ಮಗು ಪುಟಾಣಿ ಗೊಂಬೆಯಂತೆ ಮುದ್ದಾಗಿತ್ತು
ನಿಜಕ್ಕೂ ಪುಟಾಣಿ ಗೊಂಬೆಯೇ...ಕೇವಲ ಎರಡು ಪೌಂಡು!!!
ಪೂರ್ತಿ term ಆಗದೆ ಹುಟ್ಟಿದ್ದರಿಂದ lungs ಪೂರ್ತಿ ಸರಿಯಾಗಿ develop ಆಗಿರಲಿಲ್ಲ ಹುಟ್ಟಿದ ತತ್ ಕ್ಷಣ ಮಗುವನ್ನು ಪರೀಕ್ಷಿಸಿ NICU(Neo-natal intensive care unit)ಗೆ ಸಾಗಿಸಿ ಉಸಿರಾಟಕ್ಕೆ ventilator ಅಳವಡಿಸಿದರು ಮಗುವಿನ ದೇಹದ ಉಷ್ಣತೆಯನ್ನು ಸ್ಥಿರವಾಗಿ ಕಾಪಾಡಲು ಮತ್ತೆಲ್ಲಾ vitals ಅನ್ನು ಜಾಗ್ರತೆಯಾಗಿ ಮಾನಿಟರ್ ಮಾಡಲು ಬೇಕಾದ ಸುಸಜ್ಜಿತ ವ್ಯವಸ್ಥೆ 'ನಿಕು'ನಲ್ಲಿ ಇತ್ತು
ಮಾರ್ಟಿನಾಳ ಮುರಿದ ಭುಜಕ್ಕೆ ಮತ್ತು ಪಾದಕ್ಕೆ ತಾತ್ಕಾಲಿಕ ಪಟ್ಟಿ ಹಾಕಿದ್ದರು ಅದೇ ತಾನೆ ಸಿಸೇರಿಯನ್ ನಂಥಾ ಮೇಜರ್ ಆಪರೇಶನ್ಆಗಿರುವುದರಿಂದ 48 ಘಂಟೆಗಳ resting & recovery time ಕೊಟ್ಟು ನಂತರ ಮುಂದಿನ ಆಪರೇಶನ್ ನ್ನು ಮಾಡಬಹುದೆಂದು ಡಾಕ್ಟರ್ ಗಳು ನಿರ್ಧರಿಸಿದರು
**************
ಜಾನ್ ಮಗುವನ್ನು ನೋಡಲು ಕಾತುರದಿಂದ ಧಾವಿಸಿ ಬಂದ
ಟೋಬಿ ಮನಸ್ಸು ತಡೆಯದೆ ಅರ್ಧ ರಾತ್ರಿಯಲ್ಲೇ ಡ್ರೈವ್ ಮಾಡಿಕೊಂಡು ಬಂದು ಬಿಟ್ಟಳು
ಆದರೆ ಮಗುವನ್ನು ಪಿಡಿಯಾಟ್ರಿಷಿಯನ್ ರೌಂಡ್ಸ್ ಮುಗಿಯುವ ತನಕ ನೋಡುವಂತಿಲ್ಲವೆಂದಾಗ ನಾವು ಕಾಯ ಬೇಕಾಯ್ತು
ಲೀ ಬಗ್ಗೆ ನನಗೆ ಚಿಂತೆಯಾಗ ಹತ್ತಿತು
ಅಷ್ಟರಲ್ಲಿ ಲೀ ಯನ್ನು ಆ ದಯಾಳು ಆಫೀಸರ್ ಕರಕೊಂಡು ಬಂದು ಬಿಟ್ಟರು ಮತ್ತು ನನ್ನ ಕಾರನ್ನು ಆಸ್ಪತ್ರೆ ವರೆಗೆ 'ಟೋ' ಮಾಡಿಸಿರುವುದಾಗಿ ಹೇಳಿಹೋದರು ನಾನು ಅವರು ಅಷ್ಟು ತೊಂದರೆ ತೊಗೊಂಡಿದ್ದಕ್ಕೆ ಥ್ಯಾಂಕ್ಸ್ ಹೇಳಿದೆ
ಟೋಬಿ 'ನೀನು AAA member ಅಲ್ವಾ ಅಂದಳು ನಾನು ಹೌದೆಂದು ತಲೆ ಅಲ್ಲಾಡಿಸಿದೆ
'ಮತ್ತೆ ಅವರಿಗೆ ಟೋ ಮಾಡಿಕೊಂಡು ಬರಲೇಕೆ ಹೇಳಿದೆ? road side assistance ಗಾಗಿ ಪ್ರತಿಸಾರಿಯೂ ಪ್ರೀಮಿಯಂ ಕಟ್ಟುತ್ತೀಯಲ್ವಾ ಅಂದಳು
ಹೌದಲ್ವಾ ....ಆ ಗಡಿಬಿಡಿಯಲ್ಲಿ ನನಗೆ ಅದು ಹೊಳೆದಿರಲೇ ಇಲ್ಲ!
ಲೀ ಬೇಬಿ ಎಲ್ಲಿ ನಾನು ನೋಡಬೇಕು ಅಂತ ನಾಕಾರು ಬಾರಿ ಕೇಳಿದ ಮೇಲೆ ನಮಗೆಲ್ಲಾ ಮಗು ನೋಡಲು ಪರ್ಮಿಶನ್ ಸಿಕ್ಕಿತು nicu ನಲ್ಲಿ ತುಂಬಾ ಹೈಜೀನ್ ಮೇನ್ ಟೇನ್ ಮಾಡಬೇಕಾದ್ದರಿಂದ ಬೇಬಿಯನ್ನು ದೂರದಿಂದ ನೋಡಬಹುದಾಗಿತ್ತು ಅಷ್ಟೇ
ಜಾನ್ ನನ್ನ ಮಗಳನ್ನು ಒಮ್ಮೆ ಎತ್ತಿಕೊಳ್ಳಬಹುದೇ...? ಇಲ್ಲದಿದ್ರೆ ನನ್ನಂದಿಗೆ ಅವಳಿಗೆ bonding ಹೇಗಾಗುತ್ತೆ ಅಂತ ಕೇಳಿಕೊಂಡಾಗ ಅವನನ್ನು ಡಿಸಿನ್ಫೆಕ್ಟ್ ಮಾಡಿ ಬೇರೆ ಬಟ್ಟೆ ತೊಡಿಸಿ ಮೂಗು ಬಾಯಿಗೆ ಬಟ್ಟೆ,ತಲೆಗೆ ಟೋಪಿ,ಕೈಗೆ ಗ್ಲೌಸ್ ಅಂತೆಲ್ಲಾ ಕವರ್ ಮಾಡಿದ ನಂತರ ಮಗುವಿನ ಹತ್ತಿರ ಬಿಟ್ಟರು ಅದೂ ಒಂದೆರಡು ನಿಮಿಷ ಮಾತ್ರ ಅವನು ಒಮ್ಮೆ ಬೇಬಿಯ ತಲೆ ಮತ್ತು ಕೆನ್ನೆ ಸವರಿದ ಅಷ್ಟೇ...
ಲೀಗೆ ಬೇಬಿಯನ್ನು ತಾನು ಎತ್ತಿಕೊಳ್ಳಲಿಲ್ಲವೆಂದು ನಿರಾಸೆ ಆಯಿತು
'ಇನ್ನು ಸ್ವಲ್ಪ ದಿನ ಅಷ್ಟೇ ಮಗು ಮನೆಗೆ ಬಂದ ಮೇಲೆ ನಿಮ್ಮ ಮನೆಗೆ ಒಂದು ದಿನ ಪೂರ್ತಿ ಇರುವಂತೆ ಕರಕೊಂಡು ಬರುತ್ತೇನೆ' ಅಂತ ಜಾನ್ ಅವನ ಭುಜ ತಟ್ಟಿ ಹೇಳಿದ
ಒ.ಕೇ ಅಂತ ತಲೆ ಅಲ್ಲಾಡಿಸಿದ ಲೀ ಕಣ್ಣುಗಳಲ್ಲಿ ನಿಧಾನವಾಗಿ ನೀರು ತುಂಬಿಕೊಳ್ಳುತ್ತಿದ್ದುದನ್ನು ನೋಡಿ 'ಆರ್ ಯೂ ಓ.ಕೇ ಸನ್ ...' ಅಂತ ಟೋಬಿ ಅವನನ್ನು ತಬ್ಬಿಕೊಂಡಳು
ಲೀ ತನ್ನ ಹಿಂಗೈ ನಿಂದ ಕಣ್ಣು ಒರೆಸಿಕೊಳ್ಳುತ್ತಾ 'ನಮಗೆ ಈಗ ಮನೆಯೇ ಇಲ್ಲಾ ಜಾನ್' ಅಂತ ಕಟ್ಟೆ ಒಡೆದು ಬಂದ ದುಃ ಖ ತಡೆಯಲಾರದೇ ಜೋರಾಗಿ ಬಿಕ್ಕಳಿಸಿ ಅಳಲಾರಂಭಿಸಿದ
ನನ್ನ ಕಣ್ಣಂಚೂ ಒದ್ದೆಯಾಯಿತು.
*************
ಸುದ್ದಿ ತಿಳಿದು ಮಾರ್ಟಿನಾ ಅಮ್ಮ ,ಅಪ್ಪ,ತಂಗಿ ಎಲ್ಲರೂ ಬಂದರು
ಜಾನ್ ಅಮ್ಮಸಹ ಧಾವಿಸಿ ಬಂದರು
ಜಾನ್ ನನ್ನು ಮಾರ್ಟೀನಾ ಹತ್ತಿರ ಬಿಟ್ಟು ನಾವು ಟೋಬಿಯ ಕಾರಿನಲ್ಲಿ ವಾಪಸು ಬಂದೆವು
AAA ಗೆ ಕಾಲ್ ಮಾಡಿ ನನ್ನ ಕಾರನ್ನು ರಿಪೇರಿ ಮಾಡಿ ತಂದು ಕೊಡಲು ಹೇಳಿದೆ
ಅವರು Delivery Address ಕೇಳಿದಾಗ ನನಗೆ ಗಂಟಲು ಕಟ್ಟಿದಂತಾಯಿತು
ಪ್ರತಿಯೊಬ್ಬರೂ ಪ್ರತಿ ಹೆಜ್ಜೆಯೂ ನಿನಗೆ ಈಗ ಮನೆ ಇಲ್ಲಾ ಅಂತ ನೆನಪಿಸುತ್ತಿದ್ದಾರೆ ಅನ್ನಿಸಿತು
Hopewell ನ ಅಮ್ಮನ ಮನೆ Address ಕೊಟ್ಟೆ
ಟೋಬಿ ನಮ್ಮನ್ನು ಅಮ್ಮನ ಮನೆಗೆ ಬಿಟ್ಟು ತನ್ನ ಮನೆಗೆ ಹೋದಳು
ಅಪ್ಪ ಜೇಯನ್ನು ಹುಡುಕಿ ಕರೆತಂದಿದ್ದರು
ನಾವೆಲ್ಲಾ ಬಿಸಿ ಶವರ್ ತಗೊಂಡು ಅಮ್ಮ ಮಾಡಿಕೊಟ್ಟ ಬಿಸಿ ಬಿಸಿ ಚಿಕನ್ ಸೂಪ್ ಕುಡಿದು ಸುಧಾರಿಸಿಕೊಂಡೆವು
ಲೀ ರಾತ್ರಿ ಪೂರ್ತಿ ತನ್ನ ಮತ್ತು ಮಾಮ್ ನ ಸಾಹಸದ ಕಥೆಯ ಗ್ರಾಮಾ,ಗ್ರಾಪಾ ,ಜೇ ಎಲ್ಲರಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಹೇಳಿದ್ದೂ ಹೇಳಿದ್ದೆ...
ಅದರಲ್ಲೂ ಆನೆಗಳ ಬಗ್ಗೆ ಹೇಳುವಾಗಲಂತೂ 'ಅವನ ಕಣ್ಣು ಮಿನುಗುವುದು ನೋಡು.." ಅಂತ ಅಮ್ಮ ಹೇಳಿ ನಗುತ್ತಿದ್ದರು
(ಮುಂದುವರೆಯುವುದು...)
Subscribe to:
Post Comments (Atom)
1 comment:
ಮಾಲಾ ಅವರೆ...
ಸಾಲುಸಾಲುಗಳೂ ಮನೆಯಿಲ್ಲದವರನ್ನು ಕಣ್ಣೆದುರು ತಂದು ಭಾವುಕರನಾಗಿಸುತ್ತವೆ.
Post a Comment