Thursday, August 7, 2008

ಜೀವ ಕೈಯಲ್ಲಿ ಹಿಡಿದು...(ಭಾಗ-ಒಂಭತ್ತು)

ನಾನು ಮೆಲ್ಲಗೆ ಎದ್ದು ಆ ಕಗ್ಗತ್ತಲೆಗೆ ಕಣ್ಣು ಹೊಂದಿಸಿ ಕೊಳ್ಳಲು ಹೆಣಗುತ್ತಾ ಸುತ್ತಲೊಮ್ಮೆ ನೋಡಿದೆ ಎದೆ ಧಸಕ್ ಅಂದಿತು...
ಟಿ.ವಿಯಲ್ಲೋ ನ್ಯೂಸ್ ಪೇಪರ್ ನಲ್ಲೋ ಇಂಥಾ ಅವಘಡಗಳಾದರೆ ರಾಶಿ ರಾಶಿ ಮುರಿದ ಗೋಡೆಗಳು
ಮುಂತಾದ rubble ತೋರಿಸುತ್ತಾರಲ್ಲ...

ಹಾಗೆಲ್ಲಾ ಏನೂ ಇರಲಿಲ್ಲ...


ಏಕೆಂದರೆ ಅಲ್ಲೇನೂ ಇರಲಿಲ್ಲ!!!

There was no house, nothing left!

ಒಂದು ಗಳಿಗೆ ನಾನು ಸುಮ್ಮನೆ ನಿಂತುಬಿಟ್ಟೆ...

ಕೆಲ ನಿಮಷಗಳ ಹಿಂದೆ ನಮ್ಮಲ್ಲಿ ಎಲ್ಲವೂ ಇತ್ತು...

ಈಗ ಏನೂ ಇಲ್ಲ!!!

ಗಂಟಲು ಕಟ್ಟಿ ಕಣ್ಣೀರು ಉಕ್ಕುಕ್ಕಿ ಬರುತ್ತಿತ್ತು

ಎದೆ ಹಿಡಿದಂತಾಗುತ್ತಿತ್ತು

ಕೈ ಕಾಲು ಗಳೆರಡೂ ಥರ ಥರ ನಡುಗುತ್ತಿತ್ತು

ಇದೆಲ್ಲಾ ನಾನು ನೋಡುತ್ತಿದ್ದ ಒಂದು ಕೆಟ್ಟ ಕನಸು...ಬೇಗ ಎಚ್ಚರವಾಗಲಿ...ನಾನು ನನ್ನ ಗುಲಾಬಿಬಣ್ನದ ಚೆರ್ರಿ ಹೂವಿನ ಚಿತ್ರದ ಹಾಸಿಗೆಯಲ್ಲಿ ಮಲಗಿಕೊಂಡೇ ಏಳುವಂತಾಗಲೀ ಎಂದು ಸುಳ್ಲು ಸುಳ್ಳೇ ಹಾರೈಸಿದೆ...

ಇಲ್ಲ ಇದು ಕೆಟ್ಟ ಕನಸಲ್ಲ ಕಹಿ ವಾಸ್ತವ
ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿಕೊಂಡೆ ನಾವೆಲ್ಲಾ ಜೀವಂತವಾಗಿ ಸುರಕ್ಷಿತವಾಗಿದ್ದೀವಲ್ಲಾ thank lord...ದೇವರಿಗೆ ವಂದಿಸಿದೆ ನಾನು ನನ್ನೆಲ್ಲಾ ಭಯ ದುಃಖ ಮರೆತು ತಕ್ಷಣ ಮಾರ್ಟೀನಾ ಕಡೆ ಗಮನ ಕೊಡಬೇಕಿತ್ತು ಮಕ್ಕಳನ್ನು ನೋಡಿಕೊಳ್ಳಬೇಕಿತ್ತು
ಹೌದು i can't afford to cry like this...

