Tuesday, September 23, 2008

ಎಲ್ಲಿ ಎಲ್ಲಿ ಎಲ್ಲಿ ನಮ್ಮನೆ...???(ಭಾಗ-ಹದಿನಾಲ್ಕು)

ಮಾರನೇ ದಿನ ಬೆಳಗ್ಗೆ ಅಪ್ಪ ತಮ್ಮ ಕಾರ್ ನಲ್ಲಿ ನಮ್ಮನ್ನು Greensburg ಗೆ ಕರಕೊಂಡು ಹೋದರು.
It was just before everything was locked down for the rescue workers...

ನಮಗೆ ನಮ್ಮ ಮನೆಗೆ(???)ಹೋಗುವುದೇ, ಅಂದರೆ ನಮ್ಮ ಮನೆಯನ್ನು ಹುಡುಕುವುದೇ ಕಷ್ಟವಾಯಿತು
ರಸ್ತೆ ಎಲ್ಲಿ? School ಎಲ್ಲಿ? ಇಲ್ಲಿದ್ದ library ಎಲ್ಲಿ ಹೋಯಿತು...? ಆ Red Tall Building? ಎಂದೆಲ್ಲಾ ಕೇಳಿಕೊಳ್ಳುತ್ತಾ ನಮ್ಮರಸ್ತೆ ಎಲ್ಲಿ ...ನಾನು ಟರ್ನ್ ತೊಗೋತಿದ್ದ ಜಾಗದಲ್ಲಿದ್ದ ದೊಡ್ಡ cidar ಮರ ಕಾಣುತ್ತಿಲ್ಲವಲ್ಲ...ಎಂದೆಲ್ಲಾ ಹೇಳಿಕೊಳ್ಳುತ್ತಾ ಊರಿನ ರಸ್ತೆ(???)ಗಳಲ್ಲಿ ಸುತ್ತಿದೆವು ಯಾವುದೇ Land mark ಗುರುತಿಸಲಾಗುವಂತೆ ಉಳಿದಿರಲಿಲ್ಲ ಮಕ್ಕಳು ಆಸ್ತೆಯಿಂದ ಮನೆಕಟ್ಟಿ ಸಿಂಗರಿಸಿ ಆಡಿ ಬೇಸರ ಬಂದಾಗ ಎಲ್ಲಾ ಕೆಡಿಸಿ ಎದ್ದು ಓಡಿ ಹೋಗುವಂತೆ Tornado ನಮ್ಮ ಮನೆ,ಊರು,ಬದುಕು ಎಲ್ಲವನ್ನೂ ಕೆದರಿ ಕೆಡಿಸಿ ಹೊರಟು ಹೋಗಿತ್ತು

ನೂರಾರು ವರ್ಷ ಹಳೆಯ ಬೃಹತ್ ಮರಗಳು ಬೆತ್ತಲೆ ಯಾಗಿ ಕಣ್ಣೀರು ಕರೆಯುತ್ತಾ ನಿಂತಿದ್ದವು ಎಲೆಗಳಿರಲಿ ತೊಗಟೆ( bark)ಸಹ ಇರಲಿಲ್ಲ The bark was stripped off the trees!!! ಚಿಕ್ಕ ಸುಮಾರಾದ ಮರಗಳು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದವು ನಮ್ಮ ತರವೇ ತಮ್ಮ ಮನೆಗಳನ್ನು ಹುಡುಕಿ ಕೊಂಡು ಬಂದ ಹಲವು ಪರಿಚಿತರು ಸಿಕ್ಕರು ಅಂತೂ ಕೊನೆಗೆ ನಮ್ಮ ಮನೆ ಇದ್ದ ಸ್ಥಳವನ್ನು ಪತ್ತೆ ಹಚ್ಚುವುದರಲ್ಲಿ ಯಶಸ್ವಿ ಯಾದೆವು. Toilet bowl ಒಂದೇ ಏನೂ ಹಾನಿಯಾಗದೆ ತಣ್ನಗೆ ಬಟಾ ಬಯಲಿನಲ್ಲಿ ನಿಂತಿದ್ದು ...
ಸುತ್ತ ಮುತ್ತ ಹುಡುಕಿದಾಗ ಲೀ ಯ ಒಂದೆರಡು ಸಣ್ನ Toy carಗಳು ಸಿಕ್ಕವು
ನನಗೆ ಅಜ್ಜ ತಮ್ಮ ಕೈಯಿಂದ ಕೊರೆದು ಕೊಟ್ಟಿದ್ದ ಮರದ ಹಸುವಿನ ಗೊಂಬೆ ಸಿಕ್ಕಿತು
ಜೇ ಯ ನೀಲಿ ಹ್ಯಾಟ್, ನನ್ನ kitchen ಬಳಿ salt & pepper ಕರಂಡಕ ಗಳು ಸಿಕ್ಕವು
ಅಷ್ಟೇ... ನಮ್ಮ ಉಳಿದ ಆಸ್ತಿ!!!


ಹಿಂದಿನ ದಿನ ನಾನು ಮೈಕೇಲಿನಲ್ಲಿ ಕಾರ್ಟ್ ತುಂಬಾ ತುಂಬಿಸಿ ಕೊಂಡು ತಂದಿದ್ದ ರಾಶಿ ರಾಶಿ ಉಲನ್,Mervynsನಲ್ಲಿ ಕೊಂಡಿದ್ದ ಹಲವಾರು ಜೊತೆ ಬಟ್ಟೆಗಳು ಗುರುತು ಸಹ ಉಳಿಯದಂತೆ ಮಾಯವಾಗಿದ್ದವು.
ನೆನ್ನೆ ಬೆಳಗ್ಗೆ ಒಂದು ವಾರಕ್ಕಾಗುವಷ್ಟು ಬಟ್ಟೆಗಳಿಗೆ Iron ಮಾಡಿಟ್ಟಿದ್ದೆನಲ್ಲವೇ...? ನಗು ಬಂತು...
ಮುಂದಿನ ತಿಂಗಳು credit card bill ಬಂದಾಗ upset ಆಗಬಾರದು ಅಳಬಾರದು ಅಂತ ನಿರ್ಧರಿಸಿಕೊಂಡೆ
ವೀಕೆಂಡು ಆರಾಮವಾಗಿ ಕಳೆಯೋಣವೆಂದು ನೆನ್ನೆಯೇ ವಾರದ ಬಟ್ಟೆಯನ್ನೆಲ್ಲಾ ಒಗೆದು ಓದಲು ಪುಸ್ತಕಗಳನ್ನೂ ತೆಗೆದಿರಿಸಿದ್ದೆ...!
ನಾಳೆಗಳು ಎಷ್ಟು unpredictable ಅಂತ ಪ್ರತಿ ದಿನವೂ ನಮಗೆ ಜೀವನದ ಕಟುಸತ್ಯಗಳು ನೆನಪಿಸುತ್ತಿದ್ದರೂ ಮುಂದಿನ ಹತ್ತು ವರ್ಷಗಳಿಗೂ ಆಗಿ ಮಿಕ್ಕುವಷ್ಟು plan ಮಾಡುತ್ತಿರುತ್ತೀವಲ್ಲಾ ನಾವು..?ಬಹುಷಃ ಈ ಮತ್ತೆ ಮತ್ತೆ ಕನಸು ಕಾಣುವ ಚಪಲವೇ ಜೀವನದ ನಿರಂತರತೆಯನ್ನು ಹಿಡಿದಿಟ್ಟಿರುವ ಶಕ್ತಿಯೋ ಏನೋ...?


ಅವತ್ತಿನ clean-up work ಆದಮೇಲೆ ಇಡೀ ಊರನ್ನು rescue workers ಗೆ ಒಪ್ಪಿಸುವುದಿತ್ತು. ನಾವು ಅಪ್ಪನೊಂದಿಗೆ ವಾಪಸು ಹೊರಟೆವು

ನಮ್ಮ ಒಬ್ಬ neighbor, (in true rural Kansas tradition),ಆ ಇಡೀ ಏರಿಯಾದವರನ್ನೆಲ್ಲಾ garage buffet ಗೆ ತುಂಬಾ ಆತ್ಮೀಯತೆಯಿಂದ ಕರೆದರುತುಂಬಾ ಶ್ರಮ ಪಟ್ಟು ಅವರ ಮನೆಯವರು ತಯಾರಿಸಿದ್ದ ಊಟದಲ್ಲಿ sandwiches, salads, and dessert ಎಲ್ಲಾ ರುಚಿಕಟ್ಟಾಗಿದ್ದವು power ಇಲ್ಲದ ಆ ಸಮಯದಲ್ಲಿ generator ಮೇಲೆ ಕಾಲ ಕಳೆಯುತ್ತಿದ್ದ ಹಲವರಲ್ಲಿ ಒಬ್ಬರಾದ ಅವರು ಪರಿಚಿತರು ಅಪರಿಚಿತರೆನ್ನದೆ ಎಲ್ಲರಿಗೂ ತಮ್ಮ ಬಾಗಿಲು ತೆರೆದಿಟ್ಟು ಹೊಟ್ಟೆ ತುಂಬಿಸುತ್ತಿದ್ದರು ನಮ್ಮ Kansas ಪ್ರದೇಶದ ಪರಂಪರೆಯೇ ಅಂತದ್ದು...ಲೆಕ್ಕಾಚಾರವಿಲ್ಲದ ಸರಳತೆ. ನನ್ನ ಹೃದಯ ತುಂಬಿಬಂತು ಪ್ರತಿಯೊಬ್ಬರದ್ದೂ ಒಂದೊಂದು ಕಥೆ ಎಲ್ಲರೂ ಇನ್ನೊಬ್ಬರ ಕಷ್ಟದಲ್ಲಿ ಕಣ್ಣೀರಾಗುವವರೇ It was true bonding time for everyone...


ಗಿಲ್ಬರ್ಟ್ ಮತ್ತು ಲೀಸಾರ ಸಂಗತಿ ಎಲ್ಲರ ಮನವನ್ನೂ ಕಲಕಿದ್ದು. ಗಿಲ್ ಮತ್ತು ಲೀಸಾ basement ನಲ್ಲಿ ತಾವಿಬ್ಬರೂ safe ಅಂತಲೇ ನಂಬಿದ್ದರು ಆದರೆ ಅವರ ಮನೆ ಹಾರಿಹೋದಾಗ ಗಾಳಿಯ force ಎಷ್ಟು massive ಆಗಿತ್ತೆಂದರೆ ground floor ಕೂಡಾ ಕಳಚಿಕೊಂಡು ಹೊರಟು ಹೋಯಿತು ಅವರಿಬ್ಬರನ್ನು protect ಮಾಡಲು ತಲೆಯ ಮೇಲೇನೂ ಇರಲಿಲ್ಲ twister ಮನೆಯ ಗೋಡೆಯೊಂದನ್ನು ಅಪಾರ ರಭಸದಿಂದ ರಾಚಿದಾಗ ಗಿಲ್ ಅಲ್ಲೇ ಕೊನೆಯುಸಿರೆಳೆದಿದ್ದ. ಲೀಸಾಳನ್ನು hospitalize ಮಾಡಲಾಗಿತ್ತು ತುಂಬಾ ಸಜ್ಜನರಾದ ಈ ದಂಪತಿಗಳಿಂದ ಸಹಾಯ ಪಡೆಯದವರು ಸುತ್ತಮುತ್ತಲಲ್ಲಿ ಯಾರೂ ಇಲ್ಲವೆನ್ನಬೇಕು ಅವರ 18-wheel semi tractor and trailer ಮಕ್ಕಳ ಆಟಸಾಮಾನಿನಂತೆ ನೆಲಕ್ಕೆ ಅಪ್ಪಳಿಸಲ್ಪಟ್ಟು ನುಚ್ಚು ನೂರಾಗಿತ್ತು


ನಮಗೆ ದಾರಿಗಡ್ಡವಾಗಿ ಕೂತ ಆನೆಗಳು ಸರ್ಕಸ್ ಕಂಪನಿಯ ಆನೆಗಳೆಂದೂ ಆಗಲೇ ನನಗೆ ತಿಳಿದದ್ದು.ಅದೂ Francis ಹೇಳಿದಾಗ... ಸರ್ಕಸ್ ಕಂಪನಿಯರು ತಮ್ಮ ಪ್ರಾಣಿಗಳನ್ನು ರೈಲಿನಲ್ಲಿ ಸಾಗಿಸುವಾಗ ತೊಂದರೆಯಾಗಿ ರೈಲು ನಿಲ್ಲಿಸಬೇಕಾಯಿತಂತೆ ಆಗ ಈ ಆನೆಗಳು ತಪ್ಪಿಸಿಕೊಂಡು ಹೊಲದೊಳಗೆ ನುಗ್ಗಿ ಚೆನ್ನಾಗಿ ತಿಂದು ನಮ್ಮ ಮುಂದೆ ಕೂತು ನಿದ್ದೆ ಮಾಡುತ್ತಿದ್ದದ್ದು.ಆನೆಗಳ ಸಂಗತಿ ಬಂದಿದ್ದು ಲೀ ಗೆ ಖುಷಿಯಾಗಿ ಹೋಯಿತು ಸರಿ ಅಲ್ಲಿದ್ದವರಿಗೆಲ್ಲಾ ಲೀ ತನ್ನ ಮತ್ತು ಮಾಮ್ ನ Elephant Experience ಹೇಳಿದ್ದೂ ಹೇಳಿದ್ದೇ...ಎಲ್ಲರೂ ದುಃಖದಿಂದ ಮುದುಡಿರುವಾಗ ಇವನೊಬ್ಬ ಹಲ್ಲು ತೋರಿಸುತ್ತಾ ಕಥೆ ಹೇಳುತ್ತಿದ್ದದ್ದು ಒಂದು ರೀತಿ welcome change ಆಗಿತ್ತು


ಕಾರ್ಲ್ ಮತ್ತು ಡಯಾನಾರದ್ದು ಮತ್ತೊಂದು ಕಥೆ. ಅವರ ಮನೆಪೂರ್ತಿ ಮಾಯವಾಗಿತ್ತು ಅವರಿಬ್ಬರೂ basement ನಲ್ಲಿದ್ದು ಏನೂ ಅಪಾಯವಿಲ್ಲದೆ ಬಚಾವಾಗಿದ್ದರು ಆದರೆ ಅವರ ಮಗ ಅಲೆಕ್ಸ್ ನಾಪತ್ತೆಯಾಗಿದ್ದ ಹೊಸದಾಗಿ ಕೊಂಡಿದ್ದ huge grain cart , washer, dryer,ಮತ್ತು refrigerator ಗಳು ಅವರ ಕನಸುಗಳಂತೆಯೇ ಮುರಿದು ಚೂರು ಚೂರಾಗಿದ್ದವು ಅವರ ಮೂರು pickup Truckಗಳು ಗೋಲಿಗಳಂತೆ ಉರುಳಿ ಮರಗಳಿಗೆ ಹಲವಾರು ಬಾಗಿ ಡಿಕ್ಕಿ ಹೊಡೆದು ನಜ್ಜು ಗುಜ್ಜಾಗಿದ್ದವು


ಕೈ ಕಾಲು ಮುರಿದವರು ಲೆಕ್ಕವಿಲ್ಲದಷ್ಟು ಜನ...

ಆತ್ಮೀಯರನ್ನು ಕಳೆದುಕೊಂಡವರು ಕೆಲವರು ...

ನಮ್ಮಂತೆಯೇ ದಟ್ಟದರಿದ್ರರಾದವರು ಇನ್ನಷ್ಟು ...

ಭಾರವಾದ ಮನ ದಿಂದ ತುಂಬಿಬಂದ ಹೃದಯ ಒತ್ತಿ ಹಿಡಿದು ಮತ್ತೆ ಯಾವಾಗ ನಿಮ್ಮನ್ನು ನೋಡುತ್ತೇವೋ ಗೊತ್ತಿಲ್ಲ ಎಂಬ ನೋವಿನಲ್ಲಿ ಪರಿಚಿರಿಗೆಲ್ಲಾ ಕೈ ಬೀಸಿ ಅಪ್ಪನೊಂದಿಗೆ ನಾವು ಮೂವರೂ ಮರಳಿ ಬಂದೆವು ಸಂಜೆ ಇಡೀ Greensburg ಅನ್ನು lock ಮಾಡಿ rescue workers ಗೆ ಒಪ್ಪಿಸಲಾಯಿತು
(ಮುಂದುವರೆಯುವುದು...)

No comments: