್ದದ jam!!!
ಇದು clear ಆಗುವುದು ಯಾವಾಗ...?
ನಾನು Freeway ಬಿಟ್ಟು ಎದುರಿಗೆ ಸಿಕ್ಕ ಮೊದಲ exit ಆದ 123 north road ತೊಗೊಂಡೆ ಯಾವಾಗಲೋ ಇಲ್ಲಿ ಬಂದ ನೆನಪು.... 123 north road ಮೇಲೇ ಹೋದರೆ ಅದು Spearwill town ಹತ್ತಿರದಲ್ಲೆಲ್ಲೋ 50 west hit ಮಾಡುತ್ತೆ ಅಂತ ನನ್ನ ಮನಸ್ಸು ಹೇಳುತ್ತಿತ್ತು ಒಂದು ಸಾರಿ 50 west ಸಿಕ್ಕರೆ ಸಾಕು ನೇರವಾಗಿ Dodge city ತಲುಪಿಬಿಡಬಹುದು...
ಅದೆಲ್ಲಾ farm land .ಸುತ್ತಲೂ ಹೊಲಗಳು ಇರಬೇಕು ತಂಪಾಗಿ ಮೆಲುವಾಗಿ ಗಾಳಿ ಬೀಸುತ್ತಿತ್ತು
ಆಹಾ..ಈ ಹೊಸ ಗಾಳಿ ಕುಡಿದು ಮನಸ್ಸಿಗೆ ಸ್ವಲ್ಪ ಹಾಯ್ ಎನ್ನಿಸುತ್ತಿದೆ
ಈ Freeway ಗಳ ಸಹವಾಸವೇ ಬೇಡ
ಅಬ್ಬ ಅಂತೂ 123 ರಸ್ತೆ ಮುಗಿಯುವಂತೆ ಕಾಣುತ್ತಿದೆ good...
ಅಗೋ ಅಲ್ಲಿ train track ಕಾಣುತ್ತಿದೆ
ಓ...ಸದ್ಯ ಇನ್ನೇನು 50 west ಸಿಕ್ಕಿಬಿಡುತ್ತದೆ
ನಾನು ಹುರ್ರೇ...ಅಂತ ಕೂಗುವುದೇ ಬಾಕಿ.
correction line road ಎಂಬ ಒಂದು ಸಣ್ಣ ರಸ್ತೆ 123 ಅನ್ನು N 50w ನೊಂದಿಗೆ ಸೇರಿಸುತ್ತದೆ
ಲೀ ಇದ್ದಕ್ಕಿದ್ದಂತೆ" mom watch out...!" ಅಂತ ಕೂಗಿದ...


ರಸ್ತೆ ಮದ್ಯದಲ್ಲಿ ಕಪ್ಪು ಕಪ್ಪಾಗಿ ಕೂತಿದ್ದದು ಎರಡು ಆನೆಗಳು!
ನಮ್ಮ ರಸ್ತೆ ಪೂರ್ತ ಆಕ್ರಮಿಸಿ ಬೃಹತ್ ಬಂಡೆಗಲ್ಲಿನಂತೆ ತಣ್ಣಗೆ ಕೂತಿದ್ದವು

ನನ್ನ ಬಾಯಿ ಕಟ್ಟಿ ಹೋಯಿತು

ಗಂಟಲಿನ ತೇವ ಆರಿ ಹೋಯಿತು

ಲೀ ಏನೋ Elephant...Elephant... ಅಂತ ಉತ್ಸಾಹವಾಗಿ ಕೂಗಲು ಹೊರಟ ನಾನು ತತ್ ಕ್ಷಣ 'ಹುಶ್...." ಅಂತ ಅವನನ್ನು ಸುಮ್ಮನಾಗಿಸಿದೆ
**********
ಮುಂದೆ ಹೋಗುವಂತಿರಲಿಲ್ಲ

ಹಿಂದೆ ಹೋಗಿಯೂ ಪ್ರಯೋಜನವಿಲ್ಲ

ಆ ಚಿಕ್ಕ ರಸ್ತೆಯಲ್ಲಿ ಆನೆಗಳನ್ನು ಬಳಸಿಕೊಂಡೂ ಹೊಗುವಂತಿರಲಿಲ್ಲ

ಜೊತೆಗೆ ಅವುಗಳು ಸಿಟ್ಟಿಗೆದ್ದರೆ ಏನು ಮಾಡುವುದು??

ಅಟ್ಟಿಸಿಕೊಂದು ಬಂದರೆ....?

ಹತ್ತು ನಿಮಿಷ ಕಳೆಯಿತು

ನನಗೆ ಹುಚ್ಚು ಹಿಡಿಯುವಂತಾಗುತ್ತಿತ್ತು

ಸ್ಟಿರಿಂಗ್ ಮೇಲೆ ತಲೆ ಇಟ್ಟು ಮೆಲ್ಲಗೆ ಅಳಲಾರಂಭಿಸಿದೆ

ನಾನು ಅಳುವ ಶಬ್ದ ಕೇಳಿ ಲೀ " ಶೇಮ್ ಮಾಮ್ ಶೇಮ್...ಬಿಗ್ ಗರ್ಲ್ಸ್ ಡೋಂಟ್ ಕ್ರೈ..." ಅಂದ
ಒಂದೆರಡು ಗಳಿಗೆ ಬಿಟ್ಟು"ವೆರಿ ಸಾರಿ ಮಾಮ್ ....ಐ ವಾಸ್ ರೂಡ್..." ಅಂತಾನೂ ಅಂದ
ನಾನು ಯಾವುದಕ್ಕೂ ಉತ್ತರಿಸದಿರುವುದು ನೋಡಿ ತಾನು ಅನಿಮಲ್ ಪ್ಲ್ಯಾನೆಟ್ ನಲ್ಲಿ ಆನೆಗಳ ಬಗ್ಗೆ ನೋಡಿದ ಪ್ರೋಗ್ರ್ಯಾಂ ನೆನಪಿಸಿ ಕೊಂಡುಪಿಸು ಮಾತಿನಲ್ಲಿ ಅದರ ಬಗ್ಗೆ ಮಾರ್ಟೀನಾಗೆ ಹೇಳಲಾರಂಭಿಸಿದ ಆಗಲೇ ನಾನು ಮಾರ್ಟೀನಾಳ ಕೆನೆ ಬಣ್ಣದ ಸ್ಕರ್ಟ್ ಕೆಂಪಾಗುತ್ತಿರುವುದನ್ನು ಗಮನಿಸಿದೆ

ಅವಳ ಕಣ್ಣುಗಳೆರಡೂ ಮುಚ್ಚಿತ್ತು ಒಣಗಿದ್ದ ತುಟಿಗಳು ಎನೋ ತೊದಲುತ್ತಿದ್ದವು...

ನನ್ನ ಎರಡೂ ಕೈಯಿಂದ ನನ್ನ ತಲೆಯ ಕೂದಲು ಕಿತ್ತುಕೊಳ್ಳೋಣವೆನೆಸಿತು

ಜೋರಾಗಿ ತಲೆ ತಲೆ ಚಚ್ಚಿಕೊಂಡು ಅಳುವ ಮನಸ್ಸಾಯಿತು

ಏನು ಮಾಡಲೀ....?

(ಮುಂದುವರೆಯುವುದು...)

1 comment:

ಶಾಂತಲಾ ಭಂಡಿ (ಸನ್ನಿಧಿ) said...

ಮಾಲಾ ಅವರೆ...
ತುಂಬ ಚೆನ್ನಾಗಿ ಬರ್ತಿದೆ, ಮುಂದುವರೆಸಿ.