ಮಕ್ಕಳಿಬ್ಬರಿಗೂ ಮುತ್ತಿಟ್ಟು my brave boys ಅಂತ ಹುರಿದುಂಬಿಸಿದೆ ಮಾರ್ಟಿನಾ ಳ ತಲೆ ನೇವರಿಸುತ್ತಾ ಮುಂದೇನು ಮಾಡುವುದೆಂದು ಯೋಚಿಸತೊಡಗಿದೆ
ಅಷ್ಟರಲ್ಲಿ ಜೇ ಎದ್ದು ತನ್ನ ಜೋಬಿನಲ್ಲಿದ್ದ ಪೆನ್ ಟಾರ್ಚ್ ನಿಂದ ಸುತ್ತಲೂ ಒಮ್ಮೆ ಬೆಳಕು ಹಾಯಿಸಿದ ನಮ್ಮ ಗರಾಜ್ ನ ಒಂದು ಗೋಡೆಯ ದೊಡ್ಡದೊಂದು ಭಾಗ ನೆಲಕ್ಕೆ ಹಾಗೇ ಕುಸಿದದ್ದು ಉಳಿದು ಕೊಂಡಿದ್ದು ಕಾಣಿಸಿತು ಜೇ ಅದರೆಡೆಗೆ ಹೋದವನು ಜೋರಾಗಿ ಕೂಗಿದ ಮಾಮ್ ಕಮ್ ಹಿಯರ್ ..ಲುಕ್ ಯುವರ್ ಕೊರೊಲಾ ಈಸ್ ಲಕಿ...'ಮಾರ್ಟೀನಾಳನ್ನು ಲೀಯ ವಶಕ್ಕೆ ಬಿಟ್ಟು ನಾನು ಎದ್ದು ಹೋಗಿ ನೋಡಿದೆ ನನ್ನ ಕೊರೋಲ ಕಾರು ಉಳಕೊಂಡಿತ್ತು! ಜೇ ಹೇಳಿದಂತೆ ಕೊರೋಲಾ ಲಕ್ಕಿಯೋ ಅಥ್ವಾ ನಾನು ಲಕ್ಕಿನೋ...?

ನಾನು ಜೇ ಕಾರನ್ನು ಗೋಡೆಯ ಅಡಿಯಿಂದ ಹೊರತರಲಾಗುತ್ತದೆಯೇ ಅಂತ ನೋಡಿದೆವು ಆಗಲಿಲ್ಲ
ನಾನು ಮತ್ತೆ ಹೋಗಿ ಮಾರ್ಟೀನಾ ಹತ್ತಿರ ಕೂತೆ ಲೀಯ ವಾಟರ್ ಬಾಟಲಿನಿಂದ ಅವಳ ಮುಖಕ್ಕೆ ನೀರು ಹನಿಸಿದೆ
ಮಾರ್ಟೀನಾ ಮೆಲ್ಲಗೆ ಕಣ್ಣು ತೆರೆದು ನೋಡಿದಳು ಹೇಗಿದ್ದೀಯಾ ಎಂದು ಕೇಳಿದೆ ಅದಕ್ಕವಳು my back is paining...lower stomach...ufffff"ಎಂದೇನೋ ತೊದಲಿದಳು ನಾನು 'ಟೇಕ್ ಕರೇಜ್ ಹನಿ ನಿನಗೇನೂ ಆಗುವುದಿಲ್ಲಾ' ಅಂತ ಸಮಾಧಾನ ಮಾಡಲೆತ್ನಿಸಿದೆ

ಅವಳೆಂಥಾ ಹುಚ್ಚು ಹುಡುಗಿಯೆಂದರೆ ಇಂಥಾ ಪರಿಸ್ಥಿತಿಯಲ್ಲೂ 'i lost your gown i'm sorry...i'm really sorry...' ಅಂತ ಕೊರಗುತ್ತಾ ಅಳುತ್ತಿದ್ದಳು...ನಾನು ಅವಳನ್ನು ಅಪ್ಪಿಕೊಂಡು ಈಗ ಗೌನ್ ವಿಚಾರ ಮಾತಾಡುವುದು ಬೇಡವೆಂದು ಅವಳನ್ನು ಸಮಾಧಾನಿಸಿದೆ


ಜೇ ಅಷ್ಟರಲ್ಲಿ ಇಬ್ಬರು firemen ಗಳ ಸಹಾಯದಿಂದ ನಮ್ಮ ಕಾರನ್ನು ಗೋಡೆಯಡಿಯಿಂದ ಹೊರಗೆಳೆದು ನಿಲ್ಲಿಸಿದನನ್ನ ಹ್ಯಾಂಡ್ ಬ್ಯಾಗ್ ನಲ್ಲಿ ಯಾವಾಗಲೂ ಒಂದು ಜೊತೆ ಮನೆಯ ,ಕಾರಿನ ಕೀ ಇರುತ್ತಿತ್ತು. ಮನೆಯ ಕೀ ಅಂಗೈಯಲ್ಲಿ ಹಿಡಿದಾಗ ವಿಚಿತ್ರ ಸಂಕಟವಾಯಿತು ಆದರೆ ಏನೂ ಮಾಡುವಂತಿರಲಿಲ್ಲ ಜೇ ಗೆ ಕೀಗೊಂಚಲು ತೆಗೆದು ಕೊಟ್ಟೆ ಅವನು ಕಾರು ಬಾಗಿಲು ತೆರೆದ
ನಾನೂ ಮತ್ತು ಜೇ ಮಾರ್ಟೀನಾ ಳನ್ನು ಹುಷಾರಾಗಿ ಕಾರಿನೊಳಗೆ ಕೂರಿಸಿದೆವು ಸದ್ಯ ಆ ಕೊರೆಯುವ ಚಳಿಯಲ್ಲಿ ನಡುಗುವುದು ತಪ್ಪಿತು firemen ಗೆ ಫಸ್ಟ್ ಏಡ್ ಬರುತ್ತಿತ್ತಾದರೂ ಅದರಿಂದ ಮಾರ್ಟೀನಾಳ ಸದ್ಯದ ಪರಿಸ್ಥಿತಿಯಲ್ಲಿ ಅವರುಗಳಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವಂತಿರಲಿಲ್ಲ ಅವರುಗಳು ಬೇಗ paramedics ಬರುತ್ತಾರೆಂದು ಹೇಳಿ ಮುಂದಕ್ಕೆ ಹೋದರು


ಮಾರ್ಟಿನಾ ಸಣ್ನಗೆ ನರಳುತ್ತಿದ್ದಳು ಮತ್ತೆ ಹತ್ತು ನಿಮಿಷ ಕಳೆಯಿತು ಸುತ್ತ ಮುತ್ತಲಿನ ಮನೆಗಳವರೆಲ್ಲಾ ಟಾರ್ಚುಗಳನ್ನು ಹಿಡಿದು ಅಕ್ಕಪಕ್ಕದವರ ಕ್ಷೇಮ ವಿಚಾರಿಸಲು ಅಲೆದಾಡುತ್ತಿದ್ದವರುನಮ್ಮ ಬಳಿಗೂ ಬಂದು ಮಾತಾಡಿಸಿದರು ಮಾರ್ಟಿನಾಗೆ ಆದಷ್ಟು ಬೇಗ Medical help ಸಿಗಬೇಕೆಂಬುದೇ ಎಲ್ಲರ ಸಲಹೆಯಾಗಿತ್ತು ಜೇ ಎಲ್ಲಾದರೂ Medics ಇದ್ದರೆ ಕರೆತರುತ್ತೇನೆ ಅಂತ ಹೊರಗೆ(?) ಹೋದ

ಹತ್ತು ನಿಮಿಷ ನಿಧಾನವಾಗಿ ಕಳೆಯಿತು...
ನನಗೆ ಸಹನೆ ಮೀರಲಾರಂಭಿಸಿತು ನಾನೇ ಏನಾದರೂ ಮಾಡಬೇಕು ಹೀಗೆ paramedics ಬರುತ್ತಾರೆಂದು ಅವರು ಬರುವವರೆಗೆ ಕೈ ಕಟ್ಟಿ ಕೂರಲು ನನ್ನಿಂದ ಸಾಧ್ಯವಿರಲಿಲ್ಲ
ಮತ್ತೆ ಐದು ನಿಮಿಷ ಕಾದೆ ಯಾವ ಪವಾಡವೂ ಘಟಿಸಲಿಲ್ಲ ಮಾರ್ಟೀನಾಳ ನರಳಿಕೆ ಜೋರಾಯಿತು
ಸ್ವತಃ ಎರಡು ಮಕ್ಕಳನ್ನು ಹೆತ್ತ ನನ್ನ ಅನುಭವವೂ ಯಾಕೋ ಕೈ ಕೊಡುತ್ತದನ್ನಿಸಿ ಸ್ವಲ್ಪ ಭಯವಾಗಲು ಶುರುವಾಯಿತು
ಅಮ್ಮನಿಗೆ ಕಾಲ್ ಮಾಡೋಣವೇ..? ನನ್ನ ಗೈನಿಕ್ ಗೆ ಕಾಲ್ ಮಾಡೋಣವೇ...? 911 ಗೆ? ಎಂದೆಲ್ಲಾ ಯೋಚಿಸಿದೆ ನನ್ನ ಬ್ಯಾಗ್ ನಿಂದ ಸೆಲ್ ಫೋನ್ ತೆಗೆದಾಗ ನೆನಪಾಯಿತು ಸಿಗ್ನಲ್ ಇಲ್ಲ ಅಂತ...

ಹುಚ್ಚು ಧೈರ್ಯದಿಂದ ಏನನ್ನೋ ನಿರ್ಧರಿಸಿಕೊಂಡವಳಾಗಿ ಲೀ ಅನ್ನು ಕರೆದು ಹೇಳಿದೆ'ಲಿಸನ್ ಲೀ... ಮಾರ್ಟೀನಾ ಅಂಡ್ ಬೇಬಿ ಆರ್ ಇನ್ ಟ್ರಬಲ್ ವಿ ಹ್ಯಾವ್ ಟು ಗೆಟ್ ಟು ಹಾಸ್ಪಿಟಲ್ ASAP...ಕ್ಯಾನ್ ಯು ಟೇಕ್ ಕೇರ್‍ ಆಫ್ ಮಾರ್ಟೀನಾ ವೈಲ್ ಐ ಡ್ರೈವ್...?
ಎಂಟು ವರ್ಷದ ಲೀಯ ಮುಖ ಬಿಳುಚಿಕೊಂಡಿದ್ದರೂ ತುಂಬಾ ಧೈರ್ಯದಿಂದ ತಲೆ ಅಲ್ಲಾಡಿಸಿ ಒಪ್ಪಿಗೆ ಸೂಚಿಸಿದ 'ಕಮಾನ್ ಕ್ವಿಕ್...'ಎಂದು ನಾನು ಅವಸರಿಸಿದೆ ಏನನ್ನೋ ಕೇಳಬೇಕೆಂದು ಕೊಂಡವನು ಬಾಯಿ ಗಪ್ಪೆಂದು ಮುಚ್ಚಿಕೊಂಡ

ನಾನು ಕಾರು ಓಡಿಸಲಾರಂಭಿಸಿದೆ ಯಾವ ಕಡೇಗೆ ಹೋಗುವುದು ಅಂತ ಯೋಚಿಸ ಬೇಕಾಗಿತ್ತು ನಮ್ಮೂರು ಗ್ರೀನ್ಸ್ ಬರ್ಗ್ ನ ಆಸ್ಪತ್ರೆ ನೆಲಸಮವಾಗಿರುತ್ತದೆಂಬುದರಲ್ಲಿ ಯಾವುದೇ ಸಂಶಯವಿಲ್ಲ ಇನ್ನುಳಿದದ್ದು Pratt ಅಥವಾ Dodge city. ನಮಗೆ ಹತ್ತಿರದ Haviland ನಲ್ಲಾಗಲೀ ಅಥ್ವಾ Mullinville ನಲ್ಲಾಗಲೀ ಮಾರ್ಟೀನ್ನಗೆ ಬೇಕಾದ expert help ಸಿಗುತ್ತದೆಂದು ನನಗೆ ಖಾತ್ರಿ ಇರಲಿಲ್ಲ
Pratt ಇಲ್ಲಿಂದ ಕೇವಲ ಮೂವತ್ತೂ ಚಿಲ್ಲರೆ ಮೈಲಿ ಹೆಚ್ಚೆಂದರೆ 35-40 ನಿಮಿಷದಲ್ಲಿ ತಲುಪಿಬಿಡಬಹುದು Dodge city ಸಾಕಷ್ಟು ದೂರ ಸುಮಾರು 45 ಮೈಲಿ ಒಂದು ಗಂಟೆಯೇ ಬೇಕಾಗಬಹುದು ಯಾವ ಕಡೆ ಹೋಗುವುದು? Prattಗೆ ಹೋಗಲು ಪೂರ್ವಕ್ಕೆತಿರುಗಬೇಕು...Dodge city ತಲುಪಲು ಪಶ್ಚಿಮಕ್ಕೆ ತಿರುಗಬೇಕು...
ಸ್ವಲ್ಪ ಸಮಯ ಹಿಡಿಯುತ್ತದೆ ನಿಜ Dodge city ದೊಡ್ಡ ಊರು ಅಲ್ಲಿ ಸಾಕಷ್ಟು Experts ಇರುತ್ತಾರೆ....ಇಲ್ಲಾ...Pratt ಗೆ ಹೋದರೇ ಒಳ್ಳೇದಿತ್ತೇನೋ....ಎಂಥಾ Expert ಆಗಲೀ ಸಮಯ ಮಿಂಚಿದ ಮೇಲೆ ಏನು ಮಾಡಲಾಗುತ್ತೆ..?ಜೊತೆಗೆ ಮಾರ್ಟೀನಾಳ ಈ ಸ್ಪೆಷಲ್ ಕಂಡೀಶನನ್ನು ಇನ್ಶ್ಯೂರೆನ್ಸ್ ಕಂಪನಿ ಹೇಗೆ ಟ್ರೀಟ್ ಮಾಡತ್ತೆ ಅಂತಾನೂ ಯೋಚಿಸಬೇಕಿತ್ತು ನನ್ನ ಮನಸ್ಸು ಎರಡೂ ದಿಕ್ಕಿನಲ್ಲಿ ಎಳೆಯುತ್ತಿತ್ತು ನನ್ನ ಒಂದು ತಪ್ಪು ನಿರ್ಧಾರ ಎರಡು ಜೀವಗಳ ಜೀವನದ ಗತಿಯನ್ನೇ ಬದಲಿಸಿಬಿಡಬಹುದು...ಏನು ಮಾಡಲೀ....
ಮುಖ್ಯರಸ್ತೆಗೆ ಬಂದಾಗಲೂ ನಾನ್ಯಾವ ಕಡೇ ಹೋಗುವುದೆಂದು ನಿರ್ಧರಿಸಿರಲಿಲ್ಲಸಿಗ್ನಲಲ್ಲಿ ಹಸಿರು ದೀಪ ಬಂದಾಗ ಲೀ "mom...take west...towards Dodge city" ಅಂತ ಗಂಭೀರ ದನಿಯಲ್ಲಿ ಹೇಳಿದಆ ಚಿಕ್ಕ ಹುಡುಗನ ಮಾತನ್ನು ನಾನೇಕೆ ಕೇಳಿದೆ ಅಂತ ಈಗ ಯೋಚಿಸುವಂತಾಗುತ್ತದೆನಾನು ಜೀವ ಕೈಯಲ್ಲಿ ಹಿಡಿದು US-400ನಲ್ಲಿ ಕಾರು ಓಡಿಸಲಾರಂಭಿಸಿದೆ
(ಮುಂದುವರೆಯುವುದು...)

No comments: