Tuesday, September 23, 2008

ಕಥೆ ಮುಂದೆ ಓದುವ ಮುನ್ನ....

ಮೇ 4, 2007 ಅಮೇರಿಕಾದ kansas ರಾಜ್ಯದ Greensburg ಎಂಬ ಪುಟ್ಟ ಊರು ಮರೆಯಲಾಗದ ದಿನ
ಅಂದು ರಾತ್ರಿ ಊರಿನೊಂದಿಗೆ ಹಲವು ಜನರ ಜೀವನ ಬರಿದಾಗಿ ಹೋಯಿತು....
ಈ ಕಥೆ ಬರೆಯಲು ಆಧಾರವಾಗಿ ಈ ಘಟನೆಯ ಬಗ್ಗೆ ನಾನು ತಯಾರಿಸಿದ Facts sheet ನಿಂದ ಕೆಲವು ವಿವರಗಳನ್ನು ನೋಡಿ...
**************
May 5, 2007 A tornado wiped out most of a small farming town in southwestern Kansas, killing seven people and injuring at least 63, emergency officials said today.
The funnel cloud hit Greensburg yesterday evening, smashing buildings, overturning vehicles and knocking out communications towers. Aerial television news footage showed ruins throughout the community of about 1,800 people.
"There is still a possibility that we do not have all the people accounted for," said a spokeswoman for the state emergency management agency.
The tornado was "massive," measuring up to 1 mile (1.6 km) wide, said Michael Lacy, a forecaster with the National Weather Service in Dodge City, Kansas. Winds were as strong as 165 mph (266 kph), he said.
Severe thunderstorms continued to move through the US Midwest.
Greensburg's hospital and schools were destroyed. The water tower next to the town's main tourist attraction - the world's largest hand-dug well - was damaged, Mr Lacy said.

**************
A massive "supercell" thunderstorm spawned massive tornadoes along a more than 100 mile long path in central Kansas Friday night and Saturday morning, killing at least seven and injuring more than sixty. And, there are still dozens of people unaccounted for. Massive damage occurred in the town of Greensburg and the entire town is being evacuated at this time.
Small tornadoes began in far south Kansas near the town of Protection about 8pm central time. As the supercell moved northeast, it spawned a massive tornado, more than a mile wide, about ten miles SSW of the town of Greensburg, population 1,800, that struck the town at about 9:55. The high school and junior high were destroyed, the main street was destroyed, and the hospital was 80% damaged....

*****************
Greens burg ನ ಈ ಚಿತ್ರ ಗಳು Google ನದ್ದು ಮತ್ತು kansas.com ನಿಂದ...



















****************
ನೀವು ಓದುತ್ತಿರುವ ಈ ಕಥೆ ನಿಜ ಘಟನೆ ಆಧರಿಸಿದ್ದು...
ವುಮೆನ್ಸ್ ಡೇ ವಾರಪತ್ರಿಕೆಯಲ್ಲಿ ಬಂದ ಸುಮಾರು ಒಂದುವರೆ ಪುಟದ ಲೇಖನ ನನ್ನ ಈ ಕಥೆಗೆ ಆಧಾರ
ಟ್ರೇಸಿ ಎಂಬ ಸಿಂಗಲ್ ಮಾಮ್ ತನ್ನ16 ವರ್ಷದ ಮಗ ಪೇದನ್ ಮತ್ತು 8 ವರ್ಷದ ಲೀ ಯೊಂದಿಗೆ ತನ್ನ ಮನೆಯ Toilet bowl ಗೆ ಆತುಕೊಂಡು ಆ ಭಯಾನಕ ನಿಮಿಷಗಳನ್ನು ಕಳೆದ ಘಟನೆ ಆ ಲೇಖನದಲ್ಲಿತ್ತು
ನಾನು ಒಂದು ಸಾರಿ ಓದಿ ಪುಸ್ತಕ ರದ್ದಿಯಲ್ಲಿ ಹಾಕಿಬಿಟ್ಟೆ
ಯಾಕೋ ಮನಸ್ಸು ತಡೆಯಲಿಲ್ಲ
ಮತ್ತೆ ಓದಿದೆ

ನನ್ನ ಅಪ್ಪ ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ
"ನಾವು ಭಾರತದವರು ಎಷ್ಟು ಅದೃಷ್ಟವಂತರೆಂಬುದು ನಮಗೇ ಗೊತ್ತಿಲ್ಲ
ಮ್ಮ ದೇಶದಲ್ಲಿ ರಾಜಕೀಯ ಅಸ್ತಿರತೆ ಇಲ್ಲ
ದಕ್ಷಿಣ ಭಾರತದಲ್ಲಿ ಪ್ರವಾಹವಿಲ್ಲ,ಇತ್ತೀಚೆಗೆ ಬರ ಇಲ್ಲ
ಬೆಂಗಳೂರು ಮೈಸೂರು ಪ್ರದೇಶದಲ್ಲಂತೂ ಒಳ್ಳೇ ಹವಾಗುಣ
ಆದರೂ ನಾವು ಸೋಮಾರಿಗಳು ಸದಾ ನಮಗೆ ಅದಿಲ್ಲ ಇದಿಲ್ಲ ಅಂತ ದೂರುತ್ತಲೇ ಇರುತ್ತೇವೆ...
ಎಷ್ಟೆಷ್ಟು ಕೆಟ್ಟ ಹವಾಮಾನದಲ್ಲಿ ಪ್ರವಾಹ ಚಂಡಮಾರುತಗಳಲ್ಲಿ ಹಟದಿಂದ ಜೀವನ ಕಟ್ಟುವ ಜನರನ್ನು ನೋಡಿ ನಾವು ಕಲಿಯ ಬೇಕು..." ಅಂತ
ನನ್ನ ಅಪ್ಪನ ಈ ಮಾತುಗಳು ಮತ್ತೆ ಮತ್ತೆ ನೆನಪಿಗೆ ಬಂದವು

ಈ ಲೇಖನವನ್ನ್ನು ಕನ್ನಡಕ್ಕೆ ಭಾಷಾಂತರಿಸಿ ಬ್ಲಾಗ್ ನಲ್ಲಿ ಹಾಕೋಣ ಅಂದುಕೊಂಡೆ
ಪದ ಪದವನ್ನೂ ಹಾಗೇ ಭಾಷಾಂತರಿಸಿದರೆ ಏನೇನು ಲೀಗಲ್ ತೊಡಕುಗಳು ಬರುತ್ತವೋ ನನಗೆ ಗೊತ್ತಿಲ್ಲ
ಹಾಗಾಗಿ ಈ ಘಟನೆಯನ್ನು ಆಧರಿಸಿ ಒಂದು ಕಥೆ ಹೆಣೆಯಲು ನಿರ್ಧರಿಸಿದೆ
(ತೇಜಸ್ವಿನೀ...ನಿಮ್ಮ ಪ್ರಶ್ನೆಗೆ ಉತ್ತರಿಸಿದ್ದೇನೆ...ತಡವಾಯಿತು ಸಾರೀ...)

ಟ್ರೇಸಿ ತನ್ನ ಮಕ್ಕಳೊಂದಿಗೆ ರಾತ್ರಿ ಕಳದದ್ದು ಮಾತ್ರ ಲೇಖನದಲ್ಲಿದ್ದದ್ದು
ವೈವಿದ್ಯತೆಗಾಗಿ ಮಾರ್ಟೀನಾಳನ್ನೂ,ಅವಳಿಂದಾಗಿ ಜರುಗುವ ಘಟನೆಗಳನ್ನೂ ಸೇರಿಸಿದೆ
ಪಯೊನೀರ್ ಅಜ್ಜಿ, ಅವಳ ಕೆಂಪು ಜೆರೇನಿಯಂ ಪ್ರೇಮ ಇವೆಲ್ಲಾ ಸೇರಿಸಿದೆ
ಪ್ರಯರಿಯ ನೀರವದಲ್ಲಿ ಕೆಂಪು ಜೆರೇನಿಯಂ ತಮ್ಮ ಚಿತ್ತ ಸ್ವಾಸ್ತ್ಯ ಕಾಪಾಡಿತೆಂದು ಕೆಲವು ಈ ಪ್ರಯಾಣ ಕೈಗೊಂಡ ಮಹಿಳೆಯರು ತಮ್ಮ ಡೈರಿಗಳಲ್ಲಿ ಬರೆದಿದ್ದಾರೆ
ಮೇಪಲ್ ಸಿರಪ್ ನ ಕಥೆ ಲಾರ ಇಂಗಲ್ಸ್ ವೈಲ್ಡರ್ ಳ ಲಿಟ್ಲ್ ಹೌಸ್ ಸೀರೀಸ್ ನಿಂದ ಸ್ಪೂರ್ತಿಗೊಂಡದ್ದು
ಮತ್ತೆ ಕೆಲವು ನೋವುಗಳು ನಿರಾಸೆಗಳು ನಾನು ಸ್ವತಃ ಅನುಭವಿಸಿದವು.......

No comments: