Wednesday, June 11, 2008

ಬ್ಲೂ ಬೆರಿ ಪ್ಯಾನ್ ಕೇಕ್ ಮತ್ತು ಮೇಪಲ್ ಸಿರಪ್ (ಭಾಗ-ಐದು)

(ಇಗೊಳ್ಳಿ ಶಾಂತಲಾ... ಪುಟ ತಿರುಗಿಸಿದ್ದೇನೆ... ನಿಮಗಾಗಿ...)


ಮನೆಗೆ ಬಂದಾಗ ಏಳು.ಕಾರಿನಿಂದ ಇಳಿದು ನನ್ನ ಸೆಲ್ ಪೋನ್ ನೋಡಿದಾಗ ಮಾರ್ಟೀನಾಳೀಂದ ಮಿಸ್ಸ್ಡ್ ಕಾಲ್ ಇದ್ದುದು ಗೊತ್ತಾಯಿತು ಜಾನ್ ಏಳು ಗಂಟೆಗೆ ಗೌನ್ ಒಯ್ಯಲು ಮನೆಗೆ ಬರುತ್ತಾನೆಂದು ಮೆಸೇಜ್ ಬಿಟ್ಟಿದ್ದಳು ಗಡಬಡಿಸಿ ಬಾಗಿಲಿಗೆ ಬಂದಾಗ ಜೇ ಬಾಗಿಲಲ್ಲೇ ಕಾಯುತ್ತಿದ್ದ.ಅವನಿವತ್ತು ಬೆಳಗ್ಗೆ ಮನೆಯ ಕೀ ಒಯ್ಯಲು ಮರೆತಿದ್ದ. ಬೆಳಗ್ಗೆ ಅವನು ಕೀ ಮರೆತದ್ದನ್ನು ಡ್ರಾಪ್ ಮಾಡುವಾಗ ಹೇಳಿದ್ದನಾದರೂ ನಾನು ಶಾಪಿಂಗ್ ನಲ್ಲಿ ಮಗ್ನಳಾಗಿ ಅವನು ಬಾಗಲಲ್ಲಿ ಕಾಯುತ್ತಿರ ಬಹುದೆಂದು ಮರೆತು ಬಿಟ್ಟಿದ್ದೆ. ಜಾನ್ ಬಂದಿದ್ದನೇ...? ಕೇಳಿದೆ ಅವನು ಇಲ್ಲಾ ಅಂತ ತಲೆ ಆಡಿಸುತ್ತಾ ತನ್ನ ರೂಮಿಗೆ ಓಡಿದ ಲೀ ಕಲರ್ ಪೇಪರ್ ಗಳನ್ನು ಹಿಡಿದು ಕೂತ

ನಾನು ನನ್ನ ಗೌನ್ ಅನ್ನು ಓಕ್ ಚೆಸ್ಟ್ ನಿಂ ದ ತೆಗೆದು ಬಟರ್ ಪೇಪರ್ ಸರಿಯಾಗಿ ಸುತ್ತಿ ಜಾನ್ ಗೆ ಕೊಡಲು ಸಿದ್ದವಾಗಿಟ್ಟೆ
ಕೆಂಪು ಜೆರೇನಿಯಮ್ ತೂಗು ಬುಟ್ಟಿಗಳನ್ನು ಅಂಗಳದಲ್ಲಿ ಸಾಲಾಗಿ ತೂಗು ಹಾಕಿ ವಿವಿಧ ಕೋನಗಳಿಂದ ಅದರ ಅಂದವನ್ನು ನಿರುಕಿಸುತ್ತಿದ್ದೆ ಒಮ್ಮೆ ಕೆಂಪು ಮಿಂಚು ಹುಳುಗಳ ಸಮೂಹದಂತೆ, ಇನ್ನೊಮ್ಮೆ ಹೊಳೆವ ಚಿಟ್ಟೇಗಳ ಸಡಗರದಂತೆ ಮತ್ತೊಮ್ಮೆ ಬೆಂಕಿಯ ಕೆಂಪು ನಾಲಿಗೆಗಳಂತೆ ಕಾಣುತ್ತಿದ್ದ ಅವುಗಳನ್ನು ನಾನು ನೋಡುತ್ತಾ ನಿಂತಿರುವಾಗ ಜೇ ಡಿನ್ನರ್ ಅವನ ಸ್ನೇಹಿತನ ಮನೆಯಲ್ಲೇ ಮಾಡುತ್ತೇನೆಂದು ಹೇಳುತ್ತಾ ಅವನ ಬ್ಯಾಗ್ ನಲ್ಲಿ ಸಾಮಾನು ಗಳನ್ನು ತುರುಕಿಕೊಳ್ಳೂತ್ತಾ ಹೊರಗೋಡಿದ


ರಾತ್ರಿ ಡಿನರ್ ಗೆ ನಾನು ಲೀ ಇಬ್ಬರೇ... ಅವನೇನೇನು ತಿನ್ನುತ್ತಾನೆಂದು ಕೇಳಿದ್ದಕ್ಕೆ ಪ್ಯಾನ್ ಕೇಕ್ ಅಂತ ಉತ್ತರ ಬಂತು. ಲೀಗೆ ಸ್ವಲ್ಪ ಸ್ವೀಟ್ ಟೂಥ್ ನನ್ನ ಥರ! ನಗುಬಂತು ಹಿಟ್ಟು,ಬಟರ್ ಮಿಲ್ಕ್ ಬೌಲ್ ನಲ್ಲಿ ಕಲೆಸಿದೆ ಜೊತೆಗೆ ಮೊಟ್ಟೆ ,ಚೂರು ಬೇಕಿಂಗ್ ಪೌಡರ್ ಹಾಕಿ ಬೀಟ್ ಮಾಡಿದೆ ಮೃದುವಾದ ಪ್ಯಾನ್ ಕೇಕ್ ಗಳು ತಟ್ಟೆ ಗಿಳಿಸಿ ಮೇಪಲ್ ಸಿರಪ್ ಅದರ ಮೇಲೆ ಹೊಯ್ಯುತ್ತಾ ಲೀ... ಅಂತ ಕೂಗಿದೆ ಬಂಗಾರ ಕಂದು ಬಣ್ಣದ ಮಂದವಾದ ಮೇಪಲ್ ಸಿರಪ್ ನ ಸುವಾಸನೆ ಪ್ಯಾನ್ ಕೇಕ್ ನ ಹಬೆಯೊಂದಿಗೆ ಸೇರಿಕೊಂಡು ಸುತ್ತೆಲ್ಲಾ ಬೆಚ್ಚನೆಯ ನೆಮ್ಮದಿಯ ಫೀಲಿಂಗ್ ಪಸರಿಸಿತು...


ಯಾರೋ ಬಂದ ಹಾಗಾಯಿತಲ್ಲಾ...ಅಂದು ಕೊಳ್ಳೂತ್ತಾ ಮುಂಬಾಗಿಲಿಗೆ ಬಂದೆ ಜಾನ್ ಇರಬೇಕು...ಆದರೆ ಬಂದಿದ್ದು ಮಾರ್ಟೀನಾ...!ಅರೇ...ಮಾರ್ಟೀನಾ..ಬಾ..ಬಾ..ಜಾನ್ ಬರಲಿಲ್ಲವೇ...? ಅಂದೆ ಅದಕ್ಕವಳು `ಇಲ್ಲ... ಜಾನ್ ಗೆ ಏನೋ ಅರ್ಜೆಂಟ್ ಕೆಲಸ ಇದೆ ಅಂತ ಅವನ ಲ್ಯಾಬ್ ನಿಂದ ಕಾಲ್ ಬಂತು ಹೋದ'ಅಂದಳು ನಾನು ಅವಳ ಕೈಗಿತ್ತ ಗೌನ್ ಸ್ವಲ್ಪವೇ ಬಿಡಿಸಿ ನೋಡಿ ವಾವ್ ಎಷ್ಟು ಸುಂದರ ವಾಗಿದೆ ಅಂತ ಕಣ್ಣರಳಿಸಿ ನಕ್ಕಳುಓಕೇ...ನಾನಿನ್ನು ಮನೆಗೆ ಹೋಗಲು ನಲವತ್ತು ಮೈಲಿ ಡ್ರೈವ್ ಮಾಡಬೇಕಲ್ಲಾ ...ನಾಳೆ ನಿನ್ನ ನೋಡ್ತೇನೆ ಅಂತ ಹೊರಟವಳು ಲೀ ಯನ್ನು ನೋಡಿ `ಹೇ ಸ್ವೀಟ್ ಹಾರ್ಟ್... ಹೌ ಆರ್ ಯೂ..." ಅಂತ ನಿಂತಳು.

ವೈ ಡೋಂನ್ಟ್ ಯೂ ಹ್ಯಾವ್ ಪ್ಯಾನ್ ಕೇಕ್ ವಿತ್ ಮೀ ಅಂತ ಲೀ ಅವಳನ್ನು ಪಕ್ಕ ಕೂರಿಸಿಕೊಂಡು `ಮಾಮ್ ಮಾರ್ಟೀನಾಗೆ ಸ್ಪೆಷಲ್ ಬ್ಲೂಬೆರಿ ಪ್ಯಾನ್ ಕೇಕ್ ಅಂತ ಆರ್ಡರ್ ಕೊಟ್ಟ ನಾನು ಪ್ರಿಜ್ ನಿಂದ ಬ್ಲೂಬೆರಿ ತೆಗೆದು ಹಿಟ್ಟಿನಲ್ಲಿ ಬೆರೆಸಿ ಹುಯ್ಯುವಾಗ ಲೀ ಗಂಭೀರವಾಗಿ ಬ್ಲೂಬೆರಿ ಅವಳ ಹೊಟ್ಟೆಯಲ್ಲಿರುವ ಮಗುವಿಗೆ ಎಷ್ಟು ಒಳ್ಳೆಯದೆಂದು ವಿವರಿಸುತಿದ್ದುದ್ದನ್ನು ನೋಡಿ ನಗು ಬಂತಾದರೂ ಕಷ್ಟ ಪಟ್ಟು ತಡಕೊಂಡೆ.ಲೀ ಹೇಳುತ್ತಿದ್ದ 'ಲುಕ್ ಮಾರ್ಟೀನಾ...ಇದರಲ್ಲಿ ಬ್ರೇನ್ ಚೆನ್ನಾಗಿ ಬೆಳೆಯಲು ಬೇಕಾದ ಅಂಶಗಳಿವೆ ನಿನ್ನಮಗಳು ಬುದ್ದಿವಂತೆ ಆಗಬೇಕೋ ಬೇಡವೋ...? ಬ್ಲೂಬೆರಿಯಲ್ಲಿ ಫ್ರೀ ರಾಡಿಕಲ್ಸ್ ಅನ್ನು ಫೈಟ್ ಮಾಡಲು ಬೇಕಾದ ಅಂಶಗಳೂ ಇವೆ ಈಗ ನಿನ್ನ ಹೆಲ್ತ್ ಗೆ ಒಳ್ಳೆಯದು...ಸೋ ಗಲಾಟೆ ಮಾಡದೆ ಪೂರ್ತಿ ತಿನ್ನು ನೀನು ಫಿನಿಶ್ ಮಾಡಿದ್ರೆ ನಿನಗೊಂದು ಚಾಕ್ಲೆಟ್ ಚಿಪ್ ಕುಕೀ ಕೊಡ್ತೇನೆ...' ಅಂತ ನನ್ನ ಸ್ಟೈಲ್ ಕಾಪಿ ಮಾಡುತ್ತಾ ನನ್ನೆಡೆಗೆ ನೋಡಿ ನಕ್ಕ ಲೀ. ಮಾರ್ಟೀನಾ ಅಷ್ಟೋತ್ತು ತಡಕೊಂಡಿದ್ದ ನಗು ಹೊರಬಿಟ್ಟಳು


ನಾನು ಇಬ್ಬರಿಗೂ ಒಂದೊಂದು ಬ್ಲೂಬೆರಿ ಪ್ಯಾನ್ ಕೇಕ್ ಹಾಕಿ ಅದರ ಮೇಲೆ ಮೇಪಲ್ ಸಿರಪ್ ಹುಯ್ದೆ. ಮಾರ್ಟೀನಾ `ಓ..ನೋ..ಮೇಪಲ್ ಸಿರಪ್ ಫಾರ್ ಮೀ..."ಅಂತ ಕೂಗಿದಳು ಅದಕ್ಕೆ ಲೀ `ಮೇಪಲ್ ಸಿರಪ್ ನಲ್ಲಿ ಏನೇನು ಇರತ್ತೆ ಅಂತ ನನಗಷ್ಟು ಗೊತ್ತಿಲ್ಲ ಆದ್ರೆ ಐ ಕ್ಯಾನ್ ಸೇ ಇಟ್ಸ್ ರಿಯಲ್ ಗುಡ್...ಮಾಮ್ ನೀನು ಹೇಳು ಇದರಲ್ಲೇನೇನು ಇದೆ ಅಂದ"

ಮೇಪಲ್ ಸಿರಪ್ ನಲ್ಲಿ ಕ್ಯಾಲ್ಸಿಯಂ,ಐರನ್,ಥೈಯಾಮಿನ್ ಇದೆ ಸಾಕಷ್ಟು ಫಾಸ್ಸ್ಪರಸ್ ಕೂಡಾ ಇದೆ ನನಗೆ ಅದಕ್ಕಿಂಥಾ ಹೆಚ್ಚಾಗಿ ಮೇಪಲ್ ಸಿರಪ್ ನೊಂದಿಗೆ ಭಾವನಾತ್ಮಕ ಸಂಬಂಧ ಇದೆ ಎಂದೆ

ಇಬ್ಬರೂ ಕಣ್ಣರಳಿಸಿದರು, ನಾನು ಸ್ವಪ್ನದಲ್ಲೆಂಬಂತೆ ಹೇಳತೊಡಗಿದೆ...



ವಿಸ್ಕಾನ್ಸಿನ್ ನಲ್ಲಿ ಅಜ್ಜನ ಅಪ್ಪನಿಗೆ 'ಶುಗರ್ ಬುಶ್'ಅಂದ್ರೆ ಮೇಪಲ್ ಮರಗಳ ಫಾರ್ಮ್ ಇತ್ತು ಚಳಿ ಸ್ವಲ್ಪವೇ ಕಡಿಮೆಯಾಗಿ ಬೆಚ್ಚನೆ ಹಗಲು ರಾತ್ರಿ ತಂಪಾಗುವಂಥ ಹವಾ ಬಂದಾಗ, ಫೆಬ್ರವರಿ ಸುಮಾರಿಗೆ ಅಜ್ಜ ಮತ್ತವನ ಸೋದರರೆ ಲ್ಲಾ ಅಪ್ಪನ ಜೊತೆ ಪ್ರತಿ ಮರಕ್ಕೂ ತೂತು ಕೊರೆದು ಮರದ ಪುಟ್ಟ ಕೊಳವೆ ಸಿಕ್ಕಿಸುತ್ತಿದ್ದರು ಆ ಕೊಳವೆಯಿಂದ ತೊಟ್ಟಿಕ್ಕುವ ಮೇಪಲ್ ರಸ ಒಟ್ಟಾಗಿಸಲು ಪ್ರತಿ ಮರದ ಬುಡದಲ್ಲೂ ಒಂದೊಂದು ಮರದ ಬಕೆಟ್ ಇಡುತ್ತಿದ್ದರು ಪ್ರತಿ ಬೆಳಗ್ಗೆ ಹೊಸ ಬಕೆಟ್ ಇಟ್ಟು ಆವರೆಗೆ ಸುರಿದ ರಸವೆಲ್ಲಾ ತಂದು ಒಂದು ದೊಡ್ಡ ಹಂಡೆಗೆ ಹುಯ್ಯುವುದು ಹೀಗೆ ರಸ ಸಾಕಷ್ಟು ಸೇರಿದ ಮೇಲೆ ಅದನ್ನು ಶುಗರ್ ಹೌಸ್ ನಲ್ಲಿ ಕಾಯಿಸಿ ಮೇಪಲ್ ಸಿರಪ್,ಮೇಪಲ್ ಬಟರ್,ಮೇಪಲ್ ಕ್ರೀಮ್,ಕೊನೆಗೆ ಮೇಪಲ್ ಟಾಫಿ ಸಹ ಮಾಡುತ್ತಿದ್ದರು ಅಂದು ಕುಟುಂಬದವರೆಲ್ಲಾ ಒಂದಾಗಿ ಸೇರಿ ಹಬ್ಬದಂತೆ ಸೆಲೆಬ್ರೇಟ್ ಮಾಡುತ್ತಿದ್ದರು ನೃತ್ಯ ಕೂಟಗಳೂ ನಗೆ ಚಟಾಕಿಗಳೂ ಇರುತ್ತಿದ್ದವು....ಅಜ್ಜಿ ಹೇಳುತ್ತಾಳೆ ಅವು ಅವಳ ಬದುಕಿನ ಬಂಗಾರದ ದಿನಗಳು ಅಂತ....


ಮನಸ್ಸೇಕೋ ಭಾರವಾಗಿತ್ತು...

ಹೊರಗೆ ಗಾಳಿಯೂ ಯಾಕೋ ಭಾರ ಭಾರವಾಗಿದೆ ಅನ್ನಿಸಿತು ನನ್ನದೇನೋ ಭ್ರಮೆ ಅಂತ ತಲೆ ಕೊಡವಿದೆ
ಮಾರ್ಟೀನಾ ಬ್ಲೂಬೆರಿ ಪ್ಯಾನ್ ಕೇಕ್ ಗಾಗಿ ಥ್ಯಾಂಕ್ಸ್ ಹೇಳುತ್ತಾ ನಾನು ಕೊಟ್ಟ ಗೌನ್ ಎದೆಗವಚಿಕೊಂಡು `ಓ ಇಟ್ಸ್ ಆಲ್ರೆಡಿ ಲೇಟ್...ಅಂತ ಪಿಸುಗುಟ್ಟುತ್ತಾ ಹೊರಟಳು
ನಾನು 'ಟೇಕ್ ಕೇರ್‍ ಹನಿ' ಅಂತ ಕೂಗಿ ಕೈ ಬೀಸಿದೆ


(ಮುಂದುವರೆಯುವುದು...)

1 comment:

ಶಾಂತಲಾ ಭಂಡಿ (ಸನ್ನಿಧಿ) said...

ಮಾಲಾ...
ಓದುತ್ತಿದ್ದೇನೆ ಇಷ್ಟವಾಗ್ತಿದೆ ತುಂಬಾ. ಧನ್ಯವಾದ ನಿಮಗೆ ಹಾಗೂ ಒಂದಷ್ಟು ಪ್ರೀತಿ ಮುಷ್ಠಿಯೊಳಗೆ. ಮುಷ್ಠಿ ಮುಚ್ಚಳ ತೆರೆದು ತಗೋಳ್ಳಿ. ಎಲ್ಲ ನಿಮಗೇನೆ.