Monday, June 2, 2008

ಸೇಲ್ ಪ್ರೇಮಿ! (ಭಾಗ-ಮೂರು)

ಸಂಜೆ ಆಫೀಸು ಮುಗಿಸಿ ಶಾಲೆಯಿಂದ ಲೀ ಯನ್ನು ಪಿಕ್ ಮಾಡಿಕೊಂಡು ಮೈಕೇಲ್ಸ್ ಗೆ ಹೋದೆವು ಮೈಕೇಲ್ಸ್ ಸ್ವಲ್ಪ ದುಬಾರಿ ಅಂಗಡಿಯಾದರೂ ಮಕ್ಕಳ ಪಾಜೆಕ್ಟ್ ಗೆ ಬೇಕಾದ ಎಲ್ಲ ಸಾಮಾನೂ ಒಂದೇ ಸೂರಿನಡಿ ಸಿಗುತ್ತೆ ಅಂತ ಅಲ್ಲಿಗೆ ಹೋಗಿದ್ದು.ಲೀ ತನಗೆ ಬೇಕಾದ ಸಾಮಾನು ಆರಿಸುವಾಗ ನಾನು ನನ್ನ ಪೇಂಟಿಂಗ್ ಗೆ ಅಂತ ಒಂದೆರಡು ಬ್ರೆಶ್
ತೊಗೊಂಡೆ.ರಾಶಿ ರಾಶಿ ಉಲನ್ ಸೇಲ್ ನಲ್ಲಿ ಹಾಕಿದ್ದರು.(ಈ ಮೇ ಬಿಸಿಲಿನಲ್ಲಿ ಉಲ್ಲನ್ ಕೊಳ್ಳುವವರು ಯಾರು?) ನನ್ನಂಥ ಸೇಲ್ ಪ್ರೇಮಿಗಳು! ಒಂದೆರಡು ಉಂಡೆ ತೊಗೊಳಣಾ ಅಂತ ಶುರು ಮಾಡಿದ್ದು ಕಾರ್ಟ್ ತುಂಬಾ ಆಯಿತು ಈ ಕಲರ್ ಚೆನಾಗಿದೆ..ಇದು ಲೀ ಗೆ ಚೆನಾಗಿರುತ್ತೆ.. ಇದು ಜೇಗೆ... ಇದರಲ್ಲಿ ಮಾರ್ಟೀನಾ ಮಗುವಿಗೆ ಸ್ವೆಟರ್ ಮಾಡುವಾ...ಅಮ್ಮನಿಗೊಂದು ಶಾಲ್ ಮಾಡಿಕೊಡೋಣ...ಪಾಪ ಅಜ್ಜಿ ನನಗೊಸ್ಕರ ಎಷ್ಟೊಂದು ಮಾಡಿದಾಳೆ ಅವಳಿಗೊಂದು ಸ್ಕಾರ್ಫ್ ಆದ್ರೂ ಮಾಡಬೇಕು....ಡ್ಯಾಡ್ ಪಾಪ..." ಅಂತೆಲ್ಲಾ ಯೋಚಿಸಿಕೊಂಡೆ


ಲೀ ತನ್ನ ಸಾಮಾನು ಗಳನ್ನು ತಂದು ನನ್ನ ಕಾರ್ಟ್ ನಲ್ಲಿ ಜಾಗವಿಲ್ಲದೆ ಇನ್ನೊಂದು ಕಾರ್ಟ್ ತಂದು ಅದರಲ್ಲಿ ಹಾಕಿಕೊಂಡು ಅದನ್ನು ದಬ್ಬುತ್ತಾ ತಮಾಶೆ ಮಾಡಿದ. 'ನೀನು ಪ್ರತಿ ವರ್ಷವೂ ಉಲನ್ ತೊಗೋತಿ ಒಂದೂ ಸ್ವೆಟರ್ ಕಂಪ್ಲೀಟ್ ಮಾಡಲ್ಲ ಮನೇಲಿ ಎಷ್ಟೋಂದು ಉಲನ್ ಕೂತಿದೆ ಮತ್ತೆ ತೊಗೊಂಡಿದೀಯಾ... ಎಂಜಾಯ್ ಮಾಮ್..."ಲೀ ಹೇಳಿದ್ದು ನಿಜ ನನಗೂ ನಗು ಬಂತು ಆದರೆ ನನ್ನ ಕಾರ್ಟ್ ನಿಂದ ಒಂದೂ ಉಂಡೆ ವಾಪಸ್ ತೆಗೆಯಲು ನನಗೆ ಮನಸ್ಸು ಬರಲಿಲ್ಲ

ಅಲ್ಲಿಂದ ಎದುರಿಗೆ ಇದ್ದ `ಮರ್ವಿನ್ಸ್'ಗೆ ಹೋದೆವು ಅಲ್ಲಿ ಸ್ಪ್ರಿಂಗ್ ಸೇಲ್ ಇದೆ ತುಂಬಾ ಒಳ್ಳೇದಿದೆ ಅಂತ ಮಾರ್ಟೀನಾ ಮತ್ತು ಟೋಬಿ ಮಾತಾಡಿ ಕೊಳ್ಳುತ್ತಿದ್ದರು ಸರಿ ಹೋಗಿ ನೋಡೇ ಬಿಡುವಾ ಅಂತ. ಬಟ್ಟೇ ಅಂಗಡಿಗೆ ಹೋದರೆ ಕೇಳಬೇಕೆ...?ಅದೂ ನಾನು ಆರು ತಿಂಗಳಿಂದ ಯಾವುದೇ ಬಟ್ಟೆ ಕೊಂಡಿರಲಿಲ್ಲ ಕ್ರಿಸ್ ಮಸ್ ಗೆ ಕೂಡಾ ಕೊಂಡಿರಲಿಲ್ಲ ಸರಿ ಅಲ್ಲೂ ಜೋರಾಗಿ ಬಿಲ್ ಆಯಿತು

ಕಾರಿಗೆ ಬರುವಾಗ ಲೀ ಕೈ ಜಗ್ಗಿದ ' ಅಮ್ಮಾ...ಒಂದೆರಡು ಗಿಡಗಳು...ಅಲ್ಲಿ ಹೋಮ್ ಡಿಪೋ ಅಂತ" ಲೀ ನನ್ನ ಅಜ್ಜಿ ತರಾನೇ ಹೂ ಪ್ರೇಮಿ ನಮ್ಮ ಮನೆಯ ಮುಂದಿನ ಫ್ಲವರ್ ಬೆಡ್ ಅವನೇ ಮೇನ್ ಟೇನ್ ಮಾಡುವುದು ಸರಿ ಹೋಮ್ ಡಿಪೋ ಗೆ ಹೋಗಿ ಬಣ್ಣ ಬಣ್ಣದ ಪಿಟೂನಿಯಾ ಗಳನ್ನೂ ಕಾಸ್ ಮಾಸ್ ಗಳನ್ನೂ ಕೊಂಡೆವು ಆಗಲೇ ನನ್ನ ಕಣ್ಣಿಗೆ ಬಿದ್ದುದು ಕೆಂಪು ಜೆರೇನಿಯಮ್!
(ಮುಂದುವರೆಯುವುದು...)

1 comment:

ಶಾಂತಲಾ ಭಂಡಿ (ಸನ್ನಿಧಿ) said...

ಮಾಲಾ...
ಎಷ್ಟೋ ದಿನಗಳ ಮೇಲೆ ಮತ್ತೊಂದೊಳ್ಳೆಯ ಕಥೆ ಓದುತ್ತಿದ್ದೇನೆ.
ಬೇಗ ಓದಿ ಮುಗಿಸಿಬಿಡಬೇಕೆನ್ನುವಷ್ಟು ಹಂಬಲ ತರುವ ಸಾಲುಗಳು, ನನಗಾಗಿಯೇ ಯಾರೋ ಬರೆದಂತೆ.
ಬೇಗ ಮುಂದಿನ ಹಾಳೆಗಳ ತಿರುವಿಸಿಕೊಡಿ, ನನ್ನ ಪಾಡಿಗೆ ನಾ ಓದಿಕೊಳ್ಳುತ್ತೇನೆ.