ನಾವು Dodgecity ಆಸ್ಪತೆ ತಲುಪಲು ಏಳೆಂಟು ನಿಮಿಷ ಹಿಡಿದಿರಬೇಕು ಅಷ್ಟೇ...
ಅಷ್ಟರಲ್ಲಿ ನಮ್ಮೊಂದಿಗೆ ಇದ್ದ ಡಾಕ್ಟರ್ಗಳು ಮಾರ್ಟೀನಾಳನ್ನು ಪರೀಕ್ಷಿಸಿ ಚಿಕಿತ್ಸೆ ಶುರು ಮಾಡಿ ನಾವು ಆಸ್ಪತ್ರೆ ತಲುಪುವ ವೇಳೆಗೆ ಏನೇನು ರೆಡಿ ಇಟ್ಟಿರಬೇಕೆಂದು ಆಸ್ಪತ್ರೆಗೆ ಸೂಚನೆ ಕೂಡಾ ರವಾನಿಸಿದ್ದರು
ಇಳಿದ ಎರಡು ನಿಮಿಷಗಳಲ್ಲೇ ಮಾರ್ಟಿನಾ ಆಸ್ಪತೆ ಮಂಚದಲ್ಲಿ ಮಲಗಿದ್ದಳು ಮತ್ತು ಹೆಲಿಕಾಪ್ಟರ್ ನಲ್ಲೇ ಟ್ರೀಟ್ಮೆಂಟ್ ಶುರು ಮಾಡಿದ ಫಲವಾಗಿ ಅವಳು ಮೆಲ್ಲನೆ ಕಣ್ಣು ತೆರೆದು ಡಾಕ್ಟರ್ ಕೇಳುವ ಪ್ರಶ್ಣೆಗಳಿಗೆ ಕ್ಷೀಣ ದನಿಯಲ್ಲಿ ಉತ್ತರಿಸುವಂತಾದಳು ಅಷ್ಟೊತ್ತು ಅವಳೊಂದಿಗಿದ್ದ ನನ್ನನ್ನು ಸ್ವಲ್ಪ ಆಚೆ ಇರಲು ಹೇಳಿ ಅವಳನ್ನು ವಿವರವಾಗಿ ಪರೀಕ್ಷಿಸಿದರು
ನಂತರ ಡಾಕ್ಟರ್ ನನ್ನನ್ನು ಒಳಕರೆದು ವಿವರಿಸಿದರು
she is feeling a bit of pressure and lower back pain, and a very unconfortable pain in her vagina, with her bones...yes...pelvic bones... it seems its hurting a lot... and she is feeling unconfortable lying down. But mostly she is pretty shaken up emotionally...."ಎನ್ನುತ್ತಾ
"we wait normally as she has just finished 26 weeks... but this is a special case with her broken shoulder...and feet...and all the blood loss...you know...its complicated..."ಎಂದರು
ನನ್ನ ಮುಖ ನೋಡುತ್ತಾ " please give us five minutes... to decide..." ಅನ್ನುತ್ತಾ ನಿರ್ಗಮಿಸಿದರು
ನಾನು ಜಾನ್ ಗೆ ಕಾಲ್ ಮಾಡಿ Dodgecity ಆಸ್ಪತ್ರೆಗೆ ಬರಲು ಹೇಳಿದೆ
ಅಮ್ಮನಿಗೆ ಕಾಲ್ ಮಾಡಿ ಜೇ ಅನ್ನು ಪಿಕ್ ಅಪ್ ಮಾಡಲು ತಿಳಿಸಿದೆ
ಲೀ ಇನ್ನೂ ತಲುಪಿಲ್ಲವೆಂದು ಆತಂಕ ವಾಗುತ್ತಿತ್ತು ನಮ್ಮ ಆಫೀಸಿನ ಕಲೀಗ್ ಟೋಬಿಗೆ ಕಾಲ್ ಮಾಡಿ ವಿಶಯ ತಿಳಿಸಿದೆ ಅವಳು any time ನಲ್ಲಿ help ಮಾಡಲು ತಯಾರಾಗಿರುವಂತೆ ಹೇಳಿದೆ
ಅಷ್ಟರಲ್ಲಿ Doctor ಗಳು ಮಾರ್ಟೀನಾಗೆ operate ಮಾಡಲು ನಿರ್ಧರಿಸಿದ್ದರು
ಸಾಮಾನ್ಯವಾಗಿ ಮಗು ಹುಟ್ಟುವಾಗ ಮಗುವಿನ ಅಪ್ಪ ತಾಯಿಯೊಂದಿಗೆ ಇರುತ್ತಾನಾದರೂ ಜಾನ್ ಇಲ್ಲಿ ತಲುಪುವುದು ಸಾಧ್ಯವಿರಲಿಲ್ಲ ಅವನು ತಾನು ಆದಷ್ಟೂ ಬೇಗ ಬರುತ್ತೇನೆಂದೂ ನೀನು ಈ ಕಷ್ಟದ ಘಳಿಗೆಯಲ್ಲಿ ಮಾರ್ಟಿನಾ ಜೊತೆ ಇರಬೇಕೆಂದೂ ನನ್ನನ್ನು ವಿನಂತಿಸಿಕೊಂಡ ನರ್ಸ್ ಕೊಟ್ಟ ಉಡುಗೆ ಟೊಪ್ಪಿ ತೊಟ್ಟು ಆಪರೇಶನ್ ಥೇಟರ್ ಕಡೆಗೆ ಹೋಗುವಾಗ ಯಾಕೋ ಇಂದಿನ ಮನೋಹರ ಬೆಳಗು ನೆನಪಿಗೆ ಬಂತು
ತಲೆ ಕೊಡವುತ್ತಾ ಒಳಹೋದೆ ಮಾರ್ಟೀನಾ ನನ್ನ ಕಡೆ ನೋಡಿ ಕಣ್ಣು ತೆರೆದು ನಗನು ಪ್ರಯತ್ನಿಸಿದಳು
ನಾನು ಅವಳ ತಲೆ ನೇವರಿಸುತ್ತಾ 'every thing will be ok honey...
very soon you will be mom... good luck'ಅಂದೆ
ಮುಂದಿನ ಇಪ್ಪತ್ತು ನಿಮಿಷಗಳಲ್ಲಿ ಪುಟಾಣಿ ಕೆಂಪು ಗುಲಾಬಿ ಮೊಗ್ಗಿನಂತಿದ್ದ ಮಾರ್ಟಿನಾ ಮಗಳು ಭೂಮಿಗೆ ಬಂದಳು
(ಮುಂದುವರೆಯುವುದು...)
Subscribe to:
Post Comments (Atom)
1 comment:
eh.. love this post :)
Post a Comment