Tuesday, August 26, 2008

ಆಕಾಶ ಮಾರ್ಗದಲ್ಲಿ... (ಭಾಗ-ಹನ್ನೊಂದು)

ನಿರಾಸೆಯ ಪಾತಾಳ ಕೂಪದ ಆಳದಲ್ಲಿ ಹುದುಗಿ ಹೋಗಿದ್ದ ನನ್ನನ್ನು ಎಚ್ಚರಿಸಿದ್ದು....
ನೀವು ನಿಜಕ್ಕೂ ಇಂಥದ್ದನ್ನು ನಂಬುತ್ತೀರಾ....
ನನ್ನ ಸೆಲ್ ಪೋನ್!!!
ರಿಂಗ್ ಟೋನ್ ಇಷ್ಟೊಂದು ಸ್ಪೂರ್ತಿದಾಯಕವಾಗಿ ಧ್ವನಿಸಲು ಸಾಧ್ಯವೇ...?
ಓ...ನೆಟ್ ವರ್ಕ್ ಈಸ್ ಬ್ಯಾಕ್...
ನನ್ನ ಆತುರದ ಹಲೋ ಗೆ ಉತ್ತರವಾಗಿ "Hola...puedo hablar con Pablo...?
(ಹೋಲ...ಪುಯೆದೋ ಹಬ್ಲಾರ್ ಕಾನ್ ಪಾಬ್ಲೋ..?) ಕೇಳಿಸಿತು.

ನಾನು ತುಂಬಾ ಸಹನೆಯಿಂದ ರಾಂಗ್ ನಂಬರ್ ಅಂತ ಹೇಳಿ ಈ ನನ್ನ( ರಾಂಗ್) ನಂಬರ್ ಗೆ ಕಾಲ್ ಮಾಡಿದ ಆ spanish ಪುಣ್ಯಾತ್ಮನಿಗೆ ಮನದಲ್ಲೇ ಥ್ಯಾಂಕ್ಸ್ ಹೇಳುತ್ತಾ ಆತುರಾತುರವಾಗಿ 911 ಕಾಲ್ ಮಾಡಿದೆ ಚುಟುಕಾಗಿ ನಾವಿದ್ದ ಪರಿಸ್ಥಿತಿ ವಿವರಿಸಿದೆ ಆ ತುದಿಯಲ್ಲಿದ್ದ ಆಫೀಸರ್ ನನ್ನ ಹತ್ತಿರ ವಿವರಗಳನ್ನು ಪಡೆದುಕೊಳ್ಳುತ್ತಾ ನಿನ್ನ ಸೆಲ್ ಫೋನ್ ನಲ್ಲಿ ಬ್ಯಾಟರಿ ಚಾರ್ಜ್ ಎಷ್ಟಿದೆ ನೋಡು... ಎಂದಾಗಲೇ ನನಗಾಕಡೆ ಗಮನ ಹೋಗಿದ್ದು ಅದು ಕೊನೆಯ ಗೆರೆ ಮಾತ್ರ ತೋರಿಸುತ್ತಿತ್ತು ನಾನು ಹಾಗೆಂದು ಹೇಳಿದಾಗ ಅದುವರೆಗೆ 'ಕೀಪ್ ಟಾಕಿಂಗ್ ಗಿವ್ ಮಿ ಮೋರ್ ಡೀಟೇಲ್ಸ್ ' ಅನ್ನುತ್ತಿದ್ದ ಆ ಆಫೀಸರ್ `ಸೇವ್ ಯವರ್ ಬ್ಯಾಟರಿ...ವಿ ವಿಲ್ ಕಾಲ್ ಯೂ ಇನ್ ಕೇಸ್ ವಿ ಕಾಂಟ್ ಲೊಕೇಟ್ ಯೂ..' ಎನ್ನುತ್ತಾ ಲೈನ್ ಕಟ್ ಮಾಡಿದ


ನಾನು ಉದ್ದವಾಗಿ ಉಸಿರೆಳೆದು ಕೊಂಡು Thank God..' ಎಂದು ದೇವರನ್ನು ವಂದಿಸಿಕೊಳ್ಳುತ್ತಾ ಇರುವಾಗ ಲೀ "hey... we made it..." ಅಂತ ಎರಡೂ ಕೈ ಎತ್ತಿ ಕೂಗಿಕೊಂಡ ನಾನು ಹುಶ್.. ಎನ್ನುತ್ತಾ ಅನನನ್ನು ಸುಮ್ಮನಾಗಿಸಿ ಮಾರ್ಟೀನಾ ಕಡೆ ತಿರುಗಿದೆ ಅವಳು ಹೇಗಿದ್ದಾಳೆ ಅಂತ ಹಿಂದಿನ ಸೀಟಿಗೆ ಹೋಗಿ ನೋಡುವಾ ಎಂದರೆ ಕಾರಿನಿಂದ ಇಳಿಯಲು ಆನೆಗಳ ಭಯ.ನಾನಿದ್ದ ಜಾಗದಿಂದಲೇ ಹಿಂದಿನ ಸೀಟಿಗೆ ಹೋಗಲು ಆ ಇಕ್ಕಟ್ಟಾದ ಜಾಗದಲ್ಲಿ ಜಂಪ್ ಮಾಡಲು ಹೋಗಿ ಅವಳೀಗೇನಾದರೂ ಹರ್ಟ್ ಮಾಡಿಬಿಡುತ್ತೇನಾ ಅಂತ ಆತಂಕ...ನಾವಿದ್ದ ವಿಚಿತ್ರ ಸ್ಥಿತಿಯಲ್ಲಿ ಇಂಥಾ ಸಣ್ಣ ಸಾಮಾನ್ಯ ಸಂಗತಿಯೂ ಅಸಾದ್ಯವಾಗಿರುವಂಥಾ ಪ್ರಸಂಗ ಎದುರಾಗಿರುವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ ಅಂತೂ ಮೆಲ್ಲಗೆ ಅವಳ ಬಳಿ ಹೋಗಿ ನೋಡಿದೆ
ಅವಳನ್ನು ಮುಟ್ಟಿ ತಟ್ಟಿ ಏನೂ ಪ್ರಯೋಜನವಾಗಲಿಲ್ಲ

She was sinking!!!

ಸಿಡಿಯುತ್ತಿದ್ದ ತಲೆಯನ್ನು ಎರಡೂ ಕೈಯಿಂದ ಅದುಮಿಕೊಳ್ಳುತ್ತಾ ಎದುರಿಗೆ ದೃಷ್ಟಿ ಹಾಯಿಸಿದೆ ಎರಡೂ ಆನೆಗಳೂ ಒಂದಿಷ್ಟೂ ಕದಲದೆ ಆರಾಮ ವಾಗಿ ಕೂತಿದ್ದವು
ಅವು ನಿದ್ದೆ ಮಾಡುತ್ತಿವೆಯಾ ಅಂತ ಯೋಚಿಸ ತೊಡಗಿದೆ
ನನ್ನ ಹಣೆಗೆ ಜೋರಾಗಿ ಪೆಟ್ಟು ಬಿತ್ತು
ನನ್ನ ಕಣ್ಣು ಎಳೆದುಹೋಗಿ ಸ್ಟಿರಿಂಗ್ ವೀಲ್ ಗೆ ತಲೆ ಹೊಡೆದು ಕೊಂಡಿದ್ದೆ ಅಷ್ಟೇ...

ಯಾವ ಕಡೆಯ ರಸ್ತೆಯಿಂದ help ಬರುತ್ತದೆ ಅಂತ ಯೋಚಿಸಲಾರಂಭಿಸಿದೆ ಸಹಾಯ ಬರುತ್ತಿದೆ ಅಂತಲೋ ಏನೋ ಮನಸ್ಸಿಗೆ ಸ್ವಲ್ಪ ನಿರಾಳ ಅನ್ನಿಸುತ್ತಿದೆ ಮೆಲ್ಲಗೆ ತಂಗಾಳಿ ಬೀಸಿತು ದೂರದಲ್ಲೆಲ್ಲೋ ಜೀರುಂಡೆಯೊಂದು ಕೂಗುವ ನವಿರಾದ ಶಬ್ದ ಕೇಳಿಬಂತು ಲೀ "ಮಾಮ್ ಏನದು? cicada ನಾ... ಅಂತ ಕೇಳಿದಅಥವಾ ಕ್ರಿಕೆಟ್ insect ಇರಬಹುದಾ..?" ಅಂತ ನಾನು ಉತ್ತರಿಸುವ ಮೊದಲೇ ಮರು ಪ್ರಶ್ಣೆ ಹಾಕಿದ ನಾನು ಅದು ಯಾವ insect ಇರಬಹುದೆಂದು ಯೋಚಿಸುತ್ತಿರುವಾಗ ಆ ಕೀಟದ ಶಬ್ದ ಬರು ಬರುತ್ತಾ ಜೋರಾಯಿತು!
ನನ್ನ ಸೆಲ್ ಪೋನ್ ಕೂಗಿತು ನಾವಿದ್ದ ಲೋಕೇಶನ್ confirm ಮಾಡಿಕೊಳ್ಳಲು ಕಾಲ್ ಮಾಡಿದ್ದರು ಮತ್ತೆರಡು ನಿಮಿಷದಲ್ಲೇ ನಮ್ಮ ತಲೆ ಮೇಲೆ ಹೆಲಿಕಾಪ್ಟರ್ ಒಂದು ಸುತ್ತಲಾರಂಭಿಸಿತು ಸುಮಾರು ಐದು ನಿಮಿಷ ಸಾಕಷ್ಟು ಎತ್ತರದಲ್ಲೇ ಅವರು ಸುತ್ತುತ್ತಿರಬೇಕು
ನನಗೆ ಈ ಚರ್ಯೆ ಅರ್ಥವಾಗಲಿಲ್ಲ ಬೇಗ ಬಂದು ಮಾರ್ಟೀನಾನ್ನ ನಮ್ಮನ್ನ ಕರೆದು ಕೊಂಡು ಹೋಗ ಬಾರದೇ ಅಂತ ತಹತಹಿಸುತ್ತಿದ್ದೆ ಉಹುಂ... ಅವರು ಕೆಳಗಿಳಿದು ಬರಲಿಲ್ಲ ಅವರದ್ದು ಏನು ಪ್ರೊಸೀಜರ್ರೋ.. ಅಂತ ನನಗೆ ನಾನು ಸಮಾಧಾನಿಸಿಕೊಳ್ಳುತ್ತಿರುವಾಗ ಲೀ "ಮಾಮ್ ಲುಕ್.." ಅಂತ ಕೂಗಿಕೊಂಡ ಎರಡರಲ್ಲಿ ಒಂದು ಆನೆ ಮೇಲಕ್ಕೇಳಲು ಪ್ರಯತ್ನಿಸಿ ಮತ್ತೆ ಮೆಲ್ಲಗೆ ನೆಲಕ್ಕುರುಳಿಕೊಂಡಿತು ಇನ್ನೊಂದು ಆನೆಗೆ ಈಗಾಗಲೇ ಮದ್ದು ಸಿಕ್ಕಿದೆಯಾದ್ದರಿಂದ ಈ ಆನೆ ಅದರ ಮೇಲೆ ಬಿದ್ದಾಗ ಅದಕ್ಕೇನೂ ನೋವಾಗುವುದಿಲ್ಲ ಅಲ್ವಾ ಅಂತ ಲೀ ಕೇಳುತ್ತಿದ್ದ

ರಸ್ತೆ ಪಕ್ಕದ ಹೊಲದಲ್ಲಿ ಲ್ಯಾಂಡ್ ಮಾಡಲು ಸೇಫ್ ಅಂತ ಬೆಳಕು ಹಾಯಿಸಿ ಪರೀಕ್ಷಿಸಿ ನಂತರ ಹೆಲಿಕಾಪ್ಟರ್ ಕೆಳಗಿಳಿಸಿದರು ಮೊದಲು wildlife conservation ನ expert ಆನೆಗಳನ್ನು ಸಮೀಪಿಸಿ ಪರೀಕ್ಷಿಸಿ ಉಳಿದವರಿಗೆ "go ahead' ಸಿಗ್ನಲ್ ಕೊಟ್ಟ

ಮರು ಕ್ಷಣದಲ್ಲೇ paramedics ನಮ್ಮ ಕಾರನ್ನು ಸಮೀಪಿಸಿದರು
ಮುಂದಿನ ಐದು ನಿಮಿಷಗಳಲ್ಲಿ ಮಾರ್ಟೀನಾಳನ್ನು ಹೊತ್ತ ಹೆಲಿಕಾಪ್ಟರ್ ಹೊರಡಲು ತಯಾರಾಗಿತ್ತು
ಪೇಶಂಟ್ ಬಿಟ್ಟರೆ ಇನ್ನೊಬ್ಬ ವ್ಯಕ್ತಿಗೆ ಮಾತ್ರ ಹೆಲಿಕಾಪ್ಟರ್ನಲ್ಲಿ ಜಾಗವಿದ್ದುದರಿಂದ ಲೀಯನ್ನು ನನ್ನೊಂದಿಗೆ ಕರೆದುಕೊಂಡು ಹೋಗಲು ಸಾದ್ಯವಿರಲಿಲ್ಲ
ಎಂಟು ವರ್ಷದ ಹುಡುಗನನ್ನು ಜನ ಸಂಚಾರವಿಲ್ಲದ ಈ ರಸ್ತೆಯಲ್ಲಿ ಒಬ್ಬನನ್ನೇ ಕಾರಿನಲ್ಲಿ ಬಿಟ್ಟು ಹೋಗುವುದು ಹೇಗೆ?
ಕೊನೆಗೆ ಅಲ್ಲಿಂದಲೇ ನಾನು ಮಾರ್ಟೀನಾಗೆ ವಿದಾಯ ಹೇಳಲು ನಿರ್ಧರಿಸಿದೆ
ನನಗೇಕೋ ಅದು ಸರಿ ಅನ್ನಿಸುತ್ತಿರಲಿಲ್ಲ
ಪರಿಚಿತರಾರೂ ಇಲ್ಲದೆ ಪಾಪದ ಹುಡುಗಿ ಈ ಪರಿಸ್ಥಿತಿಯಲ್ಲಿ ಒಬ್ಬಳೇ...

ತುಟಿ ಕಚ್ಚುತ್ತಾ ನಾನು ಸುಮ್ಮನೇ ನಿಂತು ಬಿಟ್ಟೆ
ಅವಳನ್ನು ಒಬ್ಬಳೇ ಕಳುಹಿಸಲು ನನಗೆಷ್ಟು ಹಿಂಸೆ ಆಗುತ್ತಿತ್ತೆಂದರೆ ಈ ಏರ್ ಲಿಫ್ಟಿಂಗ್ ನೆಲ್ಲಾ ನಮ್ಮ ಇನ್ಶ್ಯೂರೆನ್ಸ್ ಕವರ್ ಬಹುಷಃ ಮಾಡುವುದಿಲ್ಲವಲ್ಲ
ಏನು ಮಾಡುವುದು ಅಂತ ವಿಚಾರಿಸಲೂ ತಲೆಗೆ ಹೊಳೆಯಲಿಲ್ಲ

ನನ್ನ ಸಂಕಟ ನೋಡಲಾರದೇ ಆ ವನ್ಯ ಜೀವಿ ಸಂರಕ್ಷಣಾ ಅಧಿಕಾರಿ ಆನೆಗಳನ್ನು ಒಯ್ಯಲು ತಮ್ಮ ವಾಹನ ಬರುವುದೆಂದೂ ಲೀಯನ್ನು ತಾವು ಬೇಕಾದರೆ
ಡ್ರಾಪ್ ಮಾಡುತ್ತೇನೆಂದೂ ಸೂಚಿಸಿದರು ನಾನು ನನ್ನ ಕಣ್ಣುಗಳಿಂದಲೇ 'let me go son'ಅಂತ ಲೀಯನ್ನು ಬೇಡಿಕೊಂಡೆ
ಲೀ ತಲೆ ಅಲ್ಲಾಡಿಸುತ್ತಾ "ಡೋಂಟ್ ವರಿ ಮಾಮ್ ಐ ವಿಲ್ ಬಿ ಆಲ್ ರೈಟ್.." ಅನ್ನುತ್ತಾ ಆಫೀಸರ್ ಬಳಿಗೆ ಹೋಗುತ್ತಾ ಹೇಳಿದ
'ಥ್ಯಾಂಕ್ಸ್ ಅ ಲಾಟ್ ಸನ್' ಅಂತ ಹೇಳುತ್ತಾ ನಾನು ಹೆಲಿಕಾಪ್ಟರ್ ಬಾಗಿಲು ಸಮೀಪಿಸಿದಾಗ
" ಡೋಂಟ್ ವರಿ ಅಬೌಟ್ ಯುವರ್ ಕಾರ್ ಐ ವಿಲ್ ಗೆಟ್ ಇಟ್ ಟೋಡ್.." ಅಂತ ಆ ಆಫೀಸರ್ ಕೂಗಿದ್ದು ಕೇಳಿಸಿತು
ಉಫ್..! ನನ್ನ ಕಾರನ್ನು ಮರೆತೇ ಬಿಟ್ಟಿದ್ದೆ!

(ಮುಂದುವರೆಯುವುದು...)

No comments